ಬೇಸಿಗೆಯಲ್ಲಿ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಕಲ್ಲಂಗಡಿ ಬರುತ್ತದೆ. ಇದರ ಬೆಳೆಯುವು ಕಡಿಮೆ ಮತ್ತು ಇದರ ರುಚಿಗೆ ಮಾರು ಹೋಗುವವರೇ ಇಲ್ಲ. ಆದರೆ ನಮ್ಮ ಜನರಿಗೆ ಕಲ್ಲಂಗಡಿ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಇನ್ದು ನಾವು ನಿಮಗೆ ಈ ಹಣ್ಣಿನಿಂದ ನಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ನೋಡೋಣ ಬನ್ನಿ..
ಪುರುಷರಿಗೆ ರಾಮಬಾಣ ಕಲ್ಲಂಗಡಿ ಹಣ್ಣು:
ಪುರುಷರಿಗೆ ಉಂಟಾಗುವ ಸಮಸ್ಯೆಗಳನ್ನು ದೂರು ಮಾಡಲು ಕಲ್ಲಂಗಡಿ(watermelon) ತುಂಬಾ ಪ್ರಯೋಜನಕಾರಿಯಾಗಿದೆ. ಪುರುಷರಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕಲ್ಲಂಗಡಿ ಬಹಳ ಉತ್ತಮ ಹಣ್ಣಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ದೇಹದ ಮೇಲೆ ಪರಿಣಾಮವು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಔಷಧಿಯಿಂದ ಉಂಟಾಗುತ್ತದೆ, ಆದರೆ ಇದರ ಪರಿಣಾಮವು ಕಲ್ಲಂಗಡಿ ಸೇವನೆಯಿಂದ ಕೂಡಿದೆ.
ಇದನ್ನೂ ಓದಿ : Banana For Weight Loss: ಸುಲಭವಾಗಿ ತೂಕ ಇಳಿಸಲು ಈ ರೀತಿಯ ಬಾಳೆಹಣ್ಣು ಬಳಸಿ
ಕಲ್ಲಂಗಡಿಯಲ್ಲಿವೆ ಈ ವಿಶೇಷ ಪ್ರೋಟೀನ್:
ಸಂಶೋಧನೆಯ ಪ್ರಕಾರ, ಬೇಸಿಗೆಯಲ್ಲಿ ಕಲ್ಲಂಗಡಿ ಸೇವಿಸಲು ಕಾರಣ ಇದರಲ್ಲಿ ಸಿಟ್ರಲ್ಲಿನ್ ಎಂಬ ಅಂಶದ ನೈಸರ್ಗಿಕ ಮೂಲವಾಗಿದೆ. ಇದು ಒಂದು ರೀತಿಯ ಪ್ರೋಟೀನ್(Protein), ಇದು ಪುರುಷರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ನಮ್ಮ ದೇಹವು ಈ ಸಿಟ್ರುಲ್ಲಿನ್ ಅನ್ನು ಮತ್ತೊಂದು ಅಮೈನೊ ಆಸಿಡ್ ಅರ್ಜಿನೈನ್ ಆಗಿ ಪರಿವರ್ತಿಸುತ್ತದೆ. ಈ ಅರ್ಜಿನೈನ್ ನಂತರ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ, ಇದು ನಮ್ಮ ದೇಹದ ಅಪಧಮನಿಗಳನ್ನು ಅಗಲಗೊಳಿಸುತ್ತದೆ ಮತ್ತು ಅವು ಉತ್ತಮ ರಕ್ತ ಚಲನೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : RT-PCR ಟೆಸ್ಟ್ ಗೆ ಯಾರು- ಯಾವಾಗ ಒಳಗಾಗಬೇಕು? ಇಲ್ಲಿದೆ ಮಾಹಿತಿ
ಕಲ್ಲಂಗಡಿ ರಸ ಕುಡಿಯುವುದು ತುಂಬಾ ಪ್ರಯೋಜನಕಾರಿ:
ಕಲ್ಲಂಗಡಿಯಲ್ಲಿ ಹೆಚ್ಚಿನ ಅಂಶವು ನೀರನ್ನು ಹೊಂದಿರುತ್ತದೆ. ಕಲ್ಲಂಗಡಿ ರಸವನ್ನು ತೆಗೆದಾಗ ಸಿಟ್ರುಲ್ಲಿನ್ ಹೆಚ್ಚು ಉತ್ತಮವಾಗುತ್ತದೆ. ಆದ್ದರಿಂದ ಪುರುಷರು(Men) ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಪುರುಷರು ಕಲ್ಲಂಗಡಿ ರಸ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನ ಪಡೆಯಬಹುದು.
ಇದನ್ನೂ ಓದಿ : ಸೂಪ್, ಜ್ಯೂಸ್ ಬದಲಿಗೆ ಒಂದೇ ಒಂದು ಕಪ್ ತಿಳಿ ಸಾರು ಕುಡಿಯಿರಿ.! ಬದಲಾವಣೆ ನೋಡಿ
ಕಲ್ಲಂಗಡಿ ರಸದಿಂದ ತಯಾರಿಸಿ ಶೇಕ್:
ಶೇಕ್ ತಯಾರಿಸಲು 50 ಗ್ರಾಂ ವಾಲ್ ನೆಟ್ಸ್, ಬಾಳೆಹಣ್ಣು, ಸ್ವಲ್ಪ ಶುಂಠಿ, ಎರಡು ಚಮಚ ಡಾರ್ಕ್ ಚಾಕೊಲೇಟ್(Dark Chocolate) ಮತ್ತು 8-10 ಒಣದ್ರಾಕ್ಷಿ, ಒಂದು ಲೋಟ ಕಲ್ಲಂಗಡಿ ರಸದಲ್ಲಿ ಬೆರೆಸಿ ಮಿಕ್ಸಿಯಲ್ಲಿ ಹಾಕಿ ನಂತ್ರ ಕುಡಿಯಿರಿ. ಈ ಶೇಕ್ ಕುಡಿಯುವುದರಿಂದ ಪುರುಷರಿಗೆ ಅದ್ಭುತ ಲಾಭವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.