Vastu Tips For Parrot: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾಸ್ತು ಸರಿಯಿಲ್ಲದಿದ್ದರೆ ಕುಟುಂಬದ ಸದಸ್ಯರ ಸುಖ, ಶಾಂತಿ, ಪ್ರಗತಿ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ವ್ಯಕ್ತಿಯ ಮನೆಯಲ್ಲಿ ವೈಷಮ್ಯ ಮತ್ತು ಸಂಘರ್ಷದ ಪರಿಸ್ಥಿತಿ ಉಂಟಾಗುತ್ತದೆ. ಇಷ್ಟು ಮಾತ್ರವಲ್ಲದೆ ಹಲವಾರು ಸಮಸ್ಯೆಗಳು ವ್ಯಕ್ತಿಯನ್ನು ಸುತ್ತುವರೆದಿರುತ್ತವೆ. ಸುತ್ತಮುತ್ತಲಿನ ನಕಾರಾತ್ಮಕ ವಾತಾವರಣವು ವ್ಯಕ್ತಿಯೊಳಗೆ ನಕಾರಾತ್ಮಕತೆಯನ್ನು ತುಂಬುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಾಸ್ತು ಶಾಸ್ತ್ರದಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ.  ಇದನ್ನು ಪ್ರಯತ್ನಿಸುವ ಮೂಲಕ ವ್ಯಕ್ತಿಯು ಈ ಸಮಸ್ಯೆಗಳನ್ನು ತೊಡೆದುಹಾಕಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Astro Tips: ಮಂಗಳವಾರ-ಶನಿವಾರ ರಾತ್ರಿ ಈ ಕೆಲಸ ಮಾಡಿದ್ರೆ ಹನುಮಂತನ ಕೃಪೆಯಿಂದ ನಿಮ್ಮ ಆಸೆ ಈಡೇರುತ್ತದೆ


ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಣಿಯನ್ನು ಸಾಕುವುದರಿಂದ ನಕಾರಾತ್ಮಕ ಶಕ್ತಿ ತನ್ನತ್ತ ಸೆಳೆಯುತ್ತದೆ. ಮನೆಗೆ ಒಳಿತನ್ನು ಮಾಡುತ್ತದೆ ಎಂದು ಹೇಳಲಾಗುತ್ತದೆ ಇನ್ನು ಗಿಳಿಯ ಚಿತ್ರವನ್ನು ಹಾಕುವುದು ಸಹ ಲಾಭದಾಯಕವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಗಿಳಿಯ ಚಿತ್ರವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಸಮಸ್ಯೆಗಳು ಬಹಳಷ್ಟು ದೂರವಿರುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ಮನೆಯಲ್ಲಿ ಗಿಳಿಯ ಚಿತ್ರ ಹಾಕಿದರೆ ಸುಖ-ಸಮೃದ್ಧಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗಿಳಿಯ ಫೋಟೊ ಹಾಕುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.


ಮನೆಯಲ್ಲಿ ಗಿಳಿಯ ಚಿತ್ರವನ್ನು ಇರಿಸುವಾಗ ಕಾಳಜಿ ವಹಿಸಿ:


ಒಬ್ಬ ವ್ಯಕ್ತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮನೆಯಲ್ಲಿ ಗಿಳಿಯ ಚಿತ್ರ ಅಥವಾ ವಿಗ್ರಹವನ್ನು ಇರಿಸುವುದರಿಂದ ವ್ಯಕ್ತಿಗೆ ಪ್ರಯೋಜನವಾಗುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ.


ನಿಮ್ಮ ಮಗು ಅಧ್ಯಯನದಲ್ಲಿ ಆಸಕ್ತಿ ಹೊಂದಿಲ್ಲದಿದ್ದರೆ ಅಥವಾ ಮನಸ್ಸು ಚಂಚಲವಾಗಿದ್ದರೆ, ಮಗುವಿನ ಕೋಣೆಯ ಉತ್ತರ ದಿಕ್ಕಿನಲ್ಲಿ ಹಸಿರು ಗಿಳಿಯ ಚಿತ್ರವನ್ನು ಇರಿಸಿ. ಅಲ್ಲದೆ, ಅಧ್ಯಯನ ಮಾಡುವಾಗ ಮಗುವಿನ ಮುಖವು ಉತ್ತರದ ಕಡೆಗೆ ಇರುವಂತೆ ವಿಶೇಷ ಕಾಳಜಿ ವಹಿಸಿ. ಇದು ಮಗುವಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಸಂಬಂಧದಲ್ಲಿ ಪ್ರೀತಿಯ ಕೊರತೆಯಿದ್ದರೆ ಮತ್ತು ದೂರ ಹೆಚ್ಚಾಗುತ್ತಿದ್ದರೆ ಮಲಗುವ ಕೋಣೆಯಲ್ಲಿ ಗಿಳಿಯ ಚಿತ್ರ ಅಥವಾ ಪ್ರತಿಮೆಯನ್ನು ಇರಿಸಿ. ಇದು ಇಬ್ಬರ ಸಂಬಂಧದಲ್ಲಿ ಮಧುರತೆಯನ್ನು ತರುತ್ತದೆ.


ನೀವು ಮನೆಯ ಉತ್ತರ ದಿಕ್ಕನ್ನು ದೋಷರಹಿತವಾಗಿ ಇರಿಸಲು ಬಯಸಿದರೆ, ಈ ದಿಕ್ಕಿನಲ್ಲಿ ಹಸಿರು ಗಿಳಿಯ ಚಿತ್ರವನ್ನು ಇರಿಸಿ. ಇದರ ಪರಿಣಾಮ ವ್ಯಕ್ತಿಯು ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಾನೆ.


ಮನೆಯಲ್ಲಿ ಗಿಳಿಯ ಚಿತ್ರ ಹಾಕುವುದರಿಂದ ಮನೆಯವರಲ್ಲಿ ಪ್ರೀತಿ ಹೆಚ್ಚುತ್ತದೆ ಮತ್ತು ವ್ಯಕ್ತಿಯಲ್ಲಿ ವಿರಹ ಇರುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.


ವಾಸ್ತು ತಜ್ಞರ ಪ್ರಕಾರ, ನಿಮ್ಮ ಮನೆಯಲ್ಲಿ ಹತಾಶೆ ಮತ್ತು ಬಡತನ ಸದಾ ನೆಲೆಸಿದ್ದರೆ, ಉತ್ತರ ಭಾಗದ ಡ್ರಾಯಿಂಗ್ ರೂಮ್‌ನಲ್ಲಿ ಗಿಳಿಯ ಚಿತ್ರವನ್ನು ಇಡಬೇಕು. ಇದರಿಂದ ವಿಶೇಷ ಫಲಿತಾಂಶಗಳು ಸಿಗುತ್ತವೆ. ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.


ವಾಸ್ತು ಶಾಸ್ತ್ರದ ಪ್ರಕಾರ, ವರ್ಣರಂಜಿತ ಗಿಳಿಯ ಚಿತ್ರವು ಮನೆಯಲ್ಲಿ ಐದು ಅಂಶಗಳ ಸಮತೋಲನವನ್ನು ಸ್ಥಾಪಿಸುತ್ತದೆ. ಮನೆಯಲ್ಲಿ ಗಿಳಿಯ ಚಿತ್ರ ಅಥವಾ ಫೋಟೋವನ್ನು ಹಾಕುವುದು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: Kuber Yantra Niyam: ಕೆಲವೇ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿಗೆ ಅಂತ್ಯ ಹಾಡಲು ಈ ಉಪಾಯ ಅನುಸರಿಸಿ


(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.