ಹೀಗೆ ಮಾಡಿದರೆ ಬಹಳ ಸಮಯದವರೆಗೆ ಟೊಮ್ಯಾಟೋ ಕೆಡುವುದಿಲ್ಲ
Tips To Store Tomatoes:ಟೊಮೇಟೊ ಒಂದು ವಿಶೇಷ ತರಕಾರಿಯಾಗಿರುವುದರಿಂದ, ಅದನ್ನು ಸಂಗ್ರಹಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಏಕೆಂದರೆ ಟೊಮ್ಯಾಟೋ ಹಣ್ಣನ್ನು ಸರಿಯಾಗಿ ಸ್ಟೋರ್ ಮಾಡದೇ ಹೋದರೆ ಬೇಗನೆ ಹಾಳಾಗುತ್ತದೆ.
Tips To Store Tomatoes : ಟೊಮ್ಯಾಟೋಗಳನ್ನು ಬಹುತೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಟೊಮ್ಯಾಟೋ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವುಗಳನ್ನು ಅಡುಗೆಯಲ್ಲಿ ಮಾತ್ರವಲ್ಲದೆ ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು, ಬರ್ಗರ್‌ಗಳು ಮತ್ತು ಪಿಜ್ಜಾಗಳಲ್ಲಿಯೂ ಬಳಸಲಾಗುತ್ತದೆ. ಟೊಮೇಟೊ ಒಂದು ವಿಶೇಷ ತರಕಾರಿಯಾಗಿರುವುದರಿಂದ, ಅದನ್ನು ಸಂಗ್ರಹಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಏಕೆಂದರೆ ಟೊಮ್ಯಾಟೋ ಹಣ್ಣನ್ನು ಸರಿಯಾಗಿ ಸ್ಟೋರ್ ಮಾಡದೇ ಹೋದರೆ ಬೇಗನೆ ಹಾಳಾಗುತ್ತದೆ. ಹಾಗಾದರೆ ಟೊಮ್ಯಾಟೋ ಹಣ್ಣನ್ನು ಬಹಳ ದಿನಗಳವರೆಗೆ ಕೆಡದಂತೆ ಕಾಪಾಡಲು ಏನು ಮಾಡಬೇಕು ಎನ್ನುವ ಬಗ್ಗೆ ವಿಸ್ತಾರ ಮಾಹಿತಿ ಇಲ್ಲಿದೆ.
1. ಸ್ಟ್ರೈನ್ಡ್ ಟೊಮ್ಯಾಟೋಸ್ :
ಟೊಮ್ಯಾಟೊವನ್ನು ತುಂಡು ಮಾಡಿ ಮೃದುವಾಗುವವರೆಗೆ ನೀರಿನಲ್ಲಿ ಬೇಯಿಸಿಕೊಂದು ಪ್ಯೂರಿ ಮಾಡಿಕೊಳ್ಳಿ. ಹೀಗೆ ಮಾಡುವಾಗ ಬೀಜ ಉಳಿಯದ ಹಾಗೆ ನೋಡಿಕೊಳ್ಳಲು ಪ್ಯೂರಿಯನ್ನು ಸ್ಟ್ರೈನ್ ಮಾಡಿ. ನಂತರ ಟೊಮೆಟೊ ರಸ ಮತ್ತು ತಿರುಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ.
ಇದನ್ನೂ ಓದಿ : ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿದರೆ ನಿಮ್ಮ ಕೈಯ್ಯಾರ ಆರೋಗ್ಯ ಕೆಡಿಸಿದಂತೆ
2. ಟೊಮ್ಯಾಟೊ ಒಣಗಿಸಿ ಸ್ಟೋರ್ ಮಾಡುವುದು :
ಟೊಮೆಟೊವನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಹೆಚ್ಚು ಕಾಲ ತಾಜಾತನವನ್ನು ಕಾಪಾಡಿಕೊಳ್ಳಬಹುದು. ಇವುಗಳನ್ನು ಸಲಾಡ್, ಪಾಸ್ಟಾ ಅಥವಾ ಪಿಜ್ಜಾದಲ್ಲಿ ಬಳಸಬಹುದು. ಟೊಮೆಟೊಗಳನ್ನು ತೊಳೆದು, ಸ್ವಚ್ಛಗೊಳಿಸಿ ಮತ್ತು ತೆಳುವಾದ ತುಂಡುಗಳಾಗಿ ಕತ್ತರಿಸಬೇಕು. ನಂತರ ಅವುಗಳ ಮೇಲೆ ಉಪ್ಪನ್ನು ಸಿಂಪಡಿಸಿ ಮತ್ತು ಕನಿಷ್ಠ 1 ರಿಂದ 2 ವಾರಗಳವರೆಗೆ ಸೂರ್ಯನ ಬೆಳಕಿನಲ್ಲಿ ಒಣಗಲು ಬಿಡಿ.
3. ಫರ್ಮೆಂಟೆಡ್ ಚೆರ್ರಿ ಟೊಮ್ಯಾಟೋಸ್ :
ಫರ್ಮೆಂಟೆ ಮಾಡಿದ ಚೆರ್ರಿ ಟೊಮ್ಯಾಟೋಗಳು ಸುವಾಸನೆಯಿಂದ ತುಂಬಿರುತ್ತವೆ. ಇದನ್ನು ಮನೆಯಲ್ಲಿ ತಯಾರಿಸುವುದು ಕೂಡಾ ಸುಲಭ. ಇದಕ್ಕಾಗಿ ಮೊದಲು 2 ಕಪ್ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಬೆರೆಸಬೇಕು. ನಂತರ ಒಂದು ಜಾರ್ ನಲ್ಲಿ 2 ಕಪ್ ಚೆರ್ರಿ ಟೊಮ್ಯಾಟೊ ಹಾಕಿ ನಂತರ ಅದರ ಮೇಲೆ ಉಪ್ಪುನೀರಿನ ಮಿಶ್ರಣವನ್ನು ಸುರಿಯಿರಿ. ರುಚಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ ಎಸಳುಗಳನ್ನು ಸಹ ಸೇರಿಸಬಹುದು. ನೀರಿನ ಬಣ್ಣ ಕಿತ್ತಳೆ ಬಣ್ಣಕ್ಕೆ ಬರುವವರೆಗೆ ಈ ಮಿಶ್ರಣವನ್ನು ಬಿಡಿ.
ಇದನ್ನೂ ಓದಿ : Water Intake : ಊಟ ಮಾಡುವಾಗ ನೀವು ನೀರು ಕುಡಿಯುತ್ತೀರಾ? ಹಾಗಿದ್ರೆ, ಎಚ್ಚರ..!
4. ಟೊಮ್ಯಾಟೋ ಪೌಡರ್ :
ಟೊಮ್ಯಾಟೋ ಪುಡಿಯನ್ನು ತಯಾರಿಸಲು, ಮೊದಲು ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಅವುಗಳನ್ನು ಸಾಧ್ಯವಾದಷ್ಟು ತೆಳ್ಳಗೆ ಕತ್ತರಿಸಿ. ಇದರ ನಂತರ, ಅದನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಒಲೆಯಲ್ಲಿ ಮಧ್ಯಮ ತಾಪಮಾನದಲ್ಲಿ ಗರಿಗರಿಯಾಗುವವರೆಗೆ ಬೇಯಿಸಿ. ಒಣ ತುಂಡುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಗಾಜಿನ ಜಾರ್ ನಲ್ಲಿ ಸಂಗ್ರಹಿಸಿ ಇಡಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.