Gaur Gopal Das: ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಕೂಡಲೇ ಈ ಕೆಲಸ ಬಿಟ್ಟುಬಿಡಿ!
Success Tips by Gaur Gopal Das: ನೀವು ಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸಿದರೆ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಗೌರ್ ಗೋಪಾಲ್ ದಾಸ್ ಹೇಳಿದ ಕೆಲವು ಮಂತ್ರಗಳನ್ನು ಅನುಸರಿಸಿ. ಹೀಗೆ ಮಾಡುವುದರಿಂದ ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ನವದೆಹಲಿ: ಜೀವನದಲ್ಲಿ ಯಶಸ್ವಿಯಾಗುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಯೋಜನೆಗಳನ್ನು ರೂಪಿಸುತ್ತಾರೆ. ಆದರೆ ಕೆಲವೊಮ್ಮೆ ಇದೆಲ್ಲಾ ಮಾಡಿದ ನಂತರವೂ ಗುರಿ ಸಾಧಿಸುವುದು ಕಷ್ಟವಾಗುತ್ತದೆ. ಇದರ ಹಿಂದೆ ಹಲವು ಕಾರಣಗಳಿವೆ. ಪ್ರಸಿದ್ಧ ಆಧ್ಯಾತ್ಮಿಕ ಪ್ರವಚನಕಾರ ಗೌರ್ ಗೋಪಾಲ್ ದಾಸ್ ಯಶಸ್ಸನ್ನು ಪಡೆಯಲು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಒಬ್ಬ ವ್ಯಕ್ತಿಯು ಕೆಲವು ಕೆಟ್ಟ ಅಭ್ಯಾಸಗಳಿಂದ ಪಾಠ ಕಲಿತರೆ ಆತನ ಯಶಸ್ಸು ಖಚಿತ.
ಯಶಸ್ಸು ಸಾಧಿಸಲು ಈ ತಕ್ಷಣವೇ ಅಭ್ಯಾಸ ಬಿಡಿ
ಜನರು ಏನು ಹೇಳುತ್ತಾರೆ ಅಥವಾ ಯೋಚಿಸುತ್ತಾರೆ ಎಂಬುದರ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿ. ಯಾವುದೇ ವ್ಯಕ್ತಿಯು ಯಶಸ್ಸನ್ನು ಸಾಧಿಸುವುದನ್ನು ತಡೆಯಲು ಈ ಆಲೋಚನೆ ಸಾಕು. ಇದರಿಂದ ಯಾವುದೇ ಒಬ್ಬ ವ್ಯಕ್ತಿಯು ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನ ಬಗ್ಗೆ ಜನರ ಅಭಿಪ್ರಾಯ ಅಥವಾ ಜನರೇ ಅವನನ್ನು ನಿರ್ಣಯಿಸುತ್ತಾರೆ. ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ನಿಮ್ಮ ಮನಸ್ಸನ್ನು ತೆರೆದಿಡಿ ಮತ್ತು ಆ ಗುರಿ ಸಾಧಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ.
ಇದನ್ನೂ ಓದಿ: Tips To Get Rid Of Snoring: ಗೊರಕೆಯ ಸಮಸ್ಯೆಯಿಂದ ನೀವೂ ಪೀಡಿತರಾಗಿದ್ದೀರಾ? ಈ ಉಪಾಯ ಅನುಸರಿಸಿ!
ನಕಾರಾತ್ಮಕತೆಯಿಂದ ದೂರವಿರಿ. ಎಷ್ಟೇ ಬಾರಿ ಸೋತರೂ ನನ್ನ ಅದೃಷ್ಟ ಕೆಟ್ಟಿದೆ ಎಂದು ಯೋಚಿಸುವುದನ್ನು ಬಿಡಬೇಡಿ. ತಡವಾದರೂ ನೀವು ಪ್ರಯತ್ನವನ್ನು ಮುಂದುವರಿಸುತ್ತೀರಿ, ಇದರಿಂದ ನೀವು ಖಂಡಿತ ಯಶಸ್ವಿಯಾಗುತ್ತೀರಿ.
ಕೆಲವರು ಸರಿಯಾದ ಸಮಯಕ್ಕಾಗಿ ಕಾಯುತ್ತಾ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನೇ ಹಾಳುಮಾಡಿಕೊಳ್ಳುತ್ತಾರೆ. ಒಳ್ಳೆಯ ಸಮಯ, ಕೆಟ್ಟ ಸಮಯ ಅಂತಾ ಏನೂ ಇಲ್ಲ, ಅದು ನಮ್ಮ ಮನಸ್ಸಿನ ಭ್ರಮೆಯಷ್ಟೇ. ನೀವು ಸಕಾರಾತ್ಮಕ ಚಿಂತನೆಯೊಂದಿಗೆ ಪ್ರಯತ್ನಿಸಲು ಪ್ರಾರಂಭಿಸಿದ ಕ್ಷಣ ನಿಮ್ಮ ಒಳ್ಳೆಯ ಸಮಯ ಪ್ರಾರಂಭವಾಗುತ್ತವೆ.
ಸವಾಲುಗಳು ಅಥವಾ ಸಮಸ್ಯೆಗಳಿಂದ ಎಂದಿಗೂ ಓಡಿಹೋಗಬೇಡಿ. ನೀವು ಇದರಿಂದ ಓಡಿಹೋದಷ್ಟು ಅವು ನಿಮ್ಮನ್ನು ಘಾಸಿಗೊಳಿಸುತ್ತವೆ. ಆ ಸಮಸ್ಯೆಗಳ ವಿರುದ್ಧ ಹೋರಾಡುವುದು ಉತ್ತಮ. ಪರಿಹರಿಸಲಾಗದ ಅಂತಹ ಸಮಸ್ಯೆ ಇಲ್ಲ. ಆದ್ದರಿಂದ ಸವಾಲನ್ನು ಎದುರಿಸಲು ಧೈರ್ಯವನ್ನು ಒಟ್ಟುಗೂಡಿಸಿ, ನೀವು ಖಂಡಿತ ಯಶಸ್ಸನ್ನು ಪಡೆಯುತ್ತೀರಿ.
ಇದನ್ನೂ ಓದಿ: ಆರೋಗ್ಯಕ್ಕೆ ಮಾವಿನ ಹಣ್ಣು ಮಾತ್ರವಲ್ಲ ಮಾವಿನ ವಾಟೆಯೂ ತುಂಬಾ ಪ್ರಯೋಜನಕಾರಿ
ನಿಮ್ಮ ಜವಾಬ್ದಾರಿಗಳಿಂದ ಎಂದಿಗೂ ಓಡಿಹೋಗಬೇಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಬಹಳ ಹಿಂದೆ ಸರಿಯುತ್ತೀರಿ. ಜೀವನದಲ್ಲಿ ಯಶಸ್ಸು ಸಿಗುವುದು ಯಾರು ಜವಾಬ್ದಾರಿಗಳನ್ನು ತೆಗೆದುಕೊಂಡು ಪೂರ್ಣ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೋ ಅವರಿಗೆ ಮಾತ್ರ. ಜವಾಬ್ದಾರಿ ನಿರ್ವಹಿಸುವಲ್ಲಿನ ನಿರ್ಲಕ್ಷ್ಯವು ನಿಮ್ಮನ್ನು ಎಂದಿಗೂ ಮುಂದುವರಿಯಲು ಬಿಡುವುದಿಲ್ಲ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.