ನವದೆಹಲಿ : ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯು ನಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯು ನಮ್ಮ ಜೀವನ ಹೇಗಿರಲಿದೆ ಎನ್ನುವುದನ್ನು ನಿರ್ಧರಿಸುತ್ತದೆ. ಅಕ್ಟೋಬರ್ ತಿಂಗಳು ಯಾವ ರಾಶಿಯವರಿಗೆ (Zodiac sign) ಯಾವ ಫಲ ನೀಡಲಿದೆ ನೋಡೋಣ..
 
ಮೇಷರಾಶಿ (Aries): ಈ ತಿಂಗಳು ಕೌಟುಂಬಿಕ ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರವೂ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳಿರುತ್ತವೆ. ಸಮಾಜದಲ್ಲಿ ತಂದೆಯ ಗೌರವ ಹೆಚ್ಚಾಗುತ್ತದೆ. ಅತ್ತೆಯ ಕಡೆಯಿಂದ ಸಹಾಯ ಇರುತ್ತದೆ. ಆರೋಗ್ಯ (Health) ಸುಧಾರಿಸುತ್ತದೆ. 


COMMERCIAL BREAK
SCROLL TO CONTINUE READING

ವೃಷಭ (Taurus) : ಈ ತಿಂಗಳು ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ಸಿಗಲಿದೆ. ವ್ಯಾಪಾರದಲ್ಲಿ ಅಭಿವೃದ್ದಿಯಾಗಲಿದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ. ಸಂಬಂಧಿಕರಿಂದ ಆರ್ಥಿಕ ಮತ್ತು ಮಾನಸಿಕ ಸಹಾಯ ಬರುತ್ತದೆ. ಹೆಂಡತಿಗೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ.  


ಇದನ್ನೂ ಓದಿ : Venus Transit: ಅಕ್ಟೋಬರ್ 2 ರಂದು ವೃಶ್ಚಿಕ ರಾಶಿ ಪ್ರವೇಶಿಸಲಿರುವ ಶುಕ್ರ ಗ್ರಹ, ಈ 6 ರಾಶಿಗಳಿಗೆ ಶುಭ ಯೋಗ ಆರಂಭ


ಮಿಥುನ (Gemini) : ಶತ್ರುಗಳು ಸೋಲುತ್ತಾರೆ ಮತ್ತು ಅದರ ಲಾಭ ನಿಮಗೆ ಸಿಗಲಿದೆ. ಈ ತಿಂಗಳು ಆರೋಗ್ಯ ಉತ್ತಮವಾಗಿರುತ್ತದೆ.  ನಿರೀಕ್ಷಿಸುವ ಫಲಿತಾಂಶಗಳು ಸಿಗುತ್ತವೆ. ಸಾರ್ವಜನಿಕ ಸಂಬಂಧಿತ ಸಮಸ್ಯೆಗಳು ಪರಿಹಾರವಾಗಲಿದೆ. 


ಕರ್ಕ (Cancer): ಅಕ್ಟೋಬರ್ ತಿಂಗಳು ವ್ಯಾಪಾರಕ್ಕೆ ತುಂಬಾ ಒಳ್ಳೆಯದು. ಉದ್ಯೋಗದಲ್ಲಿರುವವರು ಸಂತೋಷವಾಗಿರುತ್ತಾರೆ. ಅಧಿಕಾರಿಗಳು ಕೂಡ ನಿಮ್ಮ ಕೆಲಸದಿಂದ ಸಂತೋಷವಾಗಿರುತ್ತಾರೆ. ಆದರೆ, ಅತಿಯಾದ ಕೆಲಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಸಿಂಹ (Leo) : ಈ ತಿಂಗಳು ಕುಟುಂಬದೊಂದಿಗೆ ಪ್ರವಾಸ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ನಿಮಗೆ ಸಾಕಷ್ಟು ಮನರಂಜನೆ ಇರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉನ್ನತ ಸ್ಥಾನಗಳಲ್ಲಿ ಕುಳಿತಿರುವ ಜನರೊಂದಿಗೆ ಸಭೆ ನಡೆಯಲಿದೆ. ಧರ್ಮದ ಮೇಲಿನ ಆಸಕ್ತಿಯು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.


ಇದನ್ನೂ ಓದಿ : Astrology: ಈ 5 ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅದೃಷ್ಟ, ಸಿಗಲಿದೆ ಶನಿ ದೇವರ ಆಶೀರ್ವಾದ


ಕನ್ಯಾ (Virgo) : ಹಣಕಾಸಿನ ವಿಚಾರದಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ದೂರವಾಗುತ್ತವೆ . ಮಗನ ಸಹಾಯ ಪಡೆದರೆ ಸಂತೋಷದಿಂದ ಇರಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ನೀವು ಯೋಚಿಸಿದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಹೋದರರ ಸಹಾಯ ಸಿಗಲಿದೆ.    


ತುಲಾ (Libra): ಈ ತಿಂಗಳು ಸಾಮಾಜಿಕ ಪ್ರತಿಷ್ಠೆಯನ್ನು ಹೊಂದಿರುತ್ತದೆ. ನೀವು ಉದ್ಯೋಗದಲ್ಲಿ ಬಡ್ತಿಯನ್ನು ಪಡೆಯುತ್ತೀರಿ. ಸಹೋದರಿಯ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡಬಹುದು. ಆರೋಗ್ಯ ಹದಗೆಡಬಹುದು.


ವೃಶ್ಚಿಕ (Scorpio): ವ್ಯಾಪಾರ, ವಹಿವಾಟು ಚೆನ್ನಾಗಿರುತ್ತದೆ. ತಂದೆಯ ಆರೋಗ್ಯ ಸುಧಾರಿಸುತ್ತದೆ. ಕೆಲವು ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ನೋಯಿಸಬಹುದು. ಅತ್ತೆಯ ಕಡೆಯಿಂದ ಸಹಾಯ ಇರುತ್ತದೆ.


ಇದನ್ನೂ ಓದಿ : TTD Warns:ನೀವು ತಿರುಪತಿಗೆ ಹೋಗಲು ಯೋಜಿಸುತ್ತಿದ್ದೀರಾ ... ದಯವಿಟ್ಟು ಇದನ್ನು ನಂಬಬೇಡಿ .. ದೇವಸ್ಥಾನದ ವಿನಂತಿ


ಧನು (Sagittarius): ಮನರಂಜನೆಯಲ್ಲಿ ಹಣ ಖರ್ಚು ಮಾಡಲಾಗುವುದು. ಕಲಾವಿದರು ಸಂತೋಷವಾಗಿರುತ್ತಾರೆ. ಆರ್ಥಿಕ್ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಅಭಿವೃದ್ದಿಯಾಗಲಿದೆ.  ಆರೋಗ್ಯ ಚೆನ್ನಾಗಿರುತ್ತದೆ. 


ಮಕರ (Capricorn): ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳಿಂದ ಮನೆಯಲ್ಲಿ ಸಂತೋಷ ಬರುತ್ತದೆ. ಮನೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯವು ನಿಮ್ಮ ಪರವಾಗಿರುತ್ತದೆ. ಈ ತಿಂಗಳು ನೀವು ಹೊಸ ಕಾರನ್ನು ಖರೀದಿಸಬಹುದು.


ಕುಂಭ (Aquarius) : ಈ ತಿಂಗಳು ವರ್ಗಾವಣೆಗೆ ಒಳ್ಳೆಯದು. ವ್ಯಾಪಾರದಲ್ಲಿ ನಷ್ಟವಾಗಬಹುದು. ಸಹೋದರನಿಗೆ ಉದ್ಯೋಗದಲ್ಲಿ ಬಡ್ತಿ (pramotion) ಸಿಗಲಿದೆ. ಸಂಬಂಧಿಕರಿಂದ ದೂರವಾಗುವ ಪರಿಸ್ಥಿತಿ ಉಂಟಾಗಬಹುದು. ಕಾಳಜಿ ವಹಿಸುವ ಅಗತ್ಯವಿದೆ. ತಾಯಿಯ ಆರೋಗ್ಯ ಹದಗೆಡಬಹುದು.


ಮೀನ (Pisces): ಈ ತಿಂಗಳು ನಿಮ್ಮ ಕೆಲಸದಲ್ಲಿ ಹೆಚ್ಚಿನ ಚಾತುರ್ಯದಿಂದ ಯಶಸ್ವಿಯಾಗುತ್ತೀರಿ. ನಿಮ್ಮ ಸ್ವಭಾವದಲ್ಲಿ ಕೋಪವು ಹೆಚ್ಚಾಗಿರುತ್ತದೆ. ಸಂಗಾತಿಯ ಆರೋಗ್ಯ ಹದಗೆಡಬಹುದು. ನೀವು ಈ ತಿಂಗಳು ಆಸ್ಪತ್ರೆಗೆ ಹೋಗಬೇಕಾಗಬಹುದು. ಕೆಲಸದಲ್ಲಿ ಲಾಭ ಇರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.