TTD Warns:ನೀವು ತಿರುಪತಿಗೆ ಹೋಗಲು ಯೋಜಿಸುತ್ತಿದ್ದೀರಾ ... ದಯವಿಟ್ಟು ಇದನ್ನು ನಂಬಬೇಡಿ .. ದೇವಸ್ಥಾನದ ವಿನಂತಿ

ವಿಐಪಿ ಬ್ರೇಕ್ ಟಿಕೆಟ್‌ಗಳನ್ನು ವಿಐಪಿಗಳಿಗೆ ಪ್ರೋಟೋಕಾಲ್ ಪ್ರಕಾರ ಮತ್ತು ಅಂತಹ ವಿಐಪಿಗಳು ಶಿಫಾರಸು ಮಾಡಿದವರಿಗೆ ಮಾತ್ರ ನೀಡಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

Written by - Yashaswini V | Last Updated : Sep 30, 2021, 08:06 AM IST
  • 1,11,116 ರೂ. ಪಾವತಿಸುವವರಿಗೆ ಹೆಲಿ-ಯಾತ್ರಾ ಪ್ರವಾಸದ ಆಮಿಷ
  • ಇಂತಹ ಮನಮೋಹಕ ಜಾಹೀರಾತುಗಳನ್ನು ನೀಡುವ ಗ್ಯಾಂಗ್‌ಗಳಿಗೆ ಮೋಸ ಹೋಗಬೇಡಿ ಎಂದು ತಿರುಪತಿ ದೇವಸ್ಥಾನ ಹೇಳಿದೆ
  • ಖಾಸಗಿ ಕಂಪನಿಗಳು ಅಥವಾ ಪ್ರವಾಸೋದ್ಯಮ ಕಂಪನಿಗಳಿಗೆ ವಿಐಪಿಗಳು. ದರ್ಶನ ಟಿಕೆಟ್ ನೀಡಲಾಗುವುದಿಲ್ಲ
TTD Warns:ನೀವು ತಿರುಪತಿಗೆ ಹೋಗಲು ಯೋಜಿಸುತ್ತಿದ್ದೀರಾ ... ದಯವಿಟ್ಟು ಇದನ್ನು ನಂಬಬೇಡಿ .. ದೇವಸ್ಥಾನದ ವಿನಂತಿ title=
TTD Warns: ತಿರುಪತಿಗೆ ಭೇಟಿ ನೀಡಲಿರುವ ಭಕ್ತರೇ ಎಚ್ಚರ, ಇಂತಹ ಅಮಿಷಗಳಿಗೆ ಬಲಿಯಾಗದಿರಿ

ತಿರುಪತಿ: ತಿರುಪತಿ ಏಳು ಬೆಟ್ಟಗಳಿಗೆ ಭೇಟಿ ನೀಡಲು ಖಾಸಗಿ ಕಂಪನಿಯು ವಿಶಿಷ್ಟವಾದ ಗ್ಲಾಮರ್ ಯೋಜನೆಯನ್ನು ಆರಂಭಿಸಿದೆ. ಆ ಯೋಜನೆಯಲ್ಲಿ, ನೀವು ರೂ .1 ಲಕ್ಷ 11 ಸಾವಿರದ 116 ಪಾವತಿಸಿದರೆ, ನಾವು ನಿಮ್ಮನ್ನು ಚೆನ್ನೈ , ಕೊಯಮತ್ತೂರು ಮತ್ತು ಬೆಂಗಳೂರು ಸೇರಿದಂತೆ ನಗರಗಳಿಂದ ಹೆಲಿಕಾಪ್ಟರ್ ಮೂಲಕ ತಿರುಪತಿಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿ 5 ಸ್ಟಾರ್ ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ಆಕರ್ಷಕ ಕೊಡುಗೆಗಳ ಬಗ್ಗೆ ಜಾಹೀರಾತು ನೀಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತಿರುಮಲ ಮತ್ತು ತಿರುಚನೂರು ದೇವಸ್ಥಾನಗಳಲ್ಲಿ ಶನಿವಾರದಂದು ಚಾರ್ಟರ್ಡ್ ಹೆಲಿಕಾಪ್ಟರ್ ಪ್ರಯಾಣದ ಮೂಲಕ ತಿರುಮಲ ಮತ್ತು ತಿರುಚನೂರು ದೇವಸ್ಥಾನಗಳಲ್ಲಿ ವಿಐಪಿ ಬ್ರೇಕ್ ದರ್ಶನದ ಭರವಸೆಯೊಂದಿಗೆ ಭಕ್ತರನ್ನು ದಾರಿ ತಪ್ಪಿಸುವ ವಾಸವಿ ಯಾತ್ರೆ ಮತ್ತು ಪ್ರವಾಸಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಎಚ್ಚರಿಕೆ ನೀಡಿದೆ.

ಸೋಮವಾರ ಇಲ್ಲಿ ಒಂದು ಹೇಳಿಕೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanams) ಭಕ್ತರನ್ನು ಇಂತಹ ನಕಲಿ ಭರವಸೆಗಳಿಂದ ಮೋಸ ಹೋಗದಂತೆ ಮತ್ತು ಮೋಸದ ಆಪರೇಟರ್‌ಗಳ ಬಗ್ಗೆ ಎಚ್ಚರವಹಿಸುವಂತೆ ಭಕ್ತರಿಕೆ ಮನವಿ ಮಾಡಿದೆ. 

ವಾಸ್ತವವಾಗಿ, ಖಾಸಗಿ ಕಂಪನಿಯು ತಿರುಪತಿಗೆ (Tirupati) ಭೇಟಿ ನೀಡುವವರಿಗೆ ವಿಭಿನ್ನ ಆಕರ್ಷಕ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಚೆನ್ನೈ, ಕೊಯಮತ್ತೂರು ಮತ್ತು ಬೆಂಗಳೂರಿನಿಂದ ಹೆಲಿಕಾಪ್ಟರ್ ಪ್ರಯಾಣದ ಮೂಲಕ ಇಂತಹ ಪ್ಯಾಕೇಜ್ ಪ್ರವಾಸಗಳ ಬಗ್ಗೆ ಬಿ ಶಿವ ಕುಮಾರ್ ಎಂಬ ಆಯೋಜಕರು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗವಾಗಿ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ-  October 2021 Horoscope: ಅಕ್ಟೋಬರ್‌ನಲ್ಲಿ 4 ಗ್ರಹಗಳ ರಾಶಿ ಪರಿವರ್ತನೆ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ ತಿಳಿಯಿರಿ

ನಿರ್ವಾಹಕ ವಾಸವಿ ಯಾತ್ರೆ ಮತ್ತು ಟೂರ್ಸ್ ಎಂಬ ಖಾಸಗಿ ಕಂಪನಿಯೊಂದು  1,11,116 ರೂ. ಪಾವತಿಸುವವರಿಗೆ ಹೆಲಿ-ಯಾತ್ರಾ ಪ್ರವಾಸಗಳನ್ನು (Heli-Pilgrimage Tours) ಏರ್ಪಡಿಸಲಾಗುವುದು ಎಂದು ಪ್ರಚಾರ ಮಾಡಿದೆ. ಈ ಪ್ಯಾಕೇಜ್‌ನಲ್ಲಿ ತಿರುಪತಿಗೆ ಹೋಗುವ ಚಾರ್ಟರ್ಡ್ ಹೆಲಿಕಾಪ್ಟರ್ ಟ್ರಿಪ್‌ಗಳು ಮತ್ತು ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯದ ಜೊತೆಗೆ ತಿರುಮಲ ಮತ್ತು ತಿರುಚನೂರು ದೇವಸ್ಥಾನಗಳಲ್ಲಿ ವಿಐಪಿ ಬ್ರೇಕ್ ದರ್ಶನ ಭಾಗ್ಯ ಲಭ್ಯವಾಗಲಿದೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಅವರು ಟಿಟಿಡಿ ದರ್ಶನದ ಹೆಸರಿನಲ್ಲಿ ಯಾತ್ರಿಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಜಾಹೀರಾತಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ತಿರುಪತಿ ದೇವಸ್ಥಾನವು,  ವಿಐಪಿ ಬ್ರೇಕ್ ಟಿಕೆಟ್ ಅನ್ನು ವಿಐಪಿಗಳಿಗೆ ಪ್ರೋಟೋಕಾಲ್ ಪ್ರಕಾರ ಮತ್ತು ಅಂತಹ ವಿಐಪಿಗಳು ಶಿಫಾರಸು ಮಾಡಿದವರಿಗೆ ಮಾತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಅಂತಹ ಟಿಕೆಟ್ಗಳನ್ನು ಖಾಸಗಿ ವ್ಯಕ್ತಿಗಳು ಮತ್ತು ಪ್ರವಾಸ ಏಜೆನ್ಸಿಗಳಿಗೆ ಒದಗಿಸಲಾಗುವುದಿಲ್ಲ. ಭಕ್ತರು ಇಂತಹ "ಮೋಸದ" ಆಪರೇಟರ್‌ಗಳ ವಿರುದ್ಧ ನಿಗಾ ವಹಿಸಬೇಕು ಮತ್ತು ಅಂತಹ ನಿದರ್ಶನಗಳನ್ನು ತಮ್ಮ ಗಮನಕ್ಕೆ ತರಬೇಕು. ಇದರಿಂದ ಅವರ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಟಿಟಿಡಿ ತಿಳಿಸಿದೆ.

ಇದನ್ನೂ ಓದಿ-  Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ

ತಿರುಮಲೈ ತಿರುಪತಿ ದೇವಸ್ತಾನವು ಶ್ರೀವಾಣಿ ಫೌಂಡೇಶನ್ ಹೆಸರಿನಲ್ಲಿ ಹೊಸ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಯಾರು ಬೇಕಾದರೂ ಈ ಟಿಕೆಟ್ ಅನ್ನು ರೂ. 10,500 ಪಾವತಿಸಿ ಪಡೆಯಬಹುದು.

ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ. ರೂ .10,000 ದೇಣಿಗೆ ಮತ್ತು ರೂ .500 ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಈ ಟಿಕೆಟ್ ಪಡೆದ ಭಕ್ತರು ವಿಐಪಿಗೆ ಅರ್ಹರಾಗಿರುತ್ತಾರೆ. ದೇವಸ್ಥಾನವೇ ದರ್ಶನ ವ್ಯವಸ್ಥೆಯನ್ನು ಮಾಡುತ್ತದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News