Swayamvar Culture: ನಮ್ಮಲ್ಲಿ ಹೆಚ್ಚಿನವರಿಗೆ ಸ್ವಯಂವರ ಪದ್ಧತಿಯ ಪರಿಚಯವಿರುತ್ತದೆ. ಸ್ವಯಂವರ ಅಭ್ಯಾಸವು ಭಾರತೀಯ ಸಂಸ್ಕೃತಿಯಲ್ಲಿ ಇರುವ ಹಳೆಯ ಸಂಪ್ರದಾಯವಾಗಿದೆ. ಈ ಪದ್ಧತಿಯಲ್ಲಿ, ಮದುವೆಯಾಗ ಬಯಸುವ  ಹುಡುಗಿ ತನ್ನ ವರನನ್ನು ಅನೇಕ ಯುವಕರ ನಡುವೆ ಆಯ್ಕೆಮಾಡಿಕೊಳ್ಳುತ್ತಾಳೆ. ವೈದಿಕ ಕಾಲದಿಂದಲೂ ಸ್ವಯಂವರ ಪದ್ದತಿ ನಡೆದುಕೊಂಡು ಬಂದಿದೆ ಮತ್ತು ಅದರ ವಿವರಣೆ ಮಹಾಭಾರತ-ರಾಮಾಯಣದಲ್ಲೂ ಕಂಡುಬರುತ್ತದೆ. ಅಂತಹುದೇ ಒಂದು  ಒಂದು ಸಂಪ್ರದಾಯವು ಬಿಹಾರದ ಮಣ್ಣಿನಲ್ಲಿ ಇನ್ನೂ ಅಸ್ತಿತ್ವದಲ್ಲಿದೆ.  ಬಿಹಾರದ ಮಾಲಿನಿಯಾ ಗ್ರಾಮದಲ್ಲಿ ಎರಡು ದಿನಗಳ ಕಾಲ 'ಪಾನ್ ಮೇಳ' ನಡೆಯುತ್ತದೆ, ಇದರಲ್ಲಿ ಮದುವೆಯಾಗಬಯಸುವ ಯುವಕ-ಯುವತಿಯರು ಭಾಗವಹಿಸುತ್ತಾರೆ. ಈ ಜಾತ್ರೆಯಲ್ಲಿ ಒಬ್ಬ ಹುಡುಗ ಹುಡುಗಿಯನ್ನು ಪ್ರೀತಿಸಿದರೆ ಆಕೆಗೆ ವೀಳ್ಯದೆಲೆ ಕೊಡುತ್ತಾನೆ. ಹುಡುಗಿ ಆ ಎಲೆ ತಿಂದರೆ ಇಬ್ಬರಿಗೂ ಮದುವೆ ಆಯ್ತು ಅಂತ ಅರ್ಥ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Kedar Yog: ಅದೃಷ್ಟವಂತರ ಜಾತಕದಲ್ಲಿರುತ್ತದೆ ಈ ಯೋಗ, ಅಪಾರ ಧನ-ಸಂಪತ್ತು, ಸ್ಥಾನಮಾನದ ಒಡೆಯರಾಗುತ್ತಾರೆ!


ಈ ಸಂಪ್ರದಾಯ ಹೇಗೆ ನಡೆಯುತ್ತದೆ?
ಬಿಹಾರದ ಮಲಿನಿಯಾ ಗ್ರಾಮದಲ್ಲಿ ನಡೆಯುವ ಈ ಜಾತ್ರೆಗೆ ದೂರದೂರುಗಳಿಂದ ಆದಿವಾಸಿಗಳು ಬರುತ್ತಾರೆ. ಬಿದಿರಿನಿಂದ ನಿರ್ಮಿಸಲಾದ ದೊಡ್ಡ ಗೋಪುರವು ಜಾತ್ರೆಯ ಆಕರ್ಷಣೆಯ ಕೇಂದ್ರವಾಗಿದೆ. ಎಲ್ಲಾ ಆದಿವಾಸಿಗಳು ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಜಾತ್ರೆಯ ಎರಡು ದಿನಗಳಲ್ಲೂ ಕುಣಿತ, ಹಾಡಿನ ಅಬ್ಬರ ಇರುತ್ತದೆ. ಬುಡಕಟ್ಟು ಜನಾಂಗದವರಿಗೆ ಈ ಹಬ್ಬವು ಹೋಳಿ ಹಬ್ಬದಂತೆ ಇರುತ್ತದೆ. ಏಕೆಂದರೆ ಜನರು ಜಾತ್ರೆಯಲ್ಲಿ ಅಬೀರ್-ಗುಲಾಲ್ ಎರಚಿ ಆಟವಾಡುತ್ತಾರೆ. ನಾವು ಹೇಳುತ್ತಿರುವ ಸ್ವಯಂವರದ ಆಚರಣೆ ಇದಾಗಿದೆ. ಇದರಲ್ಲಿ ಹುಡುಗನನ್ನು ಇಷ್ಟಪಟ್ಟ ನಂತರ ಹುಡುಗಿ ಅವನೊಂದಿಗೆ ಕೆಲವು ದಿನಗಳನ್ನು ಕಳೆಯುತ್ತಾಳೆ. ಇದಾದ ನಂತರ ಇಬ್ಬರೂ ಸಮಾಜದ ವತಿಯಿಂದ ವಿವಾಹ ಮಾಡಿಕೊಳ್ಳುತ್ತಾರೆ.  ಯಾವುದೇ ಹುಡುಗ ಅಥವಾ ಹುಡುಗಿ ಒಟ್ಟಿಗೆ ವಾಸಿಸಿದ ನಂತರ ನಿರಾಕರಿಸಿದರೆ, ಸರಪಂಚ್‌ಗಳ ಗುಂಪು ಅವರನ್ನು ಶಿಕ್ಷೆಗೊಳಪಡಿಸುತ್ತದೆ.


ಇದನ್ನೂ ಓದಿ-May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!


ಹುಡುಗಿ ಪಾನ್ ತಿಂದರೆ ಏನಾಗುತ್ತದೆ
ಅನೇಕ ಬಾರಿ ಹುಡುಗಿ ಹುಡುಗನನ್ನು ಇಷ್ಟಪಡುವುದಿಲ್ಲ, ಆಗ ಹುಡುಗಿ ಅವನ ಕೈಯಿಂದ ಪಾನ್ ತಿನ್ನಲು ನಿರಾಕರಿಸುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ಹುಡುಗ ಇನ್ನೊಬ್ಬ ಹುಡುಗಿಯನ್ನು ಆರಿಸಿಕೊಂಡು ಹೋಗುತ್ತಾನೆ. ಬಿಹಾರದಲ್ಲಿ ಆಯೋಜಿಸಲಾಗುವ ಈ ವಿಶಿಷ್ಟ ಜಾತ್ರೆಗೆ ನೇಪಾಳ, ಬಂಗಾಳ ಮತ್ತು ಜಾರ್ಖಂಡ್‌ನಿಂದಲೂ ಜನರು ಬರುತ್ತಾರೆ. ಸ್ವಯಂವರ ಆಚರಣೆಯಲ್ಲಿ, ಮಹಿಳೆಯು ಮದುವೆಗೆ ಅರ್ಹಳಾಗಿದ್ದರೆ, ಸ್ವಯಂವರವನ್ನು ಆಯೋಜಿಸಲಾಗುತ್ತದೆ, ಇದರಲ್ಲಿ ಅನೇಕ ಯುವಕರು ಭಾಗವಹಿಸುತ್ತಾರೆ. ಆ ಯುವಕರಿಂದ ತನ್ನ ಪ್ರೇಮಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಮಹಿಳೆಗೆ ನೀಡಲಾಗುತ್ತದೆ. ಅದೇನೇ ಇದ್ದರೂ ಈ ಆದಿವಾಸಿಗಳು  ಅಳಿವಿನಂಚಿನಲ್ಲಿರುವ ಈ ಸಂಪ್ರದಾಯವನ್ನು ಇಂದಿಗೂ ಕೂಡ ಜೀವಂತವಾಗಿಟ್ಟಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.