ನವದೆಹಲಿ: Bad Indications - ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಟ್ಟ ಸಮಯಗಳು ಬಂದೆ ಬರುತ್ತವೆ, ಆದರೆ ಕೆಟ್ಟ ಸಮಯಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಸತ್ಯ. ಇನ್ನೂ ಜನರು ಕೆಟ್ಟ ಸಮಯಕ್ಕೆ ಸಿದ್ಧರಿಲ್ಲ. ಧರ್ಮಗ್ರಂಥಗಳಲ್ಲಿ (Astrology), ಕೆಟ್ಟ ಸಮಯದ ಮೊದಲು ಕೆಲ ಸಂಕೇತಗಳು ಸಿಗುತ್ತವೆ ಎಂಬುದನ್ನು  ಉಲ್ಲೇಖಿಸಲಾಗಿದೆ. ಅವುಗಳನ್ನು  ಅರ್ಥಮಾಡಿಕೊಳ್ಳುವ ಮೂಲಕ, ಯಾವುದೇ ವ್ಯಕ್ತಿಯು ಮುಂಬರುವ ಕೆಟ್ಟ ಸಮಯವನ್ನು ಗ್ರಹಿಸುವ ಮೂಲಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಹೀಗಿರುವಾಗ ಕೆಟ್ಟ ಸಮಯದ ಮೊದಲು ಸಿಗುವ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ 


COMMERCIAL BREAK
SCROLL TO CONTINUE READING

ಆಹಾರಕ್ಕೆ ಸಂಬಂಧಿಸಿದ ಸಂಕೇತ (Bad Sign During Lunch)
ಸಾಮಾನ್ಯವಾಗಿ ಊಟ  ಪ್ರಾರಂಭಿಸಿದ ತಕ್ಷಣ, ಮೊದಲ ತುತ್ತು ಕಹಿ ಅನುಭವ ನೀಡುತ್ತದೆ. ಇದರಿಂದಾಗಿ ಅನೇಕ ಬಾರಿ ಅದನ್ನು ನಾವು ತಿನ್ನುವುದಿಲ್ಲ. ಇದು ಸಂಭವಿಸಿದಲ್ಲಿ, ಇದು ನಮ್ಮ ಹತ್ತಿರದ ಯಾರೊಬ್ಬರಿಂದ ಕೆಟ್ಟ ಸುದ್ದಿ ಬರಲಿದೆ ಎಂಬುದರ ಸಂಕೇತವಾಗಿದೆ.


ಪೂಜೆಯ ವೇಳೆ ಸಿಗುವ ಸಂಕೇತ
ಪೂಜೆ ಮಾಡುವಾಗ ಪೂಜೆಯ ತಟ್ಟೆ ಅಥವಾ ವಸ್ತು ಬೀಳುವುದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೂಜೆ ಸ್ವೀಕಾರವಾಗಿಲ್ಲ.  ಎಂಬುದಕ್ಕೆ ಇದು ಸಂಕೇತವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಏನಾದರೂ ಅನಾಹುತಗಳು ಬರಬಹುದು. ಇದಲ್ಲದೆ, ದೀಪವನ್ನು ಆರುವುದು ಕೂಡ  ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.


ದಾರಿಯಲ್ಲಿನ ಜಗಳ (Bad Sign During Travel)
ಬೆಳಿಗ್ಗೆ ಕಚೇರಿಗೆ ಹೋಗುವಾಗ ಅಥವಾ ಹಿಂತಿರುಗುವಾಗ, ರಸ್ತೆಯಲ್ಲಿ ಜಗಳ ಅಥವಾ ವಾದವನ್ನು ನೋಡುವುದು ಅಶುಭ ಸೂಚಕ ಎನ್ನಲಾಗುತ್ತದೆ. ಮುಂಬರುವ ದಿನಗಳಲ್ಲಿ ಕೆಲಸದ ಸ್ಥಳದಲ್ಲಿ ಕೆಲವು ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದು ಇದು ಸೂಚಿಸುತ್ತದೆ.


ಬೆಕ್ಕಿನ ಧ್ವನಿ
ಬೆಕ್ಕಿ ವಿಷಯದಲ್ಲಿ ಅನೇಕ ಶಕುನ-ಅಪಶಕುನಗಳನ್ನು ಉಲ್ಲೇಖಿಸಲಾಗಿದೆ. ಮನೆಯಲ್ಲಿ ಸಾಕಿದ ಬೆಕ್ಕು ಭಯಾನಕ ಶಬ್ದ ಮಾಡಲು ಪ್ರಾರಂಭಿಸಿದರೆ ಅದು ಅಶುಭ ಸಂಕೇತ. ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಪರಿಚಲನೆಗೊಳ್ಳಲು ಪ್ರಾರಂಭಿಸಿದೆ ಎಂದು ಇದು ಸೂಚಿಸುತ್ತದೆ.


ಇದನ್ನೂ ಓದಿ-Astrology : ಲಕ್ಷ್ಮಿದೇವಿಯ ಆಶೀರ್ವಾದದಿಂದ ಈ 4 ರಾಶಿಯವರು ಶ್ರೀಮಂತರಾಗಿರುತ್ತಾರೆ!


ಹಾಲು ಒಡೆಯುವುದು ಅಥವಾ ಚೆಲ್ಲುವುದು
ತಾಜಾ ಹಾಲು ಕುದಿಯುವಾಗ ಚೆಲ್ಲಿದರೆ ಅಥವಾ ಒಡೆದರೆ , ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಅಪಶ್ರುತಿ ಮತ್ತು ತೊಂದರೆಗಳು ಹೆಚ್ಚಾಗಲಿವೆ ಎಂದು ಇದು ಸೂಚಿಸುತ್ತದೆ.


ಇದನ್ನೂ ಓದಿ-ಮೌನಿ ಅಮಾವಾಸ್ಯೆಯಂದು ಈ ಸುಲಭ ಕೆಲಸ ಮಾಡಿ; ಲಕ್ಷ್ಮಿದೇವಿ ವರ್ಷವಿಡೀ ನಿಮ್ಮ ಮೇಲೆ ಸಂಪತ್ತು ಸುರಿಸುತ್ತಾಳೆ


ಕುಂಕುಮ ಚೆಲ್ಲುವುದು 
ಕುಂಕುಮ ಅಥವಾ ಸಿಂಧೂರವನ್ನು ಹಚ್ಚಿಕೊಳ್ಳುವಾಗ, ವಿವಾಹಿತ ಮಹಿಳೆಯರ ಕೈಯಿಂದ ಇದ್ದಕ್ಕಿದ್ದಂತೆ ಕುಂಕುಮ ಪೆಟ್ಟಿಗೆ ಬೀಳುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಪತಿಗೆ ಕೆಲವು ರೀತಿಯ ನಷ್ಟ ಸಂಭವಿಸಲಿದೆ ಎಂದು ಇದು ಸೂಚಿಸುತ್ತದೆ.


ಇದನ್ನೂ ಓದಿ-ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ, ಈ ಬಣ್ಣವನ್ನು ಬಳಸಿ; ಮತ್ತೆ ಪ್ರಗತಿಯತ್ತ ಸಾಗಲಿದೆ ಆರ್ಥಿಕ ಸ್ಥಿತಿ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.