ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ, ಈ ಬಣ್ಣವನ್ನು ಬಳಸಿ; ಮತ್ತೆ ಪ್ರಗತಿಯತ್ತ ಸಾಗಲಿದೆ ಆರ್ಥಿಕ ಸ್ಥಿತಿ

 ವಾಸ್ತು ಶಾಸ್ತ್ರದ ತತ್ವಗಳ ಪ್ರಕಾರ, ವಾಸ್ತು ಅಂದರೆ ಮನೆ ನಿರ್ಮಾಣದ ವೇಳೆ ಮಾತ್ರ ಅನುಸರಿಸುವಂಥದ್ದಲ್ಲ. ವ್ಯಾಪಾರ, ವ್ಯವಹಾರಗಳಲ್ಲಿಯೂ, ವಾಸ್ತು ಪರಿಣಾಮಕಾರಿಯಾಗಿರುತ್ತದೆ. 

Written by - Ranjitha R K | Last Updated : Jan 31, 2022, 11:21 AM IST
  • ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಪಡೆಯುವುದು ಹೇಗೆ?
  • ವ್ಯವಹಾರದಲ್ಲಿ ಯಶಸ್ಸು ಸಿಗಬೇಕಾದರೆ ಏನು ಮಾಡಬೇಕು ?
  • ಸ್ಥಗಿತಗೊಂಡ ವ್ಯಾಪಾರಡ ಕಡೆ ವಿಶೇಷ ಗಮನ ಅಗತ್ಯ
ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ, ಈ ಬಣ್ಣವನ್ನು ಬಳಸಿ; ಮತ್ತೆ ಪ್ರಗತಿಯತ್ತ ಸಾಗಲಿದೆ ಆರ್ಥಿಕ ಸ್ಥಿತಿ  title=
ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಪಡೆಯುವುದು ಹೇಗೆ? (file photo)

ನವದೆಹಲಿ : ವಾಸ್ತು ಶಾಸ್ತ್ರದ (Vastu Shastra) ತತ್ವಗಳ ಪ್ರಕಾರ, ವಾಸ್ತು ಅಂದರೆ ಮನೆ ನಿರ್ಮಾಣದ ವೇಳೆ ಮಾತ್ರ ಅನುಸರಿಸುವಂಥದ್ದಲ್ಲ. ವ್ಯಾಪಾರ, ವ್ಯವಹಾರಗಳಲ್ಲಿಯೂ, ವಾಸ್ತು ಪರಿಣಾಮಕಾರಿಯಾಗಿರುತ್ತದೆ.  ಅನೇಕ ಬಾರಿ ವ್ಯಾಪಾರ ಸ್ಥಳದಲ್ಲಿ ವಾಸ್ತು ದೋಷಗಳಿಂದಾಗಿ (Vastu Dosha) ಆರ್ಥಿಕ ಪ್ರಗತಿ ಇರುವುದಿಲ್ಲ. ಅಲ್ಲದೆ, ವ್ಯಾಪಾರದಲ್ಲಿ ಆಗಾಗ ನಷ್ಟ ಸಂಭವಿಸುತ್ತದೆ. ಹೀಗಿರುವಾಗ, ವಾಸ್ತುವಿನಲ್ಲಿ ಹೇಳಲಾದ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ, ವ್ಯವಹಾರದಲ್ಲಿ ಅಪಾರ ಯಶಸ್ಸು ಮತ್ತು ಆರ್ಥಿಕ ಪ್ರಗತಿಯನ್ನು ಕಾಣಬಹುದು. 

ವಾಸ್ತು ಶಾಸ್ತ್ರದಲ್ಲಿ ಬಣ್ಣಗಳಿಗೆ ಇದೆ ವಿಶೇಷ ಪ್ರಾಮುಖ್ಯತೆ :
ವಾಸ್ತು ಶಾಸ್ತ್ರದಲ್ಲಿ (Vastu Shastra) ಬಣ್ಣಗಳಿಗೆ ವಿಶೇಷ ಮಹತ್ವವಿದೆ. ಪ್ರತಿಯೊಂದು ಬಣ್ಣವು ವಿಭಿನ್ನ ಶಕ್ತಿಯನ್ನು ಹೊಂದಿರುತ್ತದೆ. ಇದರಿಂದಾಗಿ ಅವು ವಾಸ್ತು ದೋಷಗಳನ್ನು (Vastu Dosha) ತೆಗೆದುಹಾಕುವಲ್ಲಿ ಸಹಾಯಕವಾಗಿವೆ. ವಾಸ್ತು ದೋಷಗಳ ಕಾರಣದಿಂದಾಗಿ, ವ್ಯಾಪಾರ, ವ್ಯವಹಾರದ  ಪ್ರಗತಿ ನಿಂತು ಹೋಗಿದ್ದರೆ, ಕಪ್ಪು ಬಣ್ಣದ ಬಳಕೆ ಸಹಾಯ ಮಾಡುತ್ತದೆ (Black colour in Vastu). ಕಪ್ಪು ಬಣ್ಣವನ್ನು ಬಳಸುವ ಮೂಲಕ ವ್ಯಾಪಾರ, ವ್ಯವಹಾರದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಬಹುದು.  ವ್ಯಾಪಾರದ ಸ್ಥಳದಲ್ಲಿ ಆಗ್ನೇಯ ಗೋಡೆಗೆ ಕಪ್ಪು ಬಣ್ಣವನ್ನು ಬಳಸಬಹುದು. 

ಇದನ್ನೂ ಓದಿ :  ಇಂದಿನಿಂದ ಬೆಳಗಲಿದೆ ಈ 4 ರಾಶಿಯವರ ಅದೃಷ್ಟ, ಬುಧ ನೀಡಲಿದ್ದಾನೆ ಅಪಾರ ಲಾಭ

ಕಪ್ಪು ಬಣ್ಣ ಯಾಕೆ ಬಳಸಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು ಎಂದರೆ ನೀರು. ಇದು ನೀರಿನ ಪೋಷಕಾಂಶವಾಗಿದೆ. ಆದ್ದರಿಂದ, ಆಗ್ನೇಯ ದಿಕ್ಕಿನಲ್ಲಿ ಸ್ವಲ್ಪ ಪ್ರಮಾಣದ ಕಪ್ಪು ಬಣ್ಣವನ್ನು ಹಚ್ಚುವುದರಿಂದ ಈ ದಿಕ್ಕಿಗೆ ಸಂಬಂಧಿಸಿದ ವಾಸ್ತು ದೋಷಗಳು (Vastu Dosha) ನಿವಾರಣೆಯಾಗುತ್ತದೆ. ಇದರ ಪರಿಣಾಮವಾಗಿ ವ್ಯಾಪಾರದಲ್ಲಿ ಆರ್ಥಿಕ ಪರಿಸ್ಥಿತಿಯು ಸುಧಾರಿಸಲು ಪ್ರಾರಂಭಿಸುತ್ತದೆ. ವ್ಯಾಪಾರವು ಸಂಪೂರ್ಣವಾಗಿ ಬಳಸಬೇಕು. 

ವ್ಯಾಪಾರ ವೃದ್ದಿಗೆ ಅನುಸರಿಸಬಹುದಾದ ಇತರ ಮಾರ್ಗ :
ವ್ಯಾಪಾರದಲ್ಲಿ ಯಶಸ್ಸು ಪಡೆಯಲು ವ್ಯಾಪಾರ ವೃದ್ಧಿ ಯಂತ್ರ, ಕ್ರಿಸ್ಟಲ್ ಟರ್ಟಲ್, ಶ್ರೀ ಯಂತ್ರ (Shree Yantra) ಮತ್ತು ಕ್ರಿಸ್ಟಲ್ ಬಾಲ್ ಇತ್ಯಾದಿಗಳನ್ನು ಮೇಜಿನ ಮೇಲೆ ಇಡಬಹುದು. ಇದಲ್ಲದೆ, ಅಂಗಡಿ, ಕಾರ್ಖಾನೆ ಅಥವಾ ಕಚೇರಿಯಲ್ಲಿ ತಿಳಿ ಕ್ರೀಮ್ ಅಥವಾ ಬಿಳಿ ಬಣ್ಣವನ್ನು ಬಳಸಬಹುದು. ವಾಸ್ತು ಪ್ರಕಾರ, ಈ ಬಣ್ಣಗಳ ಮೂಲಕ ಧನಾತ್ಮಕ ಶಕ್ತಿಯು (Positive energy) ಹರಡುತ್ತದೆ. ಇದು ವ್ಯವಹಾರದಲ್ಲಿ ಪ್ರಗತಿಗೆ ಸಹಕಾರಿಯಾಗಿರುತ್ತದೆ.  

ಇದನ್ನೂ ಓದಿ : Sun Transit Impact: ಶನಿಯ ಮನೆಯಲ್ಲಿ ಸೂರ್ಯನ ಪ್ರವೇಶ, ಈ ರಾಶಿಯ ಜನರ ಮೇಲೆ ಬೀಳಲಿದೆ ಹೆಚ್ಚು ಪ್ರಭಾವ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News