ನವದೆಹಲಿ : ವಯಸ್ಸು ಹೆಚ್ಚಾದಂತೆ ಕೂದಲು ಉದುರುವುದು ಸಮಸ್ಯೆಯಲ್ಲ. ಆದರೆ ಈಗ ಸಣ್ಣ ವಯಸ್ಸಿನಲ್ಲಿಯೇ ಜನರು ಕೂದಲುದುರುವ ಸಮಸ್ಯೆಯನ್ನು (Hairfall) ಎದುರಿಸುತ್ತಿದ್ದಾರೆ. ಕೂದಲು ಉದುರುವ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.  ಶಾಂಪೂ ಅಥವಾ ಎಣ್ಣೆಯನ್ನು ಬದಲಾಯಿಸುವುದೇ ಕೂದಲು ಉದುರುವ ಸಮಸ್ಯೆಗೆ ಪರಿಹಾರವಲ್ಲ. ಇದಕ್ಕಾಗಿ  ಸರಿಯಾದ ಆಹಾರ ಕ್ರಮವನ್ನು (Food to control hairfall) ಕೂಡಾ ಅಳವಡಿಸಿಕೊಳ್ಳಬೇಕು. 


COMMERCIAL BREAK
SCROLL TO CONTINUE READING

ಹೆಚ್ಚು ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದರೆ, ತಕ್ಷಣವೇ  ನಿಮ್ಮ ಜೀವನಶೈಲಿಯಲ್ಲಿ (Lifestyle) ಬದಲಾವಣೆಯನ್ನು ತರುವ ಅನಿವಾರ್ಯತೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.   ಆಹಾರ ತಜ್ಞರ ಸಲಹೆಯೊಂದಿಗೆ, ಸೂಕ್ತ  ಆಹಾರಗಳನ್ನು ಸೇವಿಸಿ. ಇದು ನಿಮ್ಮ ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ (good diet to control hairfall). 


ಇದನ್ನೂ ಓದಿ :  Dehydration: ದೇಹವು ಈ ಸಂಕೇತಗಳನ್ನು ನೀಡಲು ಪ್ರಾರಂಭಿಸಿದರೆ ಮೊದಲು ನೀರು ಕುಡಿಯಿರಿ


1. ದ್ವಿದಳ ಧಾನ್ಯಗಳು :
ದ್ವಿದಳ ಧಾನ್ಯಗಳು ಕೂದಲನ್ನು ಆರೋಗ್ಯಕರವಾಗಿಡಲು ಬಹಳ ಪರಿಣಾಮಕಾರಿ. ಇದು ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಿದೆ. ಇದಕ್ಕಾಗಿ ನೀವು ಮಸೂರ, ಬಟಾಣಿ, ಬೀನ್ಸ್ ಮತ್ತು ಇತರ ದ್ವಿದಳ ಧಾನ್ಯಗಳನ್ನು ತಿನ್ನಬಹುದು. 


2. ಬೀಜಗಳು :
ಬೀಜಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.  ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ಕೂದಲಿನ ಬೆಳವಣಿಗೆಗೆ ಸಹಾಯಕ. ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿರುವ ಒಮೆಗಾ -3 ಕೊಬ್ಬಿನಾಮ್ಲಗಳು  ಈ ಬೀಜಗಳಲ್ಲಿ ಕಂಡುಬರುತ್ತವೆ.


3. ನೆಲ್ಲಿಕಾಯಿ :
 ಪ್ರತಿದಿನ ಆಮ್ಲಾವನ್ನು (Amla) ಸೇವಿಸುವ ಮೂಲಕ  ಕೂದಲಿನ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬಹುದು. ನೆಲ್ಲಿಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ.  ಜೊತೆಗೆ ಇದು ವಿಟಮಿನ್ ಸಿ (Vitamin C) ಯ ಸಮೃದ್ಧ ಮೂಲವಾಗಿದೆ. ಕೂದಲು ಉದುರುವ ಸಮಸ್ಯೆಗೆ ನೆಲ್ಲಿಕಾಯಿ ಸೇವನೆ (Benefits of Amla) ರಾಮಬಾಣವಾಗಿದೆ. 


ಇದನ್ನೂ ಓದಿ :  ಅತಿಯಾಗಿ ಆಕಳಿಕೆ ಬರುತ್ತಿದ್ದರೆ ಹುಷಾರಾಗಿರಿ.. ಇದು ಈ ಅಪಾಯಗಳ ಬಗ್ಗೆ ಹೇಳುತ್ತಿದೆ


4. ಡ್ರೈ ಫ್ರೂಟ್ಸ್  : 
 ಡ್ರೈ ಫ್ರೂಟ್ಸ್  ನಲ್ಲಿ ಕೂದಲು ಉದುರುವುದನ್ನು ತಡೆಯುವ ಎಲ್ಲಾ ಪೋಷಕಾಂಶಗಳು ಅಡಗಿವೆ.  ಕೂದಲು ಉದುರುವ ಸಮಸ್ಯೆ ಇದ್ದರೆ, ತಕ್ಷಣ ಡ್ರೈ ಫ್ರೂಟ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ಉತ್ತಮ  ಆಂಟಿ ಆಕ್ಸಿಡೆಂಟ್ ಆಗಿ, ಕಾರ್ಯನಿರ್ವಹಿಸುತ್ತದೆ.   ಇದು ನಿಮ್ಮ ಕೂದಲಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.


5. ಪಾಲಕ್  :
ಹಸಿರು ಎಲೆಗಳ ತರಕಾರಿಗಳಲ್ಲಿ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಪಾಲಕವನ್ನು ಸೇರಿಸಲಾಗಿದೆ. ಕಬ್ಬಿಣ, ಫೋಲೇಟ್, ವಿಟಮಿನ್ ಎ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ನಿಮ್ಮ ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.