Health Tips For Winters: ಚಳಿಗಾಲದಲ್ಲಿ ಬೆಟ್ಟದ ನೇರಳೆ ಆರೋಗ್ಯಕ್ಕೆ ವರದಾನವೇ ಸರಿ, ಇಲ್ಲಿದೆ ಬಳಕೆಯ ಸರಿಯಾದ ಪದ್ಧತಿ

Benefits Of Amla In Winter Season - ಬೆಟ್ಟದ ನೇರಳೆ ಹಣ್ಣು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ ಮತ್ತು ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಚಳಿಗಾಲದಲ್ಲಿ  (Winter Season) ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

Written by - Nitin Tabib | Last Updated : Nov 7, 2021, 07:03 PM IST
  • ಬೆಟ್ಟದ ನೇರಳೆ ಹಣ್ಣು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ
  • ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.
  • ಇದು ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
Health Tips For Winters: ಚಳಿಗಾಲದಲ್ಲಿ ಬೆಟ್ಟದ ನೇರಳೆ ಆರೋಗ್ಯಕ್ಕೆ ವರದಾನವೇ ಸರಿ, ಇಲ್ಲಿದೆ ಬಳಕೆಯ ಸರಿಯಾದ ಪದ್ಧತಿ title=
Vitamin C Rich Source (File Photo)

ನವದೆಹಲಿ: Benefits Of Amla In Winter Season - ಚಳಿಗಾಲ ಆರಂಭವಾಗಿದೆ. ಈ ಅವಧಿಯಲ್ಲಿ ನಾನಾ ರೋಗಗಳು ಹರಡುವ ಭೀತಿ ಇರುತ್ತದೆ. ಬದಲಾಗುತ್ತಿರುವ ಋತುವಿನ ಬೆಟ್ಟದ ನೆಲ್ಲಿಕಾಯಿಯ (Amla) ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಮ್ಲಾ ವಿಟಮಿನ್ ಸಿ ಯ ಉತ್ತಮ (Vitamin C Rich Source) ಮೂಲವಾಗಿದೆ ಮತ್ತು ಇದು ಉತ್ಕರ್ಷಣ (Antioxidant) ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಂದು ವೈದ್ಯರು ಮತ್ತು ಪೌಷ್ಟಿಕತಜ್ಞರು ಹೇಳುತ್ತಾರೆ. ಇದು ಚಳಿಗಾಲದಲ್ಲಿ ದೇಹದ ರೋಗನಿರೋಧಕ (Immunity) ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

ಈ ಲಾಭಗಳು ಸಿಗುತ್ತದೆ
ಚಳಿಗಾಲದಲ್ಲಿ ಕೂದಲು ಉದುರುವಿಕೆ (Hair Fall Problem in Winters), ಅಸಿಡಿಟಿ (Acidity), ತೂಕ ಹೆಚ್ಚಾಗುವುದು (Weight Gain) ಮುಂತಾದ ಚಳಿಗಾಲದ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಆಮ್ಲಾ ಚವನ್ ಪ್ರಾಶವನ್ನು ಸೇವಿಸುವುದರಿಂದ ನಿಮ್ಮ ದೇಹದ ರೋಗನಿರೋಧಕ (Immunity) ಶಕ್ತಿ ಹೆಚ್ಚಾಗುತ್ತದೆ. ಆಮ್ಲಾದ ಇತರ ಅದ್ಭುತಗಳ ಬಗ್ಗೆ ಹೇಳುವುದಾದರೆ, ಈ ಹಣ್ಣು ವೈರಲ್ ಸೋಂಕು, ಶೀತ ಮತ್ತು ಶೀತದಂತಹ ಸಾಮಾನ್ಯ ಚಳಿಗಾಲದ ಸಮಸ್ಯೆಗಳಿಂದ ದೂರವಿರಲು ಇದು ಸಹಾಯ ಮಾಡುತ್ತದೆ.

ಇದರೊಂದಿಗೆ ಮಧುಮೇಹ  (Diabetes), ಕ್ಯಾನ್ಸರ್, ಹೃದ್ರೋಗಗಳನ್ನು ದೂರವಿರಲು ಇದು ಸಹಾಯ ಮಾಡುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯ. ಹೀಗಿರುವಾಗ  ಮಲಬದ್ಧತೆಯನ್ನು (Constipation Problem)  ದೂರವಿರಿಸಲು ಆಮ್ಲಾ ಸಹಾಯಕವಾಗಿದೆಯೆಂದು ಸಾಬೀತುಪಡಿಸಬಹುದು.

ಇದನ್ನೂ ಓದಿ-ಮನೆಯಲ್ಲಿಯೇ ಕುಳಿತು ತಿಂಗಳಿಗೆ ರೂ.90 ಸಾವಿರ ಹಣ ಗಳಿಕೆಗೆ ಅವಕಾಶ ನೀಡುತ್ತಿದೆ, ಮಿಸ್ ಮಾಡ್ಬೇಡಿ

ಈ ರೀತಿ ಸೇವಿಸಿದರೆ ಉತ್ತಮ
ನೀವು ಚಳಿಗಾಲದಲ್ಲಿ ಆಮ್ಲಾ ಪುಡಿಯನ್ನು ಸೇವಿಸಬಹುದು. ಇದರ ರಸದ ಸೇವನೆಯೂ ಪ್ರಯೋಜನಕಾರಿ. 1 ಚಮಚ ನೆಲ್ಲಿಕಾಯಿ ಪುಡಿಯನ್ನು 1 ಕಪ್ ಬಿಸಿ ನೀರಿಗೆ ಬೆರೆಸಿ ಕುಡಿಯಿರಿ. ಇದರೊಂದಿಗೆ, ನೀವು ಬಯಸಿದರೆ, ನೀವು ನೆಲ್ಲಿಕಾಯಿ ಉಪ್ಪಿನಕಾಯಿ ಅಥವಾ ಮುರಬ್ಬವನ್ನು ತಯಾರಿಸಿ ಕೂಡ ಸೇವಿಸಬಹುದು. ಇದು ನಿಮ್ಮ ರುಚಿ ಮತ್ತು ಆರೋಗ್ಯ ಎರಡಕ್ಕೂ ಒಳ್ಳೆಯದು. ನೀವು ನೆಲ್ಲಿಕಾಯಿ ಕ್ಯಾಂಡಿಯನ್ನು ಸಹ ಬಳಸಬಹುದು. ಇದರ ಕ್ಯಾಂಡಿ, ಆಮ್ಲಾ ಸಿರಪ್ ಮತ್ತು ಪುಡಿ ಆಯುರ್ವೇದ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿವೆ.

ಇದನ್ನೂ ಓದಿ-2049ರ ವೇಳೆಗೆ ಮಿಲಿಟರಿಯನ್ನು ವಿಶ್ವದರ್ಜೆಗೆ ಏರಿಸಲು ಪ್ರಯತ್ನಿಸುತ್ತಿದೆ ಚೀನಾ: ಪೆಂಟಗನ್ ವರದಿ

(ಸೂಚನೆ -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಆಯುರ್ವೆದಾಚಾರ್ಯ ಹಾಗೂ ಡಯಟೀಶಿಯನ್ ಜೊತೆ ನಡೆಸಿದ ಮಾತುಕತೆಯನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಇದರ ಲಾಭಗಳನ್ನು ಪುಷ್ಟೀಕರಿಸುವುದಿಲ್ಲ. ಹೀಗಿರುವಾಗ ಈ ರೀತಿಯ ಉಪಚಾರ/ಔಷಧಿ/ಡಯಟ್ ಅನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ -T20 World Cup 2021: ಅಫ್ಘಾನಿಸ್ತಾನ್ ಮೇಲಿದೆ ಟೀಂ ಇಂಡಿಯಾದ ವಿಶ್ವಕಪ್ ಭವಿಷ್ಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News