Health Tipes: ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತವೆ.  ಉಷ್ಣಾಂಶ  ಹೆಚ್ಚಾದಂತೆಯೇ ಬಾಯಲ್ಲಿ ಹುಣ್ಣುಗಳು ಆಗುತ್ತವೆ. 


COMMERCIAL BREAK
SCROLL TO CONTINUE READING

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯನ್ನು ಚರ್ಮ ಸಮಸ್ಯೆಗೆ ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆಯಲ್ಲಿ  ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿರುವುದರಿಂದ, ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಹುಣ್ಣುಗಳನ್ನು  ಶಮನ ಗೊಳ್ಳುತ್ತವೆ. ಅದರ ಜೊತೆಯಲ್ಲಿ ಉರಿಯೂತ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ: Lifestyle: ತಿಂಗಳು ಗಟ್ಟಲೇ ಒಂದೇ ಬ್ರೆಶ್‌ನಿಂದ ಹಲ್ಲು ಉಜ್ಜುತ್ತೀರಾ..? ಹಾಗಿದ್ರೆ ಹುಷಾರ್‌..!


ಅರಿಶಿನ ಪುಡಿ: ಒಂದು ಚಮಚ ನೀರಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಹುಣ್ಣುಗಳ ಮೇಲೆ ಹಚ್ಚುವುದರಿಂದ  ಹುಣ್ಣುಗಳ ನಿಯಂತ್ರಿಸುತ್ತವೆ. ಸಂಶೋಧನೆ ಪ್ರಕಾರ ಅರಿಶಿನವು ನಂಜುನಿರೋಧಕ  ಶಕ್ತಿಯನ್ನು ಹೊಂದಿದೆ. ಇದು ಹುಣ್ಣುಗಳಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 


ಜೇನುತುಪ್ಪ: ಜೇನಿನಲ್ಲಿರುವ ಆಂಟಿಮೈಕ್ರೊಬಿಯಲ್ ಅಂಶವು ಹುಣ್ಣು ಮತ್ತು ಗಾಯಗಳನ್ನು ಶಮನ ಮಾಡುವ ಗುಣ  ಹೊಂದಿದೆ. ಹುಣ್ಣಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. 


ಉಪ್ಪು ನೀರು: ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಬೆರೆಸಿ, ಬಾಯಿಗೆ ಹಾಕಿಕೊಂಡು ನಂತರ ಗಾರ್ಗ್ಲ್ (ಮುಕ್ಕಳಿಸುವುದು) ಮಾಡುವುದರಿಂದ ಇದು ನಿಯಂತ್ರಣಕ್ಕೆ ಬರುತ್ತದೆ.  ಹೀಗೆ ಮಾಡುವುದರಿಂದ ನೋವು  ನಿಯಂತ್ರಣಕ್ಕೆ ಬರುತ್ತದೆ.   ದಿನಕ್ಕೆ ಮೂರು ಬಾರಿ ಹೀಗೆ ಮಾಡುವುದರಿಂದ ಬಾಯಿ ಹುಣ್ಣು ಶಮನಗೊಳ್ಳುತ್ತವೆ. 


ಇದನ್ನೂ ಓದಿ: Health Tips: ಗರಿಕೆ ಸಣ್ಣ ಹುಲ್ಲೆಂದು ಕಡೆಗಣಿಸಬೇಡಿ ಅದರಲ್ಲಿಯು ಅಡಗಿದೆ ಔಷಧಿ ಗುಣ 


ಲೋಳೆಸರ: ಲೋಳೆಸರವನ್ನು ಹುಣ್ಣಿರೋ ಜಾಗಕ್ಕೆ ಹಚ್ಚೋದ್ರಿಂದ ಬೇಗ ಗುಣಮುಖವಾಗುತ್ತದೆ.


ಎಳನೀರು
ಬೇಸಿಗೆಯಲ್ಲಿ ನಿತ್ಯ ಎಳನೀರು ಕುಡಿಯೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹದು. ದೇಹದ ಉಷ್ಣತೆ ಹೆಚ್ಚಳದಿಂದ ಬಾಯಿಯಲ್ಲಿ ಹುಣ್ಣು ಸಾಧ್ಯತೆ ಹೆಚ್ಚು ಇರುತ್ತದೆ. ವಿಟಮಿನ್ಸ್, ಮಿನರಲ್ಸ್, ಪೊಟ್ಯಾಷಿಯಂ, ಸೋಡಿಯಂ ಮುಂತಾದ ದೇಹಕ್ಕೆ ಅಗತ್ಯವಿರೋ ಪೌಷ್ಟಿಕಾಂಶಗಳು ಎಳನೀರಿನಲ್ಲಿ ಹೇರಳವಾಗಿರುವುದರಿಂದ ಬಾಯಿ ಹುಣ್ಣಿನ ಸಮಸ್ಯೆ ಇದು ಸೂಕ್ತ ಪರಿಹಾರವಾಗಿದೆ.  


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.