ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಗೂ ಕನಸುಗಳು (Dreams) ಬೀಳುತ್ತವೆ. ಕನಸಿನಲ್ಲಿ ಕಾಣುವ ವಿಷಯಗಳಿಗೂ ತಮ್ಮದೇ ಆದ ಮಹತ್ವ ಇರುತ್ತದೆ. ಕೆಲವು ಕನಸುಗಳು ಒಳ್ಳೆಯದು ಎಂದು ಸಾಬೀತಾದರೆ, ಕೆಲವು ಕನಸುಗಳನ್ನು ಅಶುಭ ಎಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೋಡಿದರೆ, (Gold in dreams) ಅದನ್ನು ಬಹಳ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕನಸಲ್ಲಿ ಕಂಡರೆ : 
ಕನಸಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು (Jewellery In Dreams) ನೋಡಿದರೆ ಮುಂಬರುವ ಸಮಯದಲ್ಲಿ ಬಹಳಷ್ಟು ಖರ್ಚು ಮಾಡಲಿದ್ದೀರಿ ಎಂದರ್ಥ. ಹಾಗಾಗಿ ಹಣವನ್ನು (Money) ಬಹಳ ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಮುಖ್ಯ. 


ಇದನ್ನೂ ಓದಿ : Solar Eclipse 2021: ಈ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣ


ಕನಸಿನಲ್ಲಿ ಆಭರಣವನ್ನು ಉಡುಗೊರೆಯಾಗಿ ನೀಡುವುದು :
ಯಾರಿಗಾದರೂ ಕನಸಿನಲ್ಲಿ ಆಭರಣವನ್ನು ಉಡುಗೊರೆಯಾಗಿ (Jewellery  gift) ನೀಡಿದಂತೆ ಕಂಡರೆ, ಅದನ್ನು ಬಹಳ ಶುಭ (good luck) ಎಂದು ನಂಬಲಾಗುತ್ತದೆ. ಇದು ಭವಿಷ್ಯದಲ್ಲಿ ಉತ್ತಮ ಕೆಲಸ, ಬಡ್ತಿ ಇತ್ಯಾದಿಗಳನ್ನು ಪಡೆಯುವ ಮುನ್ಸೂಚನೆ ಎನ್ನಲಾಗಿದೆ.  


 ಆಭರಣ ಒಂದು ಧರಿಸಿದರೆ : 
ಕನಸಿನಲ್ಲಿ ನೀವು ಆಭರಣ ಧರಿಸಿರುವುದನ್ನು ಕಂಡರೆ, ಅದನ್ನು ಅಶುಭ ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ (Swapna Shaastra) ಪ್ರಕಾರ ಇಂಥ ಕನಸು ಕಂಡರೆ ನಿಮಗೆ ಹತ್ತಿರವಾದವರು ನಿಮ್ಮಿಂದ ದೂರವಾಗುತ್ತಾರೆ ಎಂದರ್ಥ. ಹಾಗಾಗಿ ಸಮಧಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. 


ಇದನ್ನೂ ಓದಿ : ತುಳಸಿ ಪೂಜೆಗೆ ಕೆಲವೇ ದಿನಗಳು ಬಾಕಿ, ತುಳಸಿ ವಿವಾಹದ ಸಂಪೂರ್ಣ ವಿಧಾನ, ಮುಹೂರ್ತ ಹೀಗಿದೆ


ಕನಸಿನಲ್ಲಿ ಚಿನ್ನಾಭರಣ ಕದಿಯುವುದು : 
ನಿಮ್ಮ ಕನಸಿನಲ್ಲಿ ಯಾವುದೇ ಆಭರಣಗಳು ಕಳ್ಳತನವಾಗುವುದನ್ನು ನೋಡಿದರೆ, ನಿಮ್ಮ  ಎದುರಾಳಿಯು ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಎದುರಾಳಿಯ ಪಿತೂರಿಯಿಂದ ನಿಮಗೆ ಹಾನಿಯಾಗವ ಸಾಧ್ಯತೆಗಳನ್ನು ಇದು ತೋರಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.