Solar Eclipse 2021: ಈ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣ

Solar Eclipse 2021: ಪಂಚಾಂಗಗಳ ಪ್ರಕಾರ, ಈ ವರ್ಷದ ಕೊನೆಯ ಸೂರ್ಯಗ್ರಹಣವು 04 ಡಿಸೆಂಬರ್ 2021 ರಂದು ಸಂಭವಿಸಲಿದೆ. ಡಿಸೆಂಬರ್ 4 ರಂದು, ಅಮಾವಾಸ್ಯೆ ಅಂದರೆ ಮಾರ್ಗಶಿರ ಮಾಸದ ಕೃಷ್ಣ ಪಕ್ಷ ತಿಥಿಯಂದು ಸಂಭವಿಸಲಿದೆ.

Written by - Yashaswini V | Last Updated : Nov 10, 2021, 07:45 AM IST
  • ಈ ವರ್ಷದ ಕೊನೆಯ ಸೂರ್ಯಗ್ರಹಣವು 04 ಡಿಸೆಂಬರ್ 2021 ರಂದು ಸಂಭವಿಸಲಿದೆ
  • ಜ್ಯೋತಿಷ್ಯದ ಪ್ರಕಾರ, ಸೂರ್ಯಗ್ರಹಣವು ಖಗೋಳ ಘಟನೆಯಾಗಿದೆ
  • ಸೂರ್ಯಗ್ರಹಣ ಸಂಭವಿಸಿದಾಗ, ಅದು ವಿಶೇಷವಾಗಿ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ
Solar Eclipse 2021: ಈ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣ title=
Surya grahan

Solar Eclipse 2021: ಈ ವರ್ಷ ಅಂದರೆ 2021ನೇ ಇಸವಿ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಮಯದಲ್ಲಿ ವರ್ಷದ ಕೊನೆಯ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಸಂಭವಿಸಲಿದೆ.  ಪಂಚಾಂಗಗಳ ಪ್ರಕಾರ, ಈ ವರ್ಷದ ಕೊನೆಯ ಸೂರ್ಯಗ್ರಹಣವು 04 ಡಿಸೆಂಬರ್ 2021 ರಂದು ಸಂಭವಿಸಲಿದೆ. ಡಿಸೆಂಬರ್ 4 ರಂದು, ಅಮಾವಾಸ್ಯೆ ಅಂದರೆ ಮಾರ್ಗಶಿರ ಮಾಸದ ಕೃಷ್ಣ ಪಕ್ಷ ತಿಥಿಯಂದು ಸಂಭವಿಸಲಿದೆ.

ಈ ಬಾರಿ ಈ ಸೂರ್ಯಗ್ರಹಣದ (Surya Grahan) ಪರಿಣಾಮವನ್ನು ದಕ್ಷಿಣ ಆಫ್ರಿಕಾ, ಅಂಟಾರ್ಟಿಕಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ ಮತ್ತು ಅಟ್ಲಾಂಟಿಕ್ ನ ದಕ್ಷಿಣ ಭಾಗದ ಮೇಲೆ ಹೆಚ್ಚು ಕಾಣಬಹುದು. ಆದರೆ, ಭಾರತದಲ್ಲಿ ಇದರ ಪ್ರಭಾವ ಹೆಚ್ಚಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Intelligent Zodiac Sign: ಈ 5 ರಾಶಿಯ ಹುಡುಗಿಯರು ತುಂಬಾ ಪ್ರತಿಭಾವಂತರು

ಜ್ಯೋತಿಷ್ಯದ  (Astrology) ಪ್ರಕಾರ, ಸೂರ್ಯಗ್ರಹಣವು ಖಗೋಳ ಘಟನೆಯಾಗಿದೆ. ಸೂರ್ಯಗ್ರಹಣ ಸಂಭವಿಸಿದಾಗ, ಅದು ವಿಶೇಷವಾಗಿ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿಯೂ ಸಹ ಸೂರ್ಯಗ್ರಹಣದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗೋಚರಿಸುತ್ತದೆ. ಈ ಗ್ರಹಣವು ಕೆಲವು ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಿದರೆ, ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲಗಳನ್ನು ನೀಡಲಿದೆ.

ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ?
ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ, ಭೂಮಿಯ ಮೇಲಿನ ಸೂರ್ಯನ ಚಿತ್ರವು ಸಂಪೂರ್ಣವಾಗಿ ಅಥವಾ ಭಾಗಶಃ ಅಸ್ಪಷ್ಟವಾಗಿರುತ್ತದೆ. ಇದನ್ನು ಸೂರ್ಯಗ್ರಹಣ ಎನ್ನುವರು.

ಇದನ್ನೂ ಓದಿ- Last Lunar eclipse 2021: ವರ್ಷದ ಕೊನೆಯ ಚಂದ್ರಗ್ರಹಣ ಯಾವಾಗ? ಯಾರ ಮೇಲೆ ಪರಿಣಾಮ ಬೀರಲಿದೆ

ಈ ಬಾರಿಯ ಸೂರ್ಯಗ್ರಹಣದಲ್ಲಿಲ್ಲ ಸೂತಕ ಕಾಲ:
ಸಾಮಾನ್ಯವಾಗಿ ಗ್ರಹಣ ಸಂಭವಿಸಿದಾಗ ಸೂತಕ ಕಾಲವು ನಡೆಯುತ್ತದೆ, ಆದರೆ ಈ ಬಾರಿ ಅಂತಹದ್ದೇನೂ ಸಂಭವಿಸುವುದಿಲ್ಲ. ವಾಸ್ತವವಾಗಿ, ಡಿಸೆಂಬರ್ 4 ರಂದು ಸೂರ್ಯಗ್ರಹಣವು ಒಂದು ನೆರಳು. ನೆರಳು ಇದ್ದಾಗ ಸೂತಕದ ನಿಯಮಗಳನ್ನು ಪಾಲಿಸುವುದಿಲ್ಲ. ಸಾಮಾನ್ಯವಾಗಿ, ಸಂಪೂರ್ಣ ಸೂರ್ಯಗ್ರಹಣವು ಸಂಭವಿಸಿದಾಗ ಸೂತಕ ಅವಧಿಯು ಸಂಭವಿಸುತ್ತದೆ. ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ. ಹೌದು, ಖಂಡಿತವಾಗಿಯೂ ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.

ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಶುಕ್ರವಾರ, ನವೆಂಬರ್ 19, 2021 ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಸುಮಾರು ಆರು ಗಂಟೆಗಳ ಕಾಲ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News