ತುಳಸಿ ಪೂಜೆಗೆ ಕೆಲವೇ ದಿನಗಳು ಬಾಕಿ, ತುಳಸಿ ವಿವಾಹದ ಸಂಪೂರ್ಣ ವಿಧಾನ, ಮುಹೂರ್ತ ಹೀಗಿದೆ

ಏಕಾದಶಿ ಮತ್ತು ತುಳಸಿ ವಿವಾಹದ ತಿಥಿ ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಬಾರಿ 14ನೇ ನವೆಂಬರ್ ಬೆಳಿಗ್ಗೆ 05:48 ಕ್ಕೆ ಈ ಮುಹೂರ್ತ ಆರಂಭವಾಗುತ್ತದೆ.

Written by - Ranjitha R K | Last Updated : Nov 9, 2021, 07:50 PM IST
  • ತುಳಸಿ ವಿವಾಹಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ.
  • ತುಳಸಿ ವಿವಾಹ ನೆರವೇರಿಸಿದರೆ ವಿಷ್ಣುವಿನ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ.
  • ಹಿಂದೂ ಧರ್ಮದ ಪ್ರಕಾರ ಈ ದಿನದಿಂದಲೇ ಮಂಗಳಕರ ಕಾರ್ಯಗಳು ಪ್ರಾರಂಭವಾಗುತ್ತವೆ.
ತುಳಸಿ ಪೂಜೆಗೆ ಕೆಲವೇ ದಿನಗಳು ಬಾಕಿ, ತುಳಸಿ ವಿವಾಹದ ಸಂಪೂರ್ಣ ವಿಧಾನ, ಮುಹೂರ್ತ ಹೀಗಿದೆ    title=
ತುಳಸಿ ವಿವಾಹಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. (file photo)

ನವದೆಹಲಿ : Tulsi Vivah 2021: ತುಳಸಿ ವಿವಾಹಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ.  ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ವಿಧಿ ವತ್ತಾಗಿ ತುಳಸಿ ವಿವಾಹ ನೆರವೇರಿಸಿದರೆ  ವಿಷ್ಣುವಿನ (Load Vishnu) ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ. ತುಳಸಿ ವಿವಾಹವನ್ನು ದೇವುತಾನಿ ಏಕಾದಶಿಯ ದಿನದಂದು ನಡೆಸಲಾಗುತ್ತದೆ ಮತ್ತು ಹಿಂದೂ ಧರ್ಮದ ಪ್ರಕಾರ  ಈ ದಿನದಿಂದಲೇ ಮಂಗಳಕರ ಕಾರ್ಯಗಳು ಪ್ರಾರಂಭವಾಗುತ್ತವೆ. ತುಳಸಿ ವಿವಾಹವನ್ನು (Tulsi Vivah Puja Vidhi) ಶಿಸ್ತು ಬದ್ದವಾಗಿ ನೆರವೇರಿಸಿದರೆ, ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಶಾಂತಿ ನೆಲೆಯಾಗುತ್ತದೆ. ತುಳಸಿ ವಿವಾಹ ಮಾಡಿದರೆ ಕನ್ಯಾದಾನ (Kanya dana) ಮಾಡಿದ ಪುಣ್ಯವೇ ಪ್ರಾಪ್ತಿಯಾಗುತ್ತದೆಯಂತೆ. 

ಏಕಾದಶಿ ಮತ್ತು ತುಳಸಿ  (Tulsi Vivah) ವಿವಾಹದ ತಿಥಿ ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಬಾರಿ 14ನೇ ನವೆಂಬರ್ ಬೆಳಿಗ್ಗೆ 05:48 ಕ್ಕೆ ಈ ಮುಹೂರ್ತ (Tulsi Vivah 2021 Shubh Muhurat) ಆರಂಭವಾಗುತ್ತದೆ. 15 ನೇ ನವೆಂಬರ್ 2021ರ 06:39 ಕ್ಕೆ ಕೊನೆಗೊಳ್ಳುತ್ತದೆ. ತುಳಸಿ ವಿವಾಹವು ನವೆಂಬರ್ 15  ರಂದು ನಡೆಯಲಿದೆ. ದೇವುತಣಿ ಏಕಾದಶಿಯಂದು ವ್ರತವನ್ನು ಆಚರಿಸುವ ಮಹಿಳೆಯರು, ನವೆಂಬರ್ 15 ರಂದು ಮಧ್ಯಾಹ್ನ 01:10 ರಿಂದ 03:19 ರವರೆಗೆ ಉಪವಾಸವನ್ನು ಬಿಡಬಹುದು.  

ಇದನ್ನೂ ಓದಿ : Last Lunar eclipse 2021: ವರ್ಷದ ಕೊನೆಯ ಚಂದ್ರಗ್ರಹಣ ಯಾವಾಗ? ಯಾರ ಮೇಲೆ ಪರಿಣಾಮ ಬೀರಲಿದೆ

ತುಳಸಿ ವಿವಾಹದ ಪೂಜಾ ವಿಧಾನ :
ಈ ದಿನದಂದು ತುಳಸಿ ಶಾಲಿಗ್ರಾಮವನ್ನು ಮದುವೆಯಾಗುತ್ತಾಳೆ ಮತ್ತು ಮಹಿಳೆಯರು ಲಕ್ಷ್ಮೀ ದೇವಿಯ (Godess Lakshmi) ಹೆಸರಿನಲ್ಲಿ ಉಪವಾಸವನ್ನು ಮಾಡುತ್ತಾರೆ. ಏಕೆಂದರೆ ತುಳಸಿಯು ವಿಷ್ಣುವಿಗೆ ಬಹಳ ಪ್ರಿಯ. ಶಾಲಿಗ್ರಾಮವು ವಿಷ್ಣುವಿನ ಒಂದು ರೂಪವಾಗಿದೆ. ತುಳಸಿ ವಿವಾಹದ ದಿನ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ಉಪವಾಸ ವ್ರತ ಕೈಗೊಳ್ಳಬೇಕು. ಇದರ ನಂತರ, ವಿಷ್ಣುವನ್ನು (Lord Vishnu) ಪೂಜಿಸಿ  ದೇವರ ಮುಂದೆ ದೀಪವನ್ನು ಬೆಳಗಿಸಿ. ವಿಷ್ಣುವಿಗೆ ಹಣ್ಣು ಮತ್ತು ಹೂವುಗಳನ್ನು ಅರ್ಪಿಸಿ. ಏಕಾದಶಿಯ ದಿನದಂದು ತುಳಸಿಯನ್ನು (Tulsi) ವಿಷ್ಣುವಿಗೆ ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ತುಳಸಿದಳವಿಲ್ಲದೆ ಭಗವಾನ್ ವಿಷ್ಣು ಭೋಗವನ್ನು ಸ್ವೀಕರಿಸುವುದಿಲ್ಲ. ಸಂಜೆ ವಿಷ್ಣುಸಹಸ್ರನಾಮ ಪಠಿಸಿ. ಏಕಾದಶಿಯ ದಿನದಂದು ಉಪವಾಸವನ್ನು ಆಚರಿಸುವ ವ್ಯಕ್ತಿಯು ಸಾತ್ವಿಕ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು. ಈ ದಿನ ಆಹಾರವನ್ನು ಸೇವಿಸುವುದಿಲ್ಲ. ಈ ದಿನ ವಿಷ್ಣುವಿನ ಜೊತೆಗೆ ತುಳಸಿ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ರಾತ್ರಿ ತುಳಸಿ ಮತ್ತು ಶಾಲಿಗ್ರಾಮದ ವಿವಾಹವನ್ನು ನೆರವೇರಿಸಿ. 

ಇದನ್ನೂ ಓದಿ : Astrology: ತುಂಬಾ ಭಾವನಾತ್ಮಕವಾಗಿರುತ್ತಾರೆ ಈ 3 ರಾಶಿಯ ಜನ , ಅವರ ಹೃದಯವು ಪರಿಶುದ್ಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News