June 1 Horoscope 2022: ಈ ರಾಶಿಗಳ ಪಾಲಿಗೆ ಜೂನ್ ತಿಂಗಳ ಆರಂಭ ಬಂಬಾಟಾಗಿರಲಿದೆ
Lukcy Zodiac Sign: ನಾಳೆ ಜೂನ್ 1, 2022 ರಂದು ಹೊಸ ತಿಂಗಳು ಪ್ರಾರಂಭವಾಗಲಿದೆ. ನಾಳಿನ ದಿನವು ಕೆಲವರಿಗೆ ಪ್ರಯೋಜನಕಾರಿಯಾಗಲಿದೆ. ಈ ರಾಶಿಗಳ ಮೇಲೆ ತಾಯಿ ಲಕ್ಷ್ಮಿ ವಿಶೇಷ ಅನುಗ್ರಹವನ್ನು ಹೊಂದಿದ್ದಾಳೆ. ಈ ರಾಶಿಚಕ್ರ ಚಿಹ್ನೆಗಳ ಜನರ ಬಗ್ಗೆ ತಿಳಿಯೋಣ.
Zodiac Sign: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹವಿರುತ್ತದೆ. ಗ್ರಹಗಳು ಮತ್ತು ನಕ್ಷತ್ರಗಳ ನಡೆಯು ವ್ಯಕ್ತಿಗಳ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಯಾವುದೇ ಗ್ರಹದ ರಾಶಿ ಬದಲಾವಣೆ ಅಥವಾ ನಡೆಯ ಪರಿಣಾಮವನ್ನು ನೀವು ವ್ಯಕ್ತಿಯ ಜೀವನದ ಮೇಲೆ ಸುಲಭವಾಗಿ ನೋಡಬಹುದು. ಜೂನ್ 1, 2022 ರ ದಿನವು ಕೆಲ ರಾಶಿಗಳ ಜನರ ಪಾಲಿಗೆ ತುಂಬಾ ಶುಭಕರವಾಗಿರಲಿದೆ. ದೇವಿ ಲಕ್ಷ್ಮಿಯ ಕೃಪೆ ಅವರ ಮೇಲಿರುತ್ತದೆ. ಈ ರಾಶಿಗಳ ಜನರ ಮಲಗಿರುವ ಭಾಗ್ಯವೂ ಕೂಡ ಎಚ್ಚೆತ್ತುಕೊಳ್ಳುತ್ತದೆ. ಅಂತಹ 4 ರಾಶಿಗಳ ಜನರ ಬಗ್ಗೆ ತಿಳಿಯೋಣ ಬನ್ನಿ.
ಜೂನ್ 1 ರ ದಿನವು ಈ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ
ಮೇಷ - ಈ ರಾಶಿಯ ಜನರಿಗೆ ನಾಳಿನ ದಿನ ತುಂಬಾ ವಿಶೇಷವಾಗಿರಲಿದೆ. ಈ ಜನರು ಆಸ್ತಿ ವ್ಯವಹಾರ ಇತ್ಯಾದಿಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಮಾಡುವ ಕೆಲಸದಲ್ಲಿ ನೀ ಯಶಸ್ಸನ್ನು ಪಡೆಯುವಿರಿ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭವಾಗಲಿದೆ. ನಿಯಮಿತ ಕೆಲಸವು ಲಾಭದಾಯಕವಾಗಿರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಸಮಯದಲ್ಲಿ ವ್ಯಕ್ತಿಯ ಗೌರವದಲ್ಲಿ ಹೆಚ್ಚಾಗಲಿದೆ. ದೇವಿ ಲಕ್ಷ್ಮಿಯ ಅನುಗ್ರಹದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಮತ್ತು ಕೆಲವು ಶುಭ ಸಮಾಚಾರಗಳು ನಿಮಗೆ ಪ್ರಾಪ್ತಿಯಾಗಲಿವೆ.
ಮಿಥುನ - ಈ ರಾಶಿಯ ಜನರು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ. ದೀರ್ಘಕಾಲದಿಂದ ಸಿಕ್ಕಿಹಾಕಿಕೊಂಡ ಹಣ ಮರಳಿ ಪಡೆಯುವಿರಿ. ಈ ರಾಶಿಯವರಿಗೆ ಈ ವಾರ ಶುಭವಾಗಲಿದೆ. ಹೊಸ ಕಾಯಿಲೆಗೆ ಗುರಿಯಾಗುವಿರಿ ಆದರೆ ಅದು ಬೇಗನೆ ಗುನಮುಖವಾಗಲಿದೆ. ನೀವು ಮಾಡುವ ಹೊಸ ಯೋಜನೆ ಭವಿಷ್ಯದಲ್ಲಿ ಲಾಭ ನೀಡಲಿದೆ.
ವೃಶ್ಚಿಕ - ಆಸ್ತಿ ಇತ್ಯಾದಿ ಕೆಲಸಗಳಲ್ಲಿ ಲಾಭದ ಲಕ್ಷಣಗಳು ಗೋಚರಿಸುತ್ತಿವೆ. ಹೊಸ ಯೋಜನೆಗಳನ್ನು ರೂಪಿಸಲು ನಾಳೆ ವಿಶೇಷ ದಿನವಾಗಿರಲಿದೆ. ವ್ಯಾಪಾರದ ದೃಷ್ಟಿಯಿಂದಲೂ ದಿನವು ಉತ್ತಮವಾಗಿರುತ್ತದೆ. ಆದರೆ ಈ ಸಮಯದಲ್ಲಿ ವ್ಯವಹಾರಗಳಲ್ಲಿ ಸ್ವಲ್ಪ ಜಾಗ್ರತೆವಹಿಸಿ. ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು.
ಇದನ್ನೂ ಓದಿ-Jyotish Shastra: ಕೇವಲ 5 ದಿನಗಳ ಬಳಿಕ ಬದಲಾಗಲಿದೆ ಈ ಮೂರು ರಾಶಿಗಳ ಜನರ ಭಾಗ್ಯ, ಕಾರಣ ಇಲ್ಲಿದೆ
ಕುಂಭ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಜನರು ಆತಂಕದಿಂದ ಮುಕ್ತರಾಗುತ್ತಾರೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕುಂಭ ರಾಶಿಯ ಜನರು ಪ್ರವಾಸಕ್ಕೆ ಕೈಗೊಳ್ಳಬಹುದು. ಲಕ್ಷ್ಮಿಯ ಕೃಪೆಯಿಂದ ಧನಾಗಮನವಾಗಲಿದೆ. ಭೂಮಿ ಇತ್ಯಾದಿ ವ್ಯವಹಾರಗಳನ್ನು ಮಾಡಬಹುದು.
ಇದನ್ನೂ ಓದಿ-Zodiac Signs: ಈ ರಾಶಿಯ ವ್ಯಕ್ತಿಗಳು ತುಂಬಾ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ
(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.