Jyotish Shastra: ಕೇವಲ 5 ದಿನಗಳ ಬಳಿಕ ಬದಲಾಗಲಿದೆ ಈ ಮೂರು ರಾಶಿಗಳ ಜನರ ಭಾಗ್ಯ, ಕಾರಣ ಇಲ್ಲಿದೆ

Shani Vakri 2022: ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುವ ಶನಿ ಕಳೆದ ಏಪ್ರಿಲ್ 29ಕ್ಕೆ ತನ್ನ ಸ್ವಂತ ರಾಶಿಯಾಗಿರುವ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಬರುವ ಜೂನ್ 5ರಂದು ಆತ ತನ್ನ ಸ್ವಂತ ರಾಶಿಯಲ್ಲಿಯೇ ವಕ್ರನಡೆ ಅನುಸರಿಸಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆ 3 ರಾಶಿಗಳ ಜನರ ಪಾಲಿಗೆ ಜಬರ್ದಸ್ತ್ ಲಾಭ ನೀಡಲಿದೆ.   

Written by - Nitin Tabib | Last Updated : May 31, 2022, 06:29 PM IST
  • ಮುಂದಿನ ಐದು ದಿನಗಳ ಬಳಿಕ ಈ ರಾಶಿಗಳ ಭಾಗ್ಯ ಬದಲಾವಣೆ
  • ಈ ಮೂರು ರಾಶಿಗಳ ಜನರು ಎಚ್ಚರದಿಂದ ಇರಬೇಕು.
  • ಯಾವ ರಾಶಿಗಳಿಗೆ ಹಾನಿ ಹಾಗೂ ಹಾವ ರಾಶಿಗಳಿಗೆ ಲಾಭ ತಿಳಿದುಕೊಳ್ಳೋಣ ಬನ್ನಿ
Jyotish Shastra: ಕೇವಲ 5 ದಿನಗಳ ಬಳಿಕ ಬದಲಾಗಲಿದೆ ಈ ಮೂರು ರಾಶಿಗಳ ಜನರ ಭಾಗ್ಯ, ಕಾರಣ ಇಲ್ಲಿದೆ title=
Jyotish Shastra

Shani Vakri 2022 Effect on Zodiac Sign: ಸಾಮಾನ್ಯವಾಗಿ ಶನಿ ಗ್ರಹದ ಸ್ಥಿತಿಯಲ್ಲಾಗುವ ಸಣ್ಣ ಬದಲಾವಣೆ ಕೂಡ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಇದೀಗ ಜೂನ್ ತಿಂಗಳ ಆರಂಭದಲ್ಲಿಯೇ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಹೌದು, ಜೂನ್ 5, 2022 ರಿಂದ ಶನಿ ವಕ್ರನಡೆ ಅನುಸರಿಸಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆ ಕೆಲವರ ಪಾಲಿಗೆ ನಕಾರಾತ್ಮಕ ಸಾಬೀತಾದರೆ, ಇನ್ನೂ ಕೆಲವರ ಪಾಲಿಗೆ ಸಕಾರಾತ್ಮಕ ಸಾಬೀತಾಗಲಿದೆ. ಪ್ರಸ್ತುತ ಸುದೀರ್ಘ 30 ವರ್ಷಗಳ ಬಳಿಕ ಶನಿ ತನ್ನ ಸ್ವಂತ ರಾಶಿಯಾಗಿರುವ ಕುಂಭ ರಾಶಿಯಲ್ಲಿ ಗೋಚರಿಸುತ್ತಿದ್ದಾನೆ. 

ಅಕ್ಟೋಬರ್ 2022ರವರೆಗೆ ಶನಿಯ ಈ ವಕ್ರನಡೆ ಸಾಗಲಿದೆ
ಜೂನ್ 5 ರಂದು ವಕ್ರನಡೆಯನ್ನು ಅನುಸರಿಸಲಿರುವ ಶನಿ ಮಹಾರಾಜ, ಅಕ್ಟೋಬರ್ 2022ರವರೆಗೆ ವಕ್ರನಡೆಯ ಸ್ಥಿತಿಯಲ್ಲಿಯೇ ಇರಲಿದ್ದಾನೆ. ಈ ಅವಧಿಯಲ್ಲಿ ಶನಿಯ ಎರಡೂವರೆ ವರ್ಷಗಳ ಕಾಟ ಹಾಗೂ ಸಾಡೇಸಾತಿ ಇರುವವರಿಗೆ ಹೆಚ್ಚು ತೊಂದರೆ ನೀಡಲಿದ್ದಾನೆ. ಇದಲ್ಲದೆ ಶನಿ ದುರ್ಬಲ ಇರುವ ಜಾತಕದವರಿಗೂ ಕೂಡ ಇದರಿಂದ ಹೆಚ್ಚು ತೊಂದರೆ ಉಂಟಾಗಲಿದೆ. ಸಾಮಾನ್ಯವಾಗಿ ಶನಿ ಜನರ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುವ ಕಾರಣ ಹೆಚ್ಚು ಆತಂಕಪಡುವ ಅವಶ್ಯಕತೆ ಇಲ್ಲ. ಅಸಹಾಯಕರಿಗೆ ಮತ್ತು ನಿರ್ಗತಿಗರಿಗೆ ನೆರವು ನೀಡಿ. ಸ್ವಚ್ಚತಾ ಕರ್ಮಿಗಳು ಹಾಗೂ ಕಷ್ಟಪಟ್ಟು ದುಡಿದು ತಿನ್ನುವವರಿಗೆ ಕಾಟ ಕೊಡಬೇಡಿ. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಿ. ಶನಿಯ ಈ ವಕ್ರನಡೆಯ ಅವಧಿಯಲ್ಲಿ ಮೇಷ, ಕರ್ಕ ಹಾಗೂ ಸಿಂಹ ರಾಶಿಯ ಜಾತಕದವರು ಎಚ್ಚರಿಕೆವಹಿಸಬೇಕಾದ ಅವಶ್ಯಕತೆ ಇದೆ. 

ವೃಷಭ ರಾಶಿ - ವೃಷಭ ರಾಶಿಯ ಜಾತಕದವರ ಪಾಲಿಗೆ ಶನಿಯ ರಾಶಿ ಪರಿವರ್ತನೆ ಶುಭ ಫಲಗಳನ್ನು ನೀಡಿದ್ದು, ವಕ್ರನಡೆಯಲ್ಲಿರುವ ಶನಿ ಕೂಡ ಇವರಿಗೆ ಶುಭ ಫಲಗಳನ್ನು ನೀಡಲಿದ್ದಾನೆ. ಹೊಸ ನೌಕರಿಯ ಹುಡುಕಾಟದಲ್ಲಿರುವವರಿಗೆ ಅತ್ಯುತ್ತಮ ಉದ್ಯೋಗಾವಕಾಶ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಇನ್ನುಳಿದಂತೆ ಈಗಾಗಲೇ ಉದ್ಯೋಗದಲ್ಲಿರುವವರಿಗೆ ನೌಕರಿಯಲ್ಲಿ ಬಡ್ತಿ-ಇಂಕ್ರೀಮೆಂಟ್ ಸಿಗಲಿದೆ. ಒಟ್ಟಾರೆ ಹೇಳುವುದಾದರೆ, ವೃತ್ತಿ ಜೀವನ, ಹಣಕಾಸು, ರಿಲೇಶನ್ಶಿಪ್ ಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿವೆ ಹಾಗೂ ಸಾಕಷ್ಟು ಸುಖ-ಸಂತೋಷ ಲಭಿಸಲಿದೆ. ಉತ್ತಮ ಫಲಪ್ರಾಪ್ತಿಗಾಗಿ ಶನಿಯನ್ನು ಪೂಜಿಸಿ.

ಕನ್ಯಾ ರಾಶಿ - ಕನ್ಯಾ ರಾಶಿಯ ಜನರಿಗೆ ವಕ್ರ ನಡೆಯಲ್ಲಿರುವ ಶನಿ ಬಡ್ತಿ ನೀಡಲಿದ್ದಾನೆ. ಹೊಸ ನೌಕರಿ, ಪದೋನ್ನತಿ, ವೇತನ ವೃದ್ಧಿ ಸಿಗುವ ಯೋಗಗಳು ಗೋಚರಿಸುತ್ತಿವೆ. ನೌಕರಿ ಬದಲಾಯಿಸಲು ಬಯಸುವವರ ಹಾಗೂ ವರ್ಗಾವಣೆ ಬಯಸುವವರ ಇಚ್ಛೆಯೂ ಕೂಡ ಈಡೇರಲಿದೆ. 

ಇದನ್ನೂ ಓದಿ-Zodiac change in June 2022: ಜೂನ್ ತಿಂಗಳಲ್ಲಿ, ಈ ನಾಲ್ಕು ರಾಶಿಯವರಿಗೆ ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿ

ಮಕರ ರಾಶಿ: ಮಕರ ರಾಶಿಯ ಜಾತಕದವರ ಪಾಲಿಗೆ ಶನಿಯ ಈ ವಕ್ರ ನಡೆ ಜೀವನದಲ್ಲಿ ಯಶಸ್ಸನ್ನು ನೀಡಲಿದೆ. ನಿಂತುಹೋದ ನಿಮ್ಮ ಕೆಲಸಗಳು ಪೂರ್ತಿಯಾಗಲಿವೆ. ವೃತ್ತಿಜೀವನದಲ್ಲಿ ಭಾರಿ ಯಶಸ್ಸು ಸಿಗಲಿದೆ. ಧನಲಾಭದ ಎಲ್ಲಾ ಚಿಹ್ನೆಗಳು ಗೋಚರಿಸುತ್ತಿವೆ. ಒಟ್ಟಾರೆ ಈ ಸಮಯ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. 

ಇದನ್ನೂ ಓದಿ-ಈ 5 ರಾಶಿಗಳಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ..! ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಹೆಚ್ಚಲಿದೆ ವೇತನ

(ಹಕ್ಕು ತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News