ನವದೆಹಲಿ: ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದ 3ನೇ ತಿಂಗಳು ಪ್ರಾರಂಭವಾಗಿದೆ. ಮೇ 17ರಿಂದ ಜ್ಯೇಷ್ಠ ಮಾಸ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಈ ತಿಂಗಳ ವಿಶೇಷ ಮಹತ್ವವನ್ನು ಹೇಳಲಾಗಿದೆ. ಜ್ಯೇಷ್ಠ ಮಾಸವನ್ನು ಜೇಷ್ಠ ಮಾಸ ಎಂತಲೂ ಕರೆಯಲಾಗುತ್ತದೆ. ಜ್ಯೇಷ್ಠ ಮಾಸವನ್ನು ಸೂರ್ಯ ದೇವರನ್ನು ಪೂಜಿಸಲು ಮತ್ತು ಹನುಮಾನ್ ಜಿಯನ್ನು ಪೂಜಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಇವರನ್ನು ಪೂಜಿಸುವುದರಿಂದ ವಿಶೇಷ ಫಲಗಳು ಲಭಿಸುತ್ತವೆ. ಅಲ್ಲದೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ತಿಂಗಳಲ್ಲಿಯೇ ಹನುಮಂತನು ತನ್ನ ಪ್ರಭು ಶ್ರೀರಾಮನನ್ನು ಭೇಟಿಯಾದನೆಂದು ನಂಬಲಾಗಿದೆ. ಈ ಮಾಸದಲ್ಲಿ ಕೆಲವು ವಿಶೇಷವಾದ ಕೆಲಸಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆಗೆ ಪಾತ್ರರಾಗಬಹುದು. ಅಲ್ಲದೆ ನಿಮ್ಮ ಜೀವನವನ್ನು ಮತ್ತಷ್ಟು ಸಮೃದ್ಧಿಗೊಳಿಸಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿರಿ


ಜ್ಯೇಷ್ಠ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಹಾಸಿಗೆ ಬಿಡಬೇಕು ಎಂಬುದು ಧಾರ್ಮಿಕ ನಂಬಿಕೆ. ಈ ತಿಂಗಳಲ್ಲಿ ಹಗಲುಗಳು ದೀರ್ಘವಾಗಿರುತ್ತವೆ ಮತ್ತು ರಾತ್ರಿಗಳು ಚಿಕ್ಕದಾಗಿರುತ್ತವೆ. ಈ ತಿಂಗಳಲ್ಲಿ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಈ ಮಾಸದಲ್ಲಿ ಬೆಳಗ್ಗೆ ಎದ್ದು ಲಕ್ಷ್ಮಿದೇವಿಯನ್ನು ಸ್ಮರಿಸಬೇಕು. ತಂದೆ-ತಾಯಿ ಮತ್ತು ಪೂರ್ವಜರ ಆಶೀರ್ವಾದ ಪಡೆಯಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ಬೆಳೆಯುತ್ತದೆ, ವ್ಯಕ್ತಿಯ ಮನಸ್ಸು ಸಂತೋಷದಿಂದ ಇರುತ್ತದೆ. ವ್ಯಕ್ತಿಯು ದಿನವಿಡೀ ಕ್ರಿಯಾಶೀಲನಾಗಿರುತ್ತಾನೆ, ಗುರಿಯತ್ತ ಸಾಗಲು ಇದು ಸಹಾಯ ಮಾಡುತ್ತದೆ.


ಇದನ್ನೂ ಓದಿ: Chanakya niti : ಈ ಕೆಲಸ ಮಾಡಲು ಮುಜುಗರ ಪಡಲೇ ಬಾರದು, ಇಲ್ಲೇ ಅಡಗಿದೆ ಯಶಸ್ಸಿನ ಗುಟ್ಟು


ಪ್ರಾಣಿಗಳಿಗೆ ನೀರು ಇರಿಸಿ


ಜ್ಯೇಷ್ಠ ಮಾಸದಲ್ಲಿ ತುಂಬಾ ಬಿಸಿಲು ಇರುತ್ತದೆ. ಬಿಸಿ ಗಾಳಿಯಿಂದಾಗಿ ಪ್ರಾಣಿಗಳು ನೀರಿನ ಕೊರತೆ ಅನುಭವಿಸಲು ಪ್ರಾರಂಭಿಸುತ್ತವೆ. ಹೀಗಾಗಿ ಈ ತಿಂಗಳಲ್ಲಿ ಮನೆ ಹೊರಗೆ ಅಥವಾ ತಾರಸಿಯ ಮೇಲೆ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ. ತಮ್ಮ ಜಾತಕದಲ್ಲಿ ಬುಧ ಮತ್ತು ಶನಿಯ ಕಾಟ ಹೊಂದಿರುವ ಜನರು ಜ್ಯೇಷ್ಠ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಬೇಕು.


ಈ ಆಹಾರ ಸೇವಿಸಿರಿ


ಧಾರ್ಮಿಕವಾಗಿ ಈ ತಿಂಗಳಲ್ಲಿ ಒಂದು ಹೊತ್ತಿನ ಊಟವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಅಲ್ಲದೆ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಈ ಮಾಸದಲ್ಲಿ ಬೇಳೆಯನ್ನು ಸೇವಿಸುವುದರಿಂದ ರೋಗಗಳು ದೂರವಾಗುತ್ತವೆ. ಈ ತಿಂಗಳಲ್ಲಿ ಬದನೆಕಾಯಿ ತಿನ್ನುವುದನ್ನು ತಪ್ಪಿಸಿ. ಜ್ಯೇಷ್ಠದಲ್ಲಿ ಇದನ್ನು ತಿನ್ನುವುದು ಒಳ್ಳೆಯದಲ್ಲ. ಈ ತಿಂಗಳಲ್ಲಿ ಹಗಲಿನಲ್ಲಿ ಮಲಗುವುದನ್ನು ನಿಷೇಧಿಸಲಾಗಿದೆ. ಈ ಮಾಸದಲ್ಲಿ ಎಳ್ಳನ್ನು ದಾನ ಮಾಡುವುದರಿಂದ ಅಕಾಲಿಕ ಮರಣದಿಂದ ಪಾರಾಗಬಹುದು ಎಂದು ನಂಬಲಾಗಿದೆ.


ಇದನ್ನೂ ಓದಿ: Numerology: ಈ ದಿನಾಂಕದಂದು ಜನಿಸಿದ ಜನರು ಸ್ವಭಾವತಃ ಸರಳರು, ಆಸ್ತಿಯ ವಿಷಯದಲ್ಲಿ ಅದೃಷ್ಟವಂತರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.