ನವದೆಹಲಿ : ಸನಾತನ ಧರ್ಮದಲ್ಲಿ, ಕಾರ್ತಿಕ ಮಾಸಕ್ಕೆ (Kartik Month) ವಿಶೇಷ ಮಹತ್ವವಿದೆ. ಈ ಬಾರಿ ಅಕ್ಟೋಬರ್ 21 ರಿಂದ ನವೆಂಬರ್ 19 ರವರೆಗೆ ಕಾರ್ತಿಕ ಮಾಸ ಇರಲಿದೆ. ಹಲವಾರು ತಿಂಗಳುಗಳ ಕಾಲ ದೀರ್ಘ ನಿದ್ರೆಯಲ್ಲಿ ಮಲಗಿದ್ದ ವಿಷ್ಣು (Lord Vishnu), ಈ ಮಾಸದಲ್ಲಿ  ಎಚ್ಚರಗೊಳ್ಳುತ್ತಾನೆ ಎನ್ನುವುದು ನಂಬಿಕೆ.  


COMMERCIAL BREAK
SCROLL TO CONTINUE READING

ಕಾರ್ತಿಕ ಮಾಸ ಅತ್ಯುತ್ತಮವೆಂದು ಪರಿಗಣನೆ : 
ಧರ್ಮಗ್ರಂಥಗಳ ಪ್ರಕಾರ, ಗ್ರಂಥಗಳಲ್ಲಿ ವೇದಗಳು, ನದಿಗಳಲ್ಲಿ ಗಂಗಾ ಮತ್ತು ಯುಗಗಳಲ್ಲಿ ಸತ್ಯುಗ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಾಗೆಯೇ ಕಾರ್ತಿಕ ಮಾಸವನ್ನು  (Kartik Month) ಕೂಡಾ ಅತ್ಯುತ್ತಮ ತಿಂಗಳು ಎಂದು ಕರೆಯಲಾಗುತ್ತದೆ. ಮೊದಲೇ ಹೇಳಿದ ಹಾಗೆ ಈ ಮಾಸದಲ್ಲಿ ಬಹು ಸಮಯದ ನಿದ್ದೆಯಿಂದ ವಿಷ್ಣು ಎಚ್ಚರಗೊಳ್ಳುವ ಕಾರಣ ಈ ತಿಂಗಳಿಗೆ ಬಹಳ ಪ್ರಾಮುಖ್ಯತೆ ಇರಲಿದೆ. ಬಹಳ ಸಮಯದಿಂದ ನಿಮ್ಮ ಕೆಲಸ ಅರ್ಧದಲ್ಲಿಯೇ ನಿಂತಿದ್ದರೆ, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ, ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಗೆ (Tulsi pooja) ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಬೇಕು. ಹೀಗೆ ಮಾಡಿದರೆ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. 


ಇದನ್ನೂ ಓದಿ :Astrology: ಈ 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ನವೆಂಬರ್ 2021


ತುಳಸಿ ಎಂದರೆ ವಿಷ್ಣುಗೆ ಬಹಳ ಪ್ರಿಯೆ : 
ತುಳಸಿ ಎಂದರೆ ವಿಷ್ಣುವಿಗೆ (Lord Vishnu) ಅತ್ಯಂತ ಪ್ರಿಯ ಎಂದು ನಂಬಲಾಗಿದೆ. ಹೀಗಾಗಿ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸುವುದರಿಂದ ವಿಶೇಷ ಪುಣ್ಯ ಲಾಭಗಳು ಸಿಗುತ್ತವೆ ಮತ್ತು ಜೀವನದ ಎಲ್ಲಾ ದುಃಖಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಅಲ್ಲದೆ, ಅಕಾಲಿಕ ಮರಣದ ಅಪಾಯವೂ ಕಡಿಮೆಯಾಗುತ್ತದೆಯಂತೆ. 


5 ತುಳಸಿ ಎಲೆಗಳನ್ನು ದೇವರ ಕೋಣೆಯಲ್ಲಿರಿಸಿ : 
ಕಾರ್ತಿಕ ಮಾಸದ ಮೊದಲ ಸೋಮವಾರ ಸ್ನಾನ ಮಾಡಿ 5 ತುಳಸಿ ಎಲೆಗಳನ್ನು ತೆಗದುಕೊಳ್ಳಿ. ಆ ಎಲೆಗಳನ್ನು ಎನ್ನಾಗಿ ತೊಳೆದು ಮನೆಯ  ದೇವರ ಕೋಣೆಯಲ್ಲಿರಿಸಿ (Pooja rom). ರಾತ್ರಿ ಮಲಗುವ ಮುನ್ನ ಆ ಎಲೆಗಳನ್ನು (Tulsi leave) ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದ  ಸಿಗಲಿದೆ.  


ಇದನ್ನೂ ಓದಿ : Gemology : ಈ 4 ರತ್ನಗಳನ್ನ ಧರಿಸಿ ನಿಮ್ಮ ಅದೃಷ್ಟ ಬದಲಾಗುತ್ತದೆ : ಅಲ್ಲದೆ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ


ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ:
ವ್ಯಾಪಾರ-ಉದ್ಯೋಗದಲ್ಲಿ ಯಶಸ್ಸು ಸಾಧಿಸದಿದ್ದರೆ, ಪ್ರತಿ ಗುರುವಾರ, ತುಳಸೀ ಎಲೆಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಕಚೇರಿ ಅಥವಾ ಅಂಗಡಿಯಲ್ಲಿ ಇರಿಸಿ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ವೃದ್ದಿಯಾಗಲಿದೆ.  ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. 


ಕಾರ್ತಿಕ ಮಾಸದಲ್ಲಿದೀಪ ದಾನ ಮಾಡಿ :
ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು (tulsi plant) ದಾನ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಪ್ರತಿ ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲಿನೊಂದಿಗೆ ನೀರುಣಿಸಬೇಕು. ಇದರ ನಂತರ, ಪ್ರತಿದಿನ ಸಂಜೆ ತುಳಸಿ ಗಿಡದ ಮುಂದೆ ದೀಪವನ್ನು ಬೆಳೆಗಬೇಕು. ಅಲ್ಲದೆ ಈ ತಿಂಗಳಲ್ಲಿ ದೀಪವನ್ನು ದಾನ ಮಾಡಬೇಕು.  ಇನ್ನು ಕಾರ್ತಿಕ ಮಾಸದ ಬ್ರಹ್ಮ ಮುಹೂರ್ತದಲ್ಲಿ ಎದ್ದು ತುಳಸಿಗೆ ನೀರನ್ನು ಅರ್ಪಿಸುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ