ಪವಿತ್ರ ತುಳಸಿ ಸೊರಗಲು ಬಿಡಬೇಡಿ, ಒಣ ತುಳಸಿ ನೀಡುತ್ತದೆ ಈ ಘಟನೆಗಳ ಮುನ್ಸೂಚನೆ

ಇನ್ನು ಪವಿತ್ರ ತುಳಸಿ ಸಮಯಕ್ಕೆ ಮುನ್ನವೇ ಒಣಗಲು ಆರಂಭಿಸಿದರೆ, ಅಥವಾ ಮನೆಯಲ್ಲಿರುವ ಎಲ್ಲಾ ಗಿಡಗಳು ಉತ್ತಮ ಸ್ಥಿತಿಯಲ್ಲಿದ್ದು, ಕೇವಲ ತುಳಸಿ ಮಾತ್ರ ಒಣಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ.

Written by - Ranjitha R K | Last Updated : Sep 28, 2021, 07:08 PM IST
  • ಪವಿತ್ರ ತುಳಸಿಯನ್ನು ಒಣಗಲು ಬಿಡಬೇಡಿ
  • ತುಳಸಿ ಒಣಗಿದರೆ ಸಿಗಲಿದೆ ತೊಂದರೆಯ ಮುನ್ಸೂಚನೆ
  • ಲಕ್ಷ್ಮೀ ಮನೆತೊರೆಯುವ ಸಂದೇಶವೂ ಹೌದು
ಪವಿತ್ರ ತುಳಸಿ ಸೊರಗಲು ಬಿಡಬೇಡಿ,  ಒಣ ತುಳಸಿ ನೀಡುತ್ತದೆ ಈ ಘಟನೆಗಳ ಮುನ್ಸೂಚನೆ  title=
ಪವಿತ್ರ ತುಳಸಿಯನ್ನು ಒಣಗಲು ಬಿಡಬೇಡಿ (file photo)

ನವದೆಹಲಿ : ತುಳಸಿ ಗಿಡಕ್ಕೆ (Tulsi plant) ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯ ಸ್ಥಾನವಿದೆ. ತುಳಸಿ ಗಿಡವನ್ನು ವಾಸ್ತು ದೋಷಗಳ ನಾಶಕ ಎಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ತುಳಸಿ ಗಿಡವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು (Negetive energy) ನಾಶಪಡಿಸುತ್ತದೆ. ಪ್ರತಿದಿನ ಬೆಳಿಗ್ಗೆ ತುಳಸಿ ಗಿಡಕ್ಕೆ ನೀರು ನೀಡುವುದರಿಂದ ಹಲವು ರೀತಿಯ ವಾಸ್ತು ದೋಷಗಳು (Vastu dosha) ನಿವಾರಣೆಯಾಗುತ್ತವೆ. ವಿಷ್ಣು ಪೂಜೆಯಲ್ಲಿ ತುಳಸಿಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ವಾಸ್ತು ದೋಷವಿರುವ ಮನೆಯಲ್ಲಿ ತುಳಸಿ ಗಿಡವನ್ನು ಇಡಬೇಕು. ಶನಿ ಮತ್ತು ಮಂಗಳನ ಪರಿಣಾಮಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಇನ್ನು ಪವಿತ್ರ ತುಳಸಿ (Tulsi) ಸಮಯಕ್ಕೆ ಮುನ್ನವೇ ಒಣಗಲು ಆರಂಭಿಸಿದರೆ, ಅಥವಾ ಮನೆಯಲ್ಲಿರುವ ಎಲ್ಲಾ ಗಿಡಗಳು ಉತ್ತಮ ಸ್ಥಿತಿಯಲ್ಲಿದ್ದು, ಕೇವಲ ತುಳಸಿ ಮಾತ್ರ ಒಣಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಯಾಕೆಂದರೆ ಇದು, ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಏನಾದರೂ ತೊಂದರೆಯಾಗಲಿದೆ ಎನ್ನುವುದನ್ನು ಸೂಚಿಸುತ್ತದೆ. ಇದ್ದಕ್ಕಿದ್ದಂತೆ ತುಳಸಿ ಒಣಗಲು ಶುರುವಾದರೆ ಅದು ಅತ್ಯಂತ ಅಶುಭ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ  : ಈ ಒಂದು ವೃತ ಹಣಕಾಸಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತದೆ, ಜೀವನಪೂರ್ತಿ ಉಳಿಯಲಿದೆ ಲಕ್ಷ್ಮೀ ಕೃಪೆ

ಮನೆಯಲ್ಲಿ ಬಿಕ್ಕಟ್ಟು ಉಂಟಾಗುವುದಾದರೆ, ಮೊದಲನೆಯದಾಗಿ,ಲಕ್ಷ್ಮೀ (Godess lakshmi) ಮನೆ ಬಿಟ್ಟು ತೊರೆಯುತ್ತಾಳೆಯಂತೆ.  ತುಳಸಿ ಎಂದರೆ ಲಕ್ಷ್ಮೀಯ ರೂಪ ಎನ್ನಲಾಗುತ್ತದೆ. ಹಾಗಾಗಿ ಲಕ್ಷ್ಮೀ ಹೊರ ನಡೆದು ಹೋದಾಗ ತುಳಸಿ  ಒಣಗಲು ಆರಂಭಿಸುತ್ತದೆ ಎನ್ನಲಾಗುತ್ತದೆ. ಹೀಗೆ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಅದು ಹಣಕಾಸಿನ ಕೊರತೆ ಎದುರಾಗುವ ಸಂಕೇತ ನೀಡುತ್ತದೆ.  ತುಳಸಿ ಗಿಡ ಒಣಗಿದ್ದರೆ ಅದನ್ನು ಮನೆಯಲ್ಲಿ ಇಡಬೇಡಿ. ಯಾವುದೇ ದೇವಸ್ಥಾನ ಅಥವಾ ನದಿಯನೀರಿನಲ್ಲಿ ಹರಿಯಲು ಬಿಡಿ. ಒಣಗಿದ ತುಳಸಿಯನ್ನು ಇಟ್ಟುಕೊಳ್ಳುವುದು ಕೂಡಾ  ಮನೆಗೆ ಅಶುಭ. 

ಮನೆಯಲ್ಲಿ ತುಳಸಿ ಇದ್ದರೆ ಈ ಪರಿಹಾರಗಳನ್ನು ಕೈಗೊಳ್ಳಿ :  
-ಅಡುಗೆಮನೆಯ (KItchen) ಬಳಿ ತುಳಸಿಯನ್ನು ಇಟ್ಟುಕೊಳ್ಳುವುದರಿಂದ, ಯಾವುದೇ ರೀತಿಯ ಗೃಹ ವಿವಾದಗಳಿಂದ ಮುಕ್ತಿ ಪಡೆಯಬಹುದು.
-ಮಹಿಳೆಯರು ತುಳಸಿಗೆ ಪ್ರತಿದಿನ ಶುದ್ಧ ನೀರನ್ನು ಅರ್ಪಿಸಿದರೆ  ವಾಸ್ತು ದೋಷವು ಕೊನೆಗೊಳ್ಳುತ್ತದೆ.
-ಮಗು ನಿಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ, ಪೂರ್ವ ದಿಕ್ಕಿನಲ್ಲಿ ಇರಿಸಿದ ತುಳಸಿ ಗಿಡದಿಂದ ಪ್ರತಿದಿನ ಮೂರು ಎಲೆಗಳನ್ನು (tulsi leaves) ತೆಗೆದು ಮಗುವಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಮಗು ನೀವು ಹೇಳಿದಂತೆ ಕೇಲಾಲು ಆರಂಭಿಸುತ್ತದೆ.   

ಇದನ್ನೂ ಓದಿ  : ಮನುಷ್ಯನಲ್ಲಿ ಈ ಗುಣವೊಂದಿದ್ದರೆ ಸಾಕು ಬದುಕಿನ ಭಾಗ್ಯವೇ ತೆರೆಯುತ್ತದೆಯಂತೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News