ನವದೆಹಲಿ : ಹಿಂದೂ ಕ್ಯಾಲೆಂಡರ್ ಪ್ರಕಾರ, ವರ್ಷದ ಎಂಟನೇ ತಿಂಗಳು ಅಂದರೆ ಕಾರ್ತಿಕ ಮಾಸ (Karthika month) ಆರಂಭವಾಗಿದೆ. 21 ನೇ ಅಕ್ಟೋಬರ್ 2021 ರಿಂದ ಆರಂಭವಾದ ಈ ತಿಂಗಳು ನವೆಂಬರ್ 19 ರವರೆಗೆ ಇರಲಿದೆ. ಈ ಮಾಸದಲ್ಲಿ ಹಿಂದೂಗಳ ಅತಿ ಮುಖ್ಯವಾದ ಹಬ್ಬವಾದ ದೀಪಾವಳಿಯನ್ನು (Diwali 2021) ಆಚರಿಸಲಾಗುವುದು.  ಅನೇಕ ಕಾರನಗಳಿಗಾಗಿ ಈ ತಿಂಗಳು ಪ್ರಾಮುಖ್ಯವಾಗಿದೆ. ನಾಲ್ಕು ತಿಂಗಳ ಕಾಲ ನಿದ್ರಾವಸ್ಥೆಯಲ್ಲಿರುವ ವಿಷ್ಣು (Lord Vishnu) ಈ ತಿಂಗಳಲ್ಲಿ ಎಚ್ಚರಗೊಳ್ಳುತ್ತಾನೆ ಎನ್ನುವುದು ನಂಬಿಕೆ.  ಹಾಗಾಗಿ ಈ ಮಾಸದಲ್ಲಿ ಎಲ್ಲಾ ಶುಭ ಕಾರ್ಯಗಳು ಆರಂಭವಾಗುತ್ತವೆ. 


COMMERCIAL BREAK
SCROLL TO CONTINUE READING

ಸಂಪತ್ತು ಮತ್ತು ಧರ್ಮದ ತಿಂಗಳು :
ಈ ತಿಂಗಳು ಧರ್ಮ ಮಾಡುವ ಪುಣ್ಯ ಸಂಪಾದನೆ ಮಾಡುವುದರ ಧನಿಕರಾಗುವ ಅವಕಾಶವನ್ನು ಕೂಡಾ ನೀಡುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯು (Godess Lakshmi) ಕಾರ್ತಿಕ ಮಾಸದಲ್ಲಿ ಭೂಮಿಗೆ ಭೇಟಿ ನೀಡುತ್ತಾಳೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ದೆವಿಯ ಕೃಪೆಗೆ ಪಾತ್ರರಾಗಲು ಇದು ಅತ್ಯಂತ ಒಳ್ಳೆಯ ಸಮಯ ಎಂದು ಹೇಳಲಾಗಿದೆ. ಈ ಸಮಯದಲ್ಲಿ, ಕೆಲವು ನಿಯಮಗಳನ್ನು ಅನುಸರಿಸಿದರೆ, ನೋಡ ನೋಡುತ್ತಲೇ  ಶ್ರೀಮಂತರಾಗುವ ಭಾಗ್ಯ ಓದಗುತ್ತದೆಯಂತೆ. 


ಇದನ್ನೂ ಓದಿ : Mars Transit 2021: ತುಲಾ ರಾಶಿಗೆ ಮಂಗಳನ ಪ್ರವೇಶ, ಮುಂದಿನ 45 ದಿನಗಳವರೆಗೆ ಈ ರಾಶಿಯವರು ಜಾಗರೂಕರಾಗಿರಿ


-ಕಾರ್ತಿಕ ಮಾಸದಲ್ಲಿ ತುಳಸಿ ಗಿಡ (Tulsi plant) ನೆಟ್ಟು, ಪೂಜೆ ಮಾಡುವುದು ಸಮೃದ್ಧಿಯಾಗುತ್ತದೆಯಂತೆ. ಹೀಗೆ ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಮನೆ ಮನಗಳಲಿ ಸಂತೋಷ ನೆಲೆಯಾಗುತ್ತದೆಯಂತೆ. ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. 
- ಈ ತಿಂಗಳು ದೀಪಗಳನ್ನು ದಾನ ಮಾಡುವುದನ್ನು ಮರೆಯಬೇಡಿ. ಅಲ್ಲದೆ, ನದಿ, ಕೊಳ ಮತ್ತು ಮನೆಯ ಒಂದು ಮೂಲೆಯಲ್ಲಿ ದೀಪ ಬೆಳಗಿಸುವುದನ್ನು ಮರೆಯಬೇಡಿ. ಹೀಗೆ ಮಾಡುವುದು ಬಹಳ ಮಂಗಳಕರ ಎಂದು ಹೇಳಲಾಗಿದೆ. 
-ಕಾರ್ತಿಕ ಮಾಸದಲ್ಲಿ ಮೈಗೆ ಎಣ್ಣೆ (oil ) ಹಚ್ಚಬೇಡಿ. ಬದಲಾಗಿ, ಋತುವಿನ ಬದಲಾವಣೆಯೊಂದಿಗೆ, ಶುಷ್ಕ ಚರ್ಮವನ್ನು ತೇವಗೊಳಿಸಲು ನರಕ ಚತುರ್ದಶಿಯಿಂದ ಎಣ್ಣೆಯನ್ನು ಹಚ್ಚಲು ಪ್ರಾರಂಭಿಸಿ. 
-ಈ ತಿಂಗಳಲ್ಲಿ ಉದ್ದಿನ ಬೇಳೆ, ಹೆಸರು, ತೊಗರಿ ಬೇಳೆ, ಕಡಲೆ, ಬಟಾಣಿ ಮತ್ತು ಸಾಸಿವೆಯನ್ನು ತಿನ್ನಬಾರದು. 
-ಕಾರ್ತಿಕ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ತಿಂಗಳಲ್ಲಿ ಬ್ರಹ್ಮಚರ್ಯವನ್ನು ಅನುಸರಿಸಿ.  


ಇದನ್ನೂ ಓದಿ : Gangajal At Home: ನಿಮ್ಮ ಮನೆಯಲ್ಲಿಯೂ ಗಂಗಾಜಲ ಇದೆಯೇ? ಇಲ್ಲಿದೆ ಅದನ್ನಿಡುವ ಸರಿಯಾದ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ