Kharmas 2021 - ಈ 30 ದಿನಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ, ಕಾರಣ ಇಲ್ಲಿದೆ
Kharmas 2021 - ಗ್ರಹ ದೆಸೆ ಅನುಕೂಲಕರವಾಗಿಲ್ಲದ ಸಮಯದಲ್ಲಿ ಶುಭ ಕಾರ್ಯಗಳನ್ನು (Auspicious Work) ಮಾಡಿದರೆ ಅದು ಅಶುಭ ಫಲಿತಾಂಶವನ್ನು (Negative Results) ನೀಡುತ್ತದೆ. ಖರ್ಮಾಸ್ ಕೂಡ ಇದರಲ್ಲಿ ಒಂದು, ಖರ್ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ನವದೆಹಲಿ: : Kharmas - ಸನಾತನ ಧರ್ಮದಲ್ಲಿ (Sanatana Dharma) ಪ್ರತಿಯೊಂದು ಕೆಲಸಕ್ಕೂ ಶುಭ ಮತ್ತು ಅಶುಭಗಳನ್ನು ಹೇಳಲಾಗಿದೆ. ಈ ಸಮಯಗಳು ಮತ್ತು ಮುಹೂರ್ತಗಳನ್ನು ಹಿಂದೂ ಕ್ಯಾಲೆಂಡರ್ (Hindu Calander) ಮತ್ತು ಜ್ಯೋತಿಷ್ಯದ (Astrology) ಮೂಲಕ ಲೆಕ್ಕಹಾಕಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡಿದ ಕೆಲಸವು ಒಳ್ಳೆಯ ಫಲಿತಾಂಶವನ್ನು ನೀಡುತ್ತವೆ. ಆದರೆ ಅಶುಭ ಸಮಯದಲ್ಲಿ ಅಥವಾ ಮುಹೂರ್ತದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳು ಕೆಟ್ಟ ಫಲಿತಾಂಶಗಳನ್ನು ನೀಡುತ್ತವೆ. ಆದ್ದರಿಂದ ಶುಭ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾತ್ರ ಮಾಡಬೇಕು. ಇದೇ ವೇಳೆ ಅಶುಭ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಖರಮಾಸ ಕೂಡ ಅಂತಹ ಒಂದು ಸಮಯ ಎಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ವರ್ಷ ಖರಮಾಸ 16 ಡಿಸೆಂಬರ್ 2021 ರಿಂದ 14 ಜನವರಿ 2022 ರವರೆಗೆ ಇರುತ್ತದೆ.
ಏನಿದು ಖರಮಾಸ?
ಗುರು, ಧನು ರಾಶಿ ಮತ್ತು ಮೀನ ರಾಶಿಯ ಒಡೆತನದ ಚಿಹ್ನೆಗಳಲ್ಲಿ ಸೂರ್ಯನು ಒಂದರ ನಂತರ ಒಂದರಂತೆ ಸಾಗಿದಾಗ, ಅದು ಗುರುಗ್ರಹದ ಪ್ರಕಾಶವನ್ನು ಕಡಿಮೆ ಮಾಡುತ್ತದೆ. ಗುರುವು ಮದುವೆಯ ಕಾರಕ ಗ್ರಹವಾಗಿರುವುದರಿಂದ. ಇಂತಹ ಪರಿಸ್ಥಿತಿಯಲ್ಲಿ, ಗುರುವಿನ ತೇಜಸ್ಸು ಕಡಿಮೆಯಾಗುವುದು ಮತ್ತು ಇದನ್ನು ಮದುವೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಪ್ರತಿ ರಾಶಿಯಲ್ಲಿ 1 ತಿಂಗಳು ಇರುತ್ತಾನೆ. ಆದ್ದರಿಂದ, 1 ತಿಂಗಳವರೆಗೆ ಒಳ್ಳೆಯ ಕೆಲಸಗಳು ನಡೆಯುವುದಿಲ್ಲ. ಈ ಸಮಯವನ್ನು ಖರಮಾಸ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ-Mars Transit 2021: ತುಲಾ ರಾಶಿಗೆ ಮಂಗಳನ ಪ್ರವೇಶ, ಈ ಮೂರು ರಾಶಿಗಳ ಭಾಗ್ಯೋದಯ, ನಿಮ್ಮ ರಾಶಿ ಯಾವುದು?
ಈ ಕಾರಣದಿಂದ ಶುಭಕಾರ್ಯಗಳು ಮಾಡಲಾಗುವದಿಲ್ಲ
ಧಾರ್ಮಿಕ ನಂಬಿಕೆಯ ಪ್ರಕಾರ, ಖರಮಾಸದಲ್ಲಿ ಸೂರ್ಯ ಮಂದ ಗತಿಯಲ್ಲಿ ಸಾಗುತ್ತಾನೆ. ಆದ್ದರಿಂದ ಈ ಅವಧಿಯಲ್ಲಿ ಮಾಡುವ ಯಾವುದೇ ಕೆಲಸವು ಶುಭ ಫಲಿತಾಂಶಗಳನ್ನು ನೀಡುವುದಿಲ್ಲ. ಆದುದರಿಂದ ಈ ಸಮಯದಲ್ಲಿ ಮದುವೆಯ ಹೊರತಾಗಿ ಗೃಹ ಖರೀದಿ, ಗೃಹಪ್ರವೇಶ, ವಾಹನ ಖರೀದಿ, ಹೊಸ ಕೆಲಸ ಪ್ರಾರಂಭ ಮುಂತಾದ ಶುಭ ಕಾರ್ಯಗಳು ನಿಷಿದ್ಧ ಎನ್ನಲಾಗಿದೆ. ಇದಲ್ಲದೇ ಮನೆ ನಿರ್ಮಾಣ, ಕ್ಷೌರ, ಯಾಗ, ನಾಮಕರಣ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಗಳೂ ಕೂಡ ನಡೆಯುವುದಿಲ್ಲ. ಇದೇ ಡಿಸೆಂಬರ್ 16 ರಂದು ಸೂರ್ಯನು ಧನು ರಾಶಿಗೆ ಪ್ರವೇಶಿಸಿದ ತಕ್ಷಣ ಖರಮಾಸ ಆರಂಭಗೊಳ್ಳಲಿದೆ.
ಇದನ್ನೂ ಓದಿ-ಸೂರ್ಯಗ್ರಹಣಕ್ಕೆ ಇನ್ನು ತುಂಬಾ ಸಮಯವಿದೆ: ಮರೆತು ಕೂಡ ಈ ಕೆಲಸ ಮಾಡಬೇಡಿ, ದೊಡ್ಡ ನಷ್ಟವಾಗುತ್ತದೆ
(Disclaimer-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-ಈ ಉಪವಾಸ ಆಚರಿಸುವುದರಿಂದ ಅನೇಕ ಪ್ರಯೋಜನಗಳಿವೆ: ಮೋಕ್ಷ ಪ್ರಾಪ್ತಿಗಾಗಿ ಪೂಜೆಯ ವಿಧಾನ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.