ನವದೆಹಲಿ: Panchamukhi Hanuman  - ಶ್ರೀ ರಾಮನ ಭಕ್ತ ಹನುಮಾನ್ (Lord Hanuman) ನನ್ನು ರುದ್ರನ ಅವತಾರವೆಂದು ಪರಿಗಣಿಸಲಾಗಿದೆ. ರುದ್ರನು ಶಿವನ ಒಂದು ರೂಪ. ಶಿವನಂತೆ ಹನುಮ ಕೂಡ ತನ್ನ ಭಕ್ತರ ಭಕ್ತಿಗೆ ಬೇಗನೆ ಒಲಿಯುತ್ತಾನೆ ಎಂಬುದಕ್ಕೆ ಇದು ಒಂದು ಕಾರಣವಾಗಿದೆ. ಬಜರಂಗಬಲಿ (Bajarangabali) ಎಂದೂ ಕರೆಯಲ್ಪಡುವ ಆಂಜನೇಯ ತನ್ನ ಭಕ್ತರ ಸಂಕಷ್ಟ ಮತ್ತು ತೊಂದರೆಗಳನ್ನು ತೊಡೆದುಹಾಕುತ್ತಾನೆ ಎನ್ನಲಾಗಿದೆ. ಹೀಗಾಗಿ ಆತನನ್ನು ಸಂಕಟಮೋಚನ ಎಂದೂ ಕರೆಯುತ್ತಾರೆ. ಹನುಮನ ಐದು ಮುಖಗಳ (Panchamukhi Hanuman) ರೂಪ ನೀವೂ ನೋಡಿರಬಹುದು. ಹನುಮನಿಗೆ ಈ ಪಂಚಮುಖಿಯ ವಿಭಿನ್ನ ಸ್ವರೂಪ ಬಂದಿದ್ದಾದರೂ ಹೇಗೆ? ಅದರ ಪ್ರಾಮುಖ್ಯತೆ ಏನು? ಅದರ ಹಿಂದಿನ ಪುರಾಣ ಯಾವುದು ಮತ್ತು ಹನುಮನ ಈ  ಪಂಚಮುಖಿ ರೂಪವನ್ನು (ಪಂಚಮುಖಿ ಹನುಮಾನ್) ಪೂಜಿಸುವುದರಿಂದ ಯಾವ ಪ್ರಯೋಜನ (Benefits Of Hanuman Puja) ಸಿಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಪಂಚಮುಖಿ ಹನುಮಾನನ ಈ ಸ್ವರೂಪದ ಹಿಂದಿನ ಮಹತ್ವ
ಹನುಮನ ಪಂಚಮುಖಿ ರೂಪದ ಪ್ರತಿಯೊಂದುಸ್ವರೂಪದಲ್ಲಿ ಒಂದು ಮುಖ, ತ್ರಿನೇತ್ರ ಮತ್ತು ಎರಡು ತೋಳುಗಳಿವೆ. ಈ ಐದು ಮುಖಗಳಲ್ಲಿ ನರಸಿಂಹ, ಗರುಡ, ಅಶ್ವ, ವಾನರ ಮತ್ತು ವರಹಾ ರೂಪ್ ಸೇರಿವೆ. ಆಂಜನೇಯ ಸ್ವಾಮಿಯ ಈ ಐದು ಮುಖದ ರೂಪವು ಕ್ರಮವಾಗಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮೇಲ್ಮುಖ ದಿಕ್ಕುಗಳನ್ನು ಪ್ರತಿನಿಧಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ(ಐದು ದಿಕ್ಕುಗಳು). ಪೂರ್ವ ದಿಕ್ಕಿನ ಮುಖವನ್ನು ವಾನರ ಎಂದು ಕರೆಯಲಾಗುತ್ತದೆ, ಇದರ ಹೊಳಪು ನೂರಾರು ಸೂರ್ಯನ ವೈಭವವನ್ನು ಹೋಲುತ್ತದೆ. ಈ ರೂಪವನ್ನು ಪೂಜಿಸುವ ಮೂಲಕ ಶತ್ರುಗಳನ್ನು ಜಯಿಸಬಹುದು ಎಂದು ನಂಬಲಾಗಿದೆ.


ಇದನ್ನೂ ಓದಿ- ಈ ದಿನಗಳಲ್ಲಿ ಮತ್ತು ಸಮಯದಲ್ಲಿ ತುಳಸಿಎಲೆಯನ್ನು ಮುರಿಯಬಾರದು ತಿಳಿಯಿರಿ


ಹನುಮನ ಪಂಚಮುಖಿ ಹಿಂದಿನ ಪೌರಾಣಿಕ ಮಹತ್ವ ಏನು? (Mythological Story)
ದಂತಕಥೆಯ ಪ್ರಕಾರ, ಪ್ರಭು ಶ್ರೀರಾಮ್ ಮತ್ತು ರಾವಣನ ಯುದ್ಧ ನಡೆಯುತ್ತಿರುವಾಗ, ರಾವಣನು ತಾನು ಯುದ್ಧದಲ್ಲಿ ಸೋಳಲಿದ್ದೇನೆ ಎಂದು ಭಾವಿಸಿದಾಗ, ಸೋಲನ್ನು ತಪ್ಪಿಸಲು ಅವನು ತನ್ನ ಸಹೋದರ ಅಹಿರವನ ಸಹಾಯವನ್ನು ಪಡೆಯುತ್ತಾನೆ. ಅಹಿರವನ್ ಮಾಯಾವಿಯಾಗಿದ್ದ ಮತ್ತು ತನ್ನ ತಂತ್ರ-ಮಂತ್ರ ಮತ್ತು ಮಾಯೆಯ ಪ್ರಭಾವದಿಂದ ಶ್ರೀ ರಾಮನ ಸೈನ್ಯವನ್ನು ಗಾಢ ನಿದ್ರೆಗೆ ಜಾರಿಸುತ್ತಾನೆ. ನಂತರ ರಾಮ-ಲಕ್ಷ್ಮಣ್ ಒತ್ತೆಯಾಳಾಗಿಸಿ ಪಾತಾಳಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ರಾಮ-ಲಕ್ಷ್ಮಣನನ್ನು ಉಳಿಸಲು ಹನುಮಾನ್ ಪಾತಾಳಕ್ಕೆ ಹೋಗುತ್ತಾನೆ. ಅಲ್ಲಿ ಅಹಿರಾವನ್ ಐದು ದೀಪಗಳನ್ನು ವಿವಿಧ ದಿಕ್ಕುಗಳಲ್ಲಿ ಬೆಳಗಿಸಿರುತ್ತಾನೆ. ಈ ಐದು ದೀಪಗಳನ್ನು ಏಕಕಾಲದಲ್ಲಿ ನಂದಿಸುವವನು ಅವನನ್ನು ಕೊಲ್ಲಲು ಸಾಧ್ಯ ಎಂಬ ವರವನ್ನು ಆತ ಹೊಂದಿರುತ್ತಾನೆ.  ಈ ಐದು ದೀಪಗಳನ್ನು ಒಟ್ಟಿಗೆ ನಂದಿಸಲು ಹನುಮ  ಪಂಚಮುಖಿ ರೂಪ ತಳೆಯುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಉತ್ತರದಲ್ಲಿ ವರಾಹ ಮುಖ, ದಕ್ಷಿಣದಲ್ಲಿ ನರಸಿಂಹ ಮುಖ, ಪಶ್ಚಿಮದಲ್ಲಿ ಗರುಡ ಮುಖ, ಆಕಾಶದ ಕಡೆಗೆ ಅಶ್ವ ಮುಖ ಮತ್ತು ಪೂರ್ವದಲ್ಲಿ ಹನುಮನ ಮುಖವಿದ್ದು, ಒಂದಾದ ಮೇಲೊಂದರಂತೆ ಅವರು ಎಲ್ಲಾ ದೀಪಗಳನ್ನು ಒಟ್ಟಿಗೆ ನಂದಿಸಿ ಅಹಿರಾವಣನನ್ನು ಸಂಹಾರ ಮಾಡುತ್ತಾರೆ ಮತ್ತು ರಾಮ ಮತ್ತು ಲಕ್ಷ್ಮಣರನ್ನು ಮುಕ್ತಗೊಳಿಸುತ್ತಾನೆ.


ಇದನ್ನೂ ಓದಿ-Vastu Tips : ನೀವು ವಾಸ್ತುಪ್ರಕಾರ ಮಲಗುತ್ತೀರಾ..? ಚೆಕ್ ಮಾಡಿಕೊಳ್ಳಿ


ಪಂಚಮುಖಿ ಹನುಮನ ಪೂಜೆಯಿಂದಗುವ ಲಾಭ
- ಜೀವನದಲ್ಲಿ ನಿರಂತರವಾಗಿ ಸಮಸ್ಯೆಗಳನ್ನು ಇರುವ ವ್ಯಕ್ತಿಗಳು ಪಂಚಮುಖಿ ಹನುಮನ ದರ್ಶನ ಪಡೆಯಬೇಕು ಮತ್ತು ಪ್ರತಿ ಮಂಗಳವಾರ ಅವರಿಗೆ ಪೂಜೆ ಸಲ್ಲಿಸಿ ಹನುಮಾನ ಚಾಲಿಸಾ ಪಠಿಸಬೇಕು. ಇದರಿಂದ ದೊಡ್ಡ ಬಿಕ್ಕಟ್ಟುಗಳು ನಿವಾರಣೆಯಾಗುತ್ತವೆ.


- ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಇದ್ದರೆ, ಅದನ್ನು ತೊಡೆದುಹಾಕಲು ಪಂಚಮುಖಿ ಹನುಮನ ವಿಗ್ರಹ ಅಥವಾ ಭಾವಚಿತ್ರವನ್ನು ಮನೆಯ ನೈರುತ್ತ್ಯ ಭಾಗದಲ್ಲಿರಿಸಿ.


ಇದನ್ನೂ ಓದಿ-Tuesday Tips : ಮಂಗಳವಾರ ತಪ್ಪಿಯೂ ಈ 5 ಕೆಲಸಗಳನ್ನು ಮಾಡ್ಬೇಡಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.