Tuesday Tips : ಮಂಗಳವಾರ ತಪ್ಪಿಯೂ ಈ 5 ಕೆಲಸಗಳನ್ನು ಮಾಡ್ಬೇಡಿ..!

ಧರ್ಮಶಾಸ್ತ್ರದ ಪ್ರಕಾರ ಮಂಗಳವಾರವನ್ನು  ಹನುಮಾನ್ ಜಿ ದಿನ ಎಂದು ಹೇಳಲಾಗುತ್ತದೆ. ಈ ದಿನ, ಹನುಮಂತನನ್ನು  ಪೂಜಿಸುವ ಮೂಲಕ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು.  

Written by - Ranjitha R K | Last Updated : Mar 16, 2021, 09:20 AM IST
  • ಮಂಗಳವಾರ ಹನುಮಂತನನ್ನು ಪೂಜಿಸಲಾಗುತ್ತದೆ
  • ಮಂಗಳವಾರ ಈ 5 ವಿಷಯಗಳನ್ನು ತಪ್ಪಿಯೂ ಮಾಡ್ಬೇಡಿ
  • ಮಂಗಳ ದೋಷ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು
Tuesday Tips : ಮಂಗಳವಾರ ತಪ್ಪಿಯೂ  ಈ 5 ಕೆಲಸಗಳನ್ನು  ಮಾಡ್ಬೇಡಿ..! title=
Tuesday remedies (file photo)

ಬೆಂಗಳೂರು : ಗಣೇಶನನ್ನು  ವಿಘ್ನ ವಿನಾಶಕ ಎಂದುಕರೆಯಲಾಗುತ್ತದೆ. ಹಾಗೆಯೇ ಹನುಮಾನ್ (Lord hanuman) ಅಥವಾ ಆಂಜನೇಯ ದೇವರನ್ನು ಕೂಡ ಸಂಕಟ್ ಮೋಚನ ಎಂದು ಕರೆಯಲಾಗುತ್ತದೆ. ಆಂಜನೇಯ ಕೂಡ ತನ್ನ  ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಪವನಪುತ್ರ ಹನುಮಂತನನ್ನು ಸಂಕಟ ಹರಣ ಎಂದು ಕರೆಯುತ್ತಾರೆ.  ಹನುಮಂತ ತಮ್ಮ ಭಕ್ತರಿಗೆ ಎದುರಾಗುವ  ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವುದು ನಂಬಿಕೆ. ಧರ್ಮಶಾಸ್ತ್ರದ ಪ್ರಕಾರ ಮಂಗಳವಾರವನ್ನು  (Tuesday) ಹನುಮಾನ್ ಜಿ ದಿನ ಎಂದು ಹೇಳಲಾಗುತ್ತದೆ. ಈ ದಿನ, ಹನುಮಂತನನ್ನು  ಪೂಜಿಸುವ ಮೂಲಕ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು. ಹನುಮಂತನ ಕೃಪೆಗೆ ಪಾತ್ರರಾಗಲು  ಮಂಗಳವಾರ ಹನುಮಾನ್ ಚಾಲೀಸ್ ವನ್ನು ಓದಬೇಕು.  

ಮಂಗಳವಾರ ಏನು ಮಾಡ್ಬೇಕು  ಏನು ಮಾಡಬಾರದು ಎನ್ನುವುದನು ನೋಡೋಣ : 
ಜ್ಯೋತಿಷ್ಯ (Astrology) ತಜ್ಞರ ಪ್ರಕಾರ, ಮಂಗಳವಾರ ನಾವು ಕೆಲ ಕಾರ್ಯಗಳನ್ನು ಮಾಡಬಾರದು. ಕೆಲವು ಕೆಲಸಗಳನ್ನು ಮಂಗಳವಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಮತ್ತು ಇತರ ಅನೇಕ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ : Vastu: ಸುಖ-ಸಮೃದ್ಧಿಗೆ ಮಾರಕ ಈ ವಸ್ತುಗಳು, ನಿಮ್ಮ ಮನೆಯಲ್ಲಿದ್ದರೂ ಕೂಡಲೇ ಹೊರಹಾಕಿ

1. ಮಂಗಳವಾರ ಹಣದ ವಹಿವಾಟು ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎನ್ನಲಾಗಿದೆ. ಮಂಗಳವಾರ, ಯಾರಿಗೂ ಸಾಲವನ್ನು ನೀಡಬಾರದು, ಸಾಲ ಪಡೆಯಲು ಬಾರದು.  ಮಂಗಳವಾರ ತೆಗೆದುಕೊಂಡ ಸಾಲವನ್ನು ಮರುಪಾವತಿಸುವುದು ಕಷ್ಟಕರವಾಗುತ್ತದೆ. ನೀಡಿದ ಹಣವನ್ನು (money) ಮರಳಿ ಪಡೆಯುವುದು ಕೂಡಾ ಕಷ್ಟ ಎಂದು ನಂಬಲಾಗಿದೆ.

2. ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು (food) ಮಂಗಳವಾರ ತೆಗೆದುಕೊಳ್ಳಬೇಕು.  ಮಂಗಳವಾರ ಉಪವಾಸ ಮಾಡುತ್ತಿದ್ದರೆ, ಉಪ್ಪು ಸೇವಿಸಬಾರದು. ಮಂಗಳವಾರದ ವೃತ ಮಾಡುತ್ತಿಲ್ಲವಾದರೂ ಈ ದಿನ ಸರಳವಾದ ಆಹಾರವನ್ನು (Non veg) ಮಾತ್ರ ಸೇವಿಸಿ. ಮಂಗಳವಾರ ಮಾಂಸಾಹಾರ  ಮದ್ಯ (Alchohal)ನಿಷಿದ್ದ .  ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳವಾರ ಮಾಂಸ ಮತ್ತು ಮದ್ಯ ಸೇವಿಸುವುದರಿಂದ ಮಂಗಲ ದೋಷ ಉಂಟಾಗುತ್ತದೆ.  ಇದು ನಕಾರಾತ್ಮಕತೆ  ಹೆಚ್ಚಾಗಲು ಕಾರಣವಾಗುತ್ತದೆ. 

ಇದನ್ನೂ ಓದಿ : Importance Of Colours In Vastu- ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ-ಸೌಭಾಗ್ಯ ಪಡೆಯಲು ಬಣ್ಣಗಳ ಪಾತ್ರ ತುಂಬಾ ದೊಡ್ಡದು

3. ಮಂಗಳವಾರ, ಹೇರ್ ಕಟ್ (hair cut), ಶೇವಿಂಗ್ ಮತ್ತು ಉಗುರು ಕತ್ತರಿಸುವ ಕೆಲಸವನ್ನು ಮಾಡಬಾರದು. ಈ ಕೆಲಸಗಗಳನ್ನು ಮಂಗಳವಾರ ಮಾಡುವುದರಿಂದ ಸಂಪತ್ತು ಮತ್ತು ಬುದ್ಧಿವಂತಿಕೆ ಎರಡೂ ನಷ್ಟವಾಗುತ್ತದೆ ಎನ್ನಲಾಗಿದೆ. 

4. ಮಂಗಳವಾರ ಚಾಕು, ಕತ್ತರಿ, ನೈಲ್ ಕಟರ್ ಮುಂತಾದ ಯಾವುದೇ ರೀತಿಯ ತೀಕ್ಷ್ಣವಾದ ವಸ್ತುಗಳನ್ನು ಖರೀದಿಸಬೇಡಿ.   ಏಕೆಂದರೆ ಈ ವಸ್ತುಗಳ್ಳನ್ನು ಮಂಗಳವಾರ ಖರೀದಿಸಿದರೆ ಕುಟುಂಬದಲ್ಲಿ ಕಲಷ ಉಂಟಾಗುತ್ತದೆಯಂತೆ . ಅಲ್ಲದೆ, ಈ ದಿನದಂದು ಮೇಕಪ್ ಸಮಾಗ್ರಿ ಖರೀದಿಸುವುದನ್ನು ಸಹ ನಿಷೇಧಿಸಲಾಗಿದೆ. ಇದು ವೈವಾಹಿಕ (marraige) ಸಂಬಂಧದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ : Vastu Tips : ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ..!

5. ಇನ್ನು  ಮಂಗಳವಾರ ಬಟ್ಟೆಗಳನ್ನು ಖರೀದಿಸಬಾರದು ಅಥವಾ ಧರಿಸಬಾರದು. ಇದಕ್ಕೆ ಕಾರಣವೆಂದರೆ ಕಪ್ಪು ಬಟ್ಟೆಗಳು ಶನಿಯೊಂದಿಗೆ ಸಂಬಂಧಿಸಿವೆ ಮತ್ತು ಮಂಗಳವಾರ ಕಪ್ಪು ಬಟ್ಟೆಗಳನ್ನು (black dress) ಧರಿಸುವುದರಿಂದ ಶನಿಯ ಪರಿಣಾಮ ಹೆಚ್ಚಾಗುತ್ತದೆ. ಆದ್ದರಿಂದ, ಸಾಧ್ಯವಾದಷ್ಟು, ಮಂಗಳವಾರ ಕೆಂಪು ಬಟ್ಟೆಗಳನ್ನು ಧರಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News