ತುಳಸಿ ಪೂಜೆಗೂ ನಿಯಮಗಳಿವೆ ; ಯಾವಾಗ ಮತ್ತು ಹೇಗೆ ಪೂಜಿಸಬೇಕೆಂದು ತಿಳಿದಿರಲಿ
ತುಳಸಿಯಿದ್ದರೆ, ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಯಾಗುತ್ತದೆ ಎಂದೇ ಅರ್ಥ. ತುಳಸಿಗೆ ಪೂಜೆ ಮಾಡಬೇಕು ಹೌದು. ಆದರೆ ಆ ಪೂಜೆಗೂ ನಿಯಮ ಸಮಯ ದಿನ ಎಂಬುದಿದೆ.
ನವದೆಹಲಿ : ತುಳಸಿ ಸಸ್ಯಕ್ಕೆ (tulsi plant) ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ತುಳಸಿ ಮಾತೆ ಅಂದರೆ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಪುಜಿಸುವುದು ಮಾತ್ರವಲ್ಲ, ತುಳಸೀಯಲ್ಲಿ ಅನೇಕ ಔಷಧೀಯ ಮೌಲ್ಯಗಳೂ ಇವೆ. ಪ್ರಯಿಯೊಂದು ಮನೆಯ ಅಂಗಳದಲ್ಲೂ ತುಳಸಿ ಗಿಡವಿರುತ್ತದೆ. ತುಳಸಿಯಿದ್ದರೆ, ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಯಾಗುತ್ತದೆ ಎಂದೇ ಅರ್ಥ. ತುಳಸಿಗೆ ಪೂಜೆ ಮಾಡಬೇಕು ಹೌದು. ಆದರೆ ಆ ಪೂಜೆಗೂ ನಿಯಮ ಸಮಯ ದಿನ (rules for tulsi pooja) ಎಂಬುದಿದೆ. ಇದನ್ನು ಪಾಲಿಸಿ ಪೂಜಿಸಿದರೆ ಮಾತ್ರ ತುಳಸಿ ಪ್ರಸನ್ನಳಾಗುತ್ತಾಳೆ.
ಹಾಗಿದ್ದರೆ ತುಳಸಿ ಪೂಜೆಯ ನಿಯಮಗಳೇನು ನೋಡೋಣ :
ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ, ಪ್ರತಿದಿನ ಸಂಜೆ ತುಳಸಿಗೆ ದೀಪ ಬೆಳಗಿಸಬೇಕು. ಪ್ರತಿದಿನ ಸಂಜೆ ತುಳಸಿಗೆ ದೀಪ ಬೆಳಗಿಸಿ ಪೂಜೆ ಮಾಡುವುದು ಬಹಳ ಪ್ರಯೋಜನಕಾರಿ.
ಇದನ್ನೂ ಓದಿ : Avoid Doing These Works On Sunday: ಭಾನುವಾರ ಈ ಕೆಲಸ ಮಾಡುವುದರಿಂದ ದೂರವಿರಿ
1.ಭಾನುವಾರ, ತುಳಸೀ ಸಸ್ಯಕ್ಕೆ (Tulsi plant) ನೀರು ಹಾಕಬಾರದು. ನೀರು ಹಾಕುವುದು ಮಾತ್ರವಲ್ಲ ಭಾನುವಾರ ತುಳಸಿಗೆ ದೀಪ ಕೂಡಾ ಬೆಳಗಿಸುವಂತಿಲ್ಲ. 2.ಯಾವುದೇ ಮುಳ್ಳಿನ ಸಸ್ಯದೊಂದಿಗೆ ತುಳಸಿ ಸಸ್ಯವನ್ನು ನೆಡಬೇಡಿ. ತುಳಸಿಯ ಬಳಿ ಯಾವಾಗಲೂ ಹೂ ಬಿಡುವ ಸಸುಗಳನ್ನು ನೆಡಬೇಕು.
3. ಇನ್ನು ತುಳಸಿ ಗಿಡವನ್ನು ನೆಡುವುದಕ್ಕೂ ಸೂಕ್ತ ದಿನವಿದೆ. ಗುರುವಾರದಂದು (Thursday) ತುಳಸಿ ಗಿಡವನ್ನು ನೆಡುವುದು ಅತ್ಯಂತ ಶುಭ ಎಂದು ನಂಬಲಾಗಿದೆ. ಕಾರ್ತಿಕ ಮಾಸದಲ್ಲಿ ತುಳಸಿ ಸಸಿಯನ್ನು ನೆಡುವುದು ಕೂಡಾ ಶುಭ ಎಂದು ಪರಿಗಣಿಸಲಾಗಿದೆ. ಆದರೆ ನೆನಪಿಡಿ ತುಳಸಿಯನ್ನು ಯಾವತ್ತೂ ಸ್ವಚ್ಛ ಸ್ಥಳದಲ್ಲಿ ನೆಡಬೇಕು.
ಇದನ್ನೂ ಓದಿ : Daily Routine Tips for Happiness:ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗಬೇಕಾದರೆ ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಿ
4.ತುಳಸಿ ಸಸ್ಯವನ್ನು ಎಲ್ಲೆಂದರಲ್ಲಿ ನೆಡುವಂತಿಲ್ಲ. ತುಳಸಿಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಅದನ್ನು ಒಂದು ಮೂಲೆಯಲ್ಲಿ ಇರಿಸಬೇಕು. ತುಳಸಿಯನ್ನು ಯಾವತ್ತೂ ಟೆರೇಸ್‌ನಲ್ಲಿ ಇಡಬಾರದು.
5.ತುಳಸಿ ಮನೆಯಲ್ಲಿರುವ ಎಲ್ಲಾ ವಾಸ್ತು ದೋಷಗಳನ್ನು (vasthu dosha) ನಿವಾರಿಸುತ್ತದೆ. ಹಾಗಾಗಿ ವಾಸ್ತು ದೋಷವಿರುವ ಸ್ಥಳದಲ್ಲಿ ತುಳಸಿಯನ್ನು ನೆಡಿ.
6.ತುಳಸಿ ಸಸ್ಯವನ್ನು ಸ್ವಚ್ಛವಾದ ಸ್ಥಳದಲ್ಲಿ ನೆಡಬೇಕು. ತುಳಸಿ ಎಲೆಗಳ (Tulsi leaves) ಮೇಲೆ ಧೂಳು ಮಣ್ಣು ನಿಲ್ಲದಂತೆ ನೋಡಿಕೊಳ್ಳಿ. ತುಳಸಿ ಸಸ್ಯದ ಸುತ್ತಲೂ ಪೊರಕೆ, ಡಸ್ಟ್ ಬಿನ್ ಅನ್ನು ತಪ್ಪಿಯೂ ಇಡಬೇಡಿ.
ಇದನ್ನೂ ಓದಿ : Lizard Interpretation: ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದು ಏನು ಸೂಚಿಸುತ್ತೆ, ಅದರ ಪರಿಣಾಮವೇನು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.