ಬೆಂಗಳೂರು : ಜನರು ತೂಕ ಇಳಿಸಿಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ (Water for weight lose). ಅನೇಕ ಜನರು ಡಯಟ್ ಹೆಸರಿನಲ್ಲಿ ಆಹಾರವನ್ನು ತ್ಯಜಿಸುತ್ತಾರೆ. ಇನ್ನು ಅನೇಕರು ಹಸಿರು ತರಕಾರಿಗಳನ್ನು ಸೇವಿಸುತ್ತಾರೆ. ಇದಲ್ಲದೆ, ಅನೇಕ ಜನರು ಗಂಟೆಗಳ ಕಾಲ ಬೆವರು ಹರಿಸಿ ವ್ಯಾಯಾಮ ಮಾಡುತ್ತಾರೆ (Exercise for weight lose). ಆದರೆ ನೀರು ಕುಡಿಯುವ ವಿಚಾರದಲ್ಲಿ ಮಾತ್ರ ತಪ್ಪು ಮಾಡಿಬಿಡುತ್ತಾರೆ.  ಹೌದು ತೂಕ ನಷ್ಟಕ್ಕೂ ನೀರಿಗೂ ಸಂಬಂಧವಿದೆ. ಸರಿಯಾದ ಸಮಯಕ್ಕೆ ನೀರು ಕುಡಿದರೆ ತೂಕ ಇಳಿಸುವಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ.  


COMMERCIAL BREAK
SCROLL TO CONTINUE READING

ಸರಿಯಾದ ಸಮಯದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ : 
ಮಾಧ್ಯಮ ವರದಿಗಳ ಪ್ರಕಾರ, ಮನಸ್ಸನ್ನು ಉಲ್ಲಾಸಗೊಳಿಸುವುದರಿಂದ ತೂಕ ನಷ್ಟದವರೆಗೆ, ನೀರು ಕುಡಿಯುವುದರಿನದ ಬಹಳ ಪ್ರಯೋಜನವಿದೆ (Water drinking tips). ಆದರೆ ಸರಿಯಾದ ಸಮಯಕ್ಕೆ ನೀರು ಕುಡಿಯುವುದು ಮುಖ್ಯ. ನೀರು ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ.  ಸರಿಯಾದ ಪ್ರಮಾಣದ ನೀರು ಅನೇಕ ರೀತಿಯ ಕಾಯಿಲೆಗಳನ್ನು ದೂರ ಮಾಡುತ್ತದೆ (Water benefits). ಜೀರ್ಣಕ್ರಿಯೆಗೆ  ನೀರು ಸಹಾಯ ಮಾಡುತ್ತದೆ. ಆದರೆ ಸರಿಯಾದ ಸಮಯದಲ್ಲಿ ನೀರನ್ನು ಸೇವಿಸಿದಾಗ ಮಾತ್ರ ಈ ಎಲ್ಲಾ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : White Rice : ಬಿಳಿ ಅನ್ನದ ಬದಲಿಗೆ ಈ 5 ಆರೋಗ್ಯಕರ ಆಹಾರ ಸೇವಿಸಿ : ಹೊಟ್ಟೆಯ ಕೊಬ್ಬು ಬರುವುದಿಲ್ಲ!


ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ :
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಬೇಕು. ಅನೇಕ ವರದಿಗಳು ಮತ್ತು ಆಹಾರ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ  ತಕ್ಷಣ ಒಂದು ಅಥವಾ ಎರಡು ಲೋಟ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ರಾತ್ರಿ ನಿದ್ರಿಸುವ ಸಮಯದಲ್ಲಿ ನೀರು ಕುಡಿಯುವುದಿಲ್ಲ.  ಈ ಸಂದರ್ಭದಲ್ಲಿ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬೆಳಿಗ್ಗೆ ನೀರು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ (water for digestion). ಆದ್ದರಿಂದ, ಬೆಳಿಗ್ಗೆ ಯಾವುದೇ ಪಾನೀಯವನ್ನು ಕುಡಿಯುವ ಮೊದಲು, ಒಂದರಿಂದ ಎರಡು ಗ್ಲಾಸ್ ಸಾಮಾನ್ಯ ನೀರನ್ನು ಕುಡಿಯಿರಿ.


ಈ ಸಮಯದಲ್ಲಿಯೂ ನೀರು ಕುಡಿಯಬಹುದು :
ನಿಮಗೆ ಹಸಿವಾದಾಗ, ನೀವು ನೀರನ್ನು ಕುಡಿಯಬೇಕು. ಈ ಸಮಯದಲ್ಲಿ ನೀರು ಕುಡಿಯುವುದರಿಂದ ತಪ್ಪು ಆಹಾರ ಪದ್ಧತಿಯನ್ನು ಅನುಸರಿಸುವುದನ್ನು ತಪ್ಪಿಸಬಹುದು. ನಿರ್ಜಲೀಕರಣದಿಂದಾಗಿ,  ಪದೇ ಪದೇ  ಹಸಿವಾಗುವ ಹಾಗೆ ಭಾಸವಾಗಬಹುದು. 


ಇದನ್ನೂ ಓದಿ : No Smoking Day 2022: ಧೂಮಪಾನವನ್ನು ತೊರೆಯಲು 5 ಸುಲಭ ಮಾರ್ಗಗಳು


ಆಹಾರ ಸೇವಿಸುವ ಮುನ್ನವೂ ನೀರು ಕುಡಿಯುವುದು ಸೂಕ್ತ. ಏಕೆಂದರೆ ನೀರು ಕುಡಿದರೆ ಹೊಟ್ಟೆ ತುಂಬುತ್ತದೆ ಮತ್ತು ಇದರಿಂದ ಕಡಿಮೆ ಆಹಾರ ಸೇವಿಸುತ್ತೀರಿ. ಊಟದ ಸಮಯದಲ್ಲಿ ನೀವು ಈ ಟ್ರಿಕ್ ಅನ್ನು ಅಳವಡಿಸಿಕೊಳ್ಳಬಹುದು (water tips).


ವ್ಯಾಯಾಮದ ಮೊದಲು ಮತ್ತು ನಂತರ ನೀರನ್ನು ಕುಡಿಯಬೇಕು. ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ. ವ್ಯಾಯಾಮದ (exercise)ಸಮಯದಲ್ಲಿ ದೇಹವು ಸಂಪೂರ್ಣವಾಗಿ ಬೆವರುತ್ತದೆ. ಹೀಗಾಗಿ ವ್ಯಾಯಾಮದ ನಂತರ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.