No Smoking Day 2022: ಧೂಮಪಾನವನ್ನು ತೊರೆಯಲು 5 ಸುಲಭ ಮಾರ್ಗಗಳು

No Smoking Day 2022: 'ಧೂಮಪಾನ ನಿಷೇಧ ದಿನ'ವನ್ನು ಮಾರ್ಚ್ ತಿಂಗಳ ಎರಡನೇ ಬುಧವಾರದಂದು ಆಚರಿಸಲಾಗುತ್ತದೆ, ಈ ವರ್ಷ ಮಾರ್ಚ್ 9 ರಂದು 'ನೋ ಸ್ಮೋಕಿಂಗ್ ಡೇ' ಆಚರಿಸಲಾಗುತ್ತಿದೆ. 

Written by - Yashaswini V | Last Updated : Mar 9, 2022, 03:18 PM IST
  • ಹೆಚ್ಚಿನ ತಂಬಾಕನ್ನು ಸಿಗರೇಟ್, ಬೀಡಿ ಮತ್ತು ಹುಕ್ಕಾ ಮೂಲಕ ಸೇವಿಸಲಾಗುತ್ತದೆ
  • ಆದರೆ ಈ ಕೆಟ್ಟ ಚಟವನ್ನು ಬಿಡುವುದು ಮುಖ್ಯ
  • ಇಲ್ಲದಿದ್ದರೆ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚುತ್ತದೆ
No Smoking Day 2022: ಧೂಮಪಾನವನ್ನು ತೊರೆಯಲು 5 ಸುಲಭ ಮಾರ್ಗಗಳು  title=
No Smoking Day

No Smoking Day 2022: ಭಾರತದಲ್ಲಿ ತಂಬಾಕು ಸೇವನೆಯು ಸಾವಿಗೆ ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೇಶಾದ್ಯಂತ ಪ್ರತಿ ವರ್ಷ ಸುಮಾರು 13 ಲಕ್ಷ 50 ಸಾವಿರ ಜನರು ಧೂಮಪಾನದಿಂದ ಸಾಯುತ್ತಾರೆ. ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ ಇಂಡಿಯಾ 2016-17 (ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ ಇಂಡಿಯಾ 2016-17) ಪ್ರಕಾರ, ನಮ್ಮ ದೇಶದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ 26 ಕೋಟಿ 70 ಲಕ್ಷ ಜನರು ತಂಬಾಕು ಸೇವಿಸುತ್ತಾರೆ.

ತಂಬಾಕಿನಿಂದ ಕ್ಯಾನ್ಸರ್ ಅಪಾಯ:
ಹೆಚ್ಚಿನ ತಂಬಾಕನ್ನು ಸಿಗರೇಟ್, ಬೀಡಿ ಮತ್ತು ಹುಕ್ಕಾ ಮೂಲಕ ಸೇವಿಸಲಾಗುತ್ತದೆ. ಆದರೆ ಈ ಕೆಟ್ಟ ಚಟವನ್ನು ಬಿಡುವುದು ಮುಖ್ಯ, ಇಲ್ಲದಿದ್ದರೆ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಬುಧವಾರದಂದು 'ಧೂಮಪಾನ ನಿಷೇಧ ದಿನ' (No Smoking Day) ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 9 ರಂದು 'ನೋ ಸ್ಮೋಕಿಂಗ್ ಡೇ' ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಕೆಟ್ಟ ಅಭ್ಯಾಸವನ್ನು ತೊರೆಯಲು ಸಹಾಯಕವಾಗುವ ಕೆಲವು ಸುಲಭ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಸುತ್ತಿದ್ದೇವೆ.

ಧೂಮಪಾನವನ್ನು ತೊರೆಯಲು 5 ಸುಲಭ ಮಾರ್ಗಗಳು:
1. ಮನಸ್ಸನ್ನು ಶಾಂತವಾಗಿರಿಸಿ:

ಧೂಮಪಾನವನ್ನು ತ್ಯಜಿಸುವ (Quit Smoking) ನಿಮ್ಮ ಉದ್ದೇಶದ ಬಗ್ಗೆ ಚಿಂತಿಸಬೇಡಿ. ನಿಮ್ಮ ಮೆಚ್ಚಿನ ಸಂಗೀತವನ್ನು ಕೇಳುವ ಮೂಲಕ, ಚಲನಚಿತ್ರಗಳನ್ನು ನೋಡುವ ಮೂಲಕ, ಸ್ನೇಹಿತರೊಂದಿಗೆ ತಮಾಷೆ ಮಾಡುವುದರ ಮೂಲಕ, ನಿಮ್ಮ ಮನಸ್ಸಿಗೆ ಸಿಗರೇಟ್ ಇಲ್ಲದೆಯೂ ನೀವು ಆರಾಮವಾಗಿರಬಹುದು ಎಂಬ ಸಂದೇಶವನ್ನು ನೀಡುತ್ತಾ ಇರಿ.

2. ನಿಕೋಟಿನ್ ಅಲ್ಲದ ಔಷಧಗಳು:
ವೈದ್ಯರ ಸಲಹೆಯ ಮೇರೆಗೆ, ನೀವು ನಿಕೋಟಿನ್ ಅಲ್ಲದ ಔಷಧಿಗಳನ್ನು ತೆಗೆದುಕೊಳ್ಳಬೇಕು, ಇದು ಧೂಮಪಾನದ ಕೆಟ್ಟ ಅಭ್ಯಾಸವನ್ನುತೊರೆಯಲು ಸಹಾಯ ಮಾಡಬಹುದು. ಆದರೆ ತಜ್ಞರ ಸಲಹೆಯಿಲ್ಲದೆ ಔಷಧಿಯನ್ನು ತೆಗೆದುಕೊಳ್ಳುವುದು ಹಾನಿಕಾರಕವೆಂದು ಸಾಬೀತುಪಡಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ- Jeera Water: ಜೀರಿಗೆ ನೀರು ಕ್ಯಾನ್ಸರ್ ನಿಂದ ರಕ್ಷಿಸುವಲ್ಲಿ ಪರಿಣಾಮಕಾರಿ

3. ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ:
ನೀವು ಧೂಮಪಾನವನ್ನು ತ್ಯಜಿಸಿದರೆ, ಅದು ತಲೆನೋವು ಮತ್ತು ಕೆಟ್ಟ ಮೂಡ್ ಅನ್ನು ಉಂಟುಮಾಡಬಹುದು, ಆದರೆ ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಮೂಲಕ ನೀವು ಪರಿಹಾರವನ್ನು ಪಡೆಯಬಹುದು. ನಿಕೋಟಿನ್ ಗಮ್, ಲೋಜೆಂಜೆಗಳನ್ನು ಬಳಸಬಹುದು.

4. ಭಾವನಾತ್ಮಕ ಬೆಂಬಲ:
ಧೂಮಪಾನವನ್ನು ತ್ಯಜಿಸಿದ ನಂತರ ಕೆಲವರಿಗೆ ಉದ್ವಿಗ್ನತೆ ಹೆಚ್ಚಾಗುತ್ತದೆ, ಆದ್ದರಿಂದ ನೀವು ನಿಮ್ಮ ಪ್ರೀತಿಪಾತ್ರರ ಹತ್ತಿರ ಉಳಿಯುವುದು ಮತ್ತು ಅವರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುವುದು ಮುಖ್ಯವಾಗಿದೆ. ಇದಲ್ಲದೇ ಕೌನ್ಸೆಲಿಂಗ್‌ನ ಸಹಾಯವನ್ನೂ ಪಡೆಯಬಹುದು.

ಇದನ್ನೂ ಓದಿ- ಈ ಸಮಸ್ಯೆ ಇರುವವರು ಮಧ್ಯಾಹ್ನದ ಹೊತ್ತು ನಿದ್ದೆ ಮಾಡಬಾರದು, ಆರೋಗ್ಯದ ಮೇಲೆ ಬೀರಲಿದೆ ಪರಿಣಾಮ

5. ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡಿ:
ನೀವು ಧೂಮಪಾನವನ್ನು ತೊರೆಯಲು ಪ್ರಯತ್ನಿಸುತ್ತಿರುವುದನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಿ. ಜೊತೆಗೆ ಅವರೊಂದಿಗೆ ನೀವು ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News