ಮನಿ ಪ್ಲಾಂಟ್‌ಗಾಗಿ ವಾಸ್ತು ಸಲಹೆಗಳು: ಮನೆಯಲ್ಲಿ ತುಳಸಿ ಸಸ್ಯವನ್ನು ನೆಡುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ.  ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ನಂತರ ಮನಿ ಪ್ಲಾಂಟ್‌ನ ಸಸ್ಯವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಅದು ಬೆಳೆದಂತೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಸಸ್ಯವನ್ನು ನೆಡುವ ಮತ್ತು ಆರೈಕೆ ಮಾಡುವ ವಿಶೇಷ ಪ್ರಕ್ರಿಯೆಯ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ, ಈ ಪ್ಲಾಂಟ್ ನೆಡುವ ನಮ್ಮ ಉದ್ದೇಶ ಫಲ ನೀಡದೇ ಇರಬಹುದು. ಹಾಗಿದ್ದರೆ, ಮನೆಯಲ್ಲಿ ಮನಿ ಪ್ಲಾಂಟ್ ನೆಡುವ ಮೊದಲು ತಿಳಿದಿರಬೇಕಾದ ವಾಸ್ತು ನಿಯಮಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಮನಿ ಪ್ಲಾಂಟ್‌ನ ಬಳ್ಳಿಯು ಮೇಲ್ಮುಖವಾಗಿರಬೇಕು:
ವಾಸ್ತು ಪ್ರಕಾರ, ಮನಿ ಪ್ಲಾಂಟ್ ಸಸ್ಯ ಹಣದ ಹರಿವಿನೊಂದಿಗೆ ಸಂಬಂಧಿಸಿದೆ. ಆದ್ದರಿಂದ, ಈ ಸಸ್ಯವು ಎಲ್ಲಾ ಸಮಯದಲ್ಲೂ ಮೇಲಕ್ಕೆ ಬೆಳೆಯುವಂತಿರುವುದು ಅವಶ್ಯಕ. ನೀವು ಮನಿ ಪ್ಲಾಂಟ್ ಅನ್ನು ಎಲ್ಲಿ ನೆಡುತ್ತೀರಿ, ಅಲ್ಲಿ ಒಂದು ಉದ್ದನೆಯ ಕೋಲನ್ನು ಅದಕ್ಕೆ ಸಪೋರ್ಟ್ ಆಗಿ ಇಡಿ. ಅದರ ಸಹಾಯದಿಂದ ಸಸ್ಯದ ಬಳ್ಳಿಯು ಮೇಲಕ್ಕೆ ಏರುತ್ತದೆ. ಮನಿ ಪ್ಲಾಂಟ್‌ನ ಬಳ್ಳಿಯು ಮೇಲ್ಮುಖವಾಗಿ ಸಾಗಿದಂತೆ ಮನೆಯಲ್ಲಿ ಆರ್ಥಿಕ ಪ್ರಗತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಮನಿ ಪ್ಲಾಂಟ್‌ನ ಬಳ್ಳಿಯು ಕೆಳಗೆ ನೇತಾಡುತ್ತಿದ್ದರೆ, ಅದು ಕುಟುಂಬದ ಆರ್ಥಿಕ ಪ್ರಗತಿಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. 


ಮನಿ ಪ್ಲಾಂಟ್ ಅನ್ನು ಖರೀದಿಸಿ ಮತ್ತು ನೆಡಿರಿ:
ಅನೇಕ ಬಾರಿ ಜನರು ಪರಸ್ಪರ ಮನಿ ಪ್ಲಾಂಟ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಅದೇ ಸಮಯದಲ್ಲಿ, ಅಜ್ಞಾನದಿಂದಾಗಿ, ಜನರು ಕೆಲವು ಸಮೃದ್ಧ ಮನೆಗಳಿಂದ ಮನಿ ಪ್ಲಾಂಟ್ ಸಸಿಗಳನ್ನು ತರುತ್ತಾರೆ. ಸಂಪದ್ಭರಿತ ಮನೆಗಳಿಂದ ತೆಗೆದ ಮನಿ ಪ್ಲಾಂಟ್ ಅನ್ನು ತಮ್ಮ ಮನೆಯಲ್ಲಿ ಇಟ್ಟರೆ ಅಲ್ಲಿಯೂ ಹಣದ ಮಳೆ ಶುರುವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಇದರಲ್ಲಿ ಯಾವುದೇ ಸತ್ಯವಿಲ್ಲ ಎನ್ನುತ್ತಾರೆ ವಾಸ್ತುತಜ್ಞರು. ನೀವು ಯಾರಿಂದಲೂ ಮನಿ ಪ್ಲಾಂಟ್ ಪ್ಲಾಂಟ್ ಅನ್ನು ಉಡುಗೊರೆಯಾಗಿ ತೆಗೆದುಕೊಳ್ಳಬಾರದು ಅಥವಾ ಬೇರೆಯವರ ಮನೆಯಿಂದ ಅದನ್ನು ತರಬಾರದು. ಬದಲಾಗಿ, ಯಾವಾಗಲೂ ಮನಿ ಪ್ಲಾಂಟ್ ಅನ್ನು ಖರೀದಿಸಿ ತಂದು ಮನೆಯಲ್ಲಿ ನೆಡಬೇಕು. 


ಇದನ್ನೂ ಓದಿ- Vastu Tips: ಬೆಳಗ್ಗೆ ಎದ್ದಾಕ್ಷಣ ಅಪ್ಪಿತಪ್ಪಿಯೂ ಕೂಡ ಈ 5 ಕೆಲಸಗಳನ್ನು ಮಾಡಬೇಡಿ, ಎಲ್ಲಾ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ


ಮನಿ ಪ್ಲಾಂಟ್ ಅನ್ನು ನೆಲದಲ್ಲಿ ನೆಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಅನ್ನು ನೆಲದಲ್ಲಿ ನೆಡಬಾರದು. ಬದಲಿಗೆ ಅದರ ಗಿಡವನ್ನು ದೊಡ್ಡ ಕುಂಡದಲ್ಲಿ ನೆಡುವುದು ಉತ್ತಮ. ನೀವು ಬಯಸಿದರೆ, ನೀವು ಹಸಿರು ಅಥವಾ ನೀಲಿ ಬಣ್ಣದ ಗಾಜಿನ ಬಾಟಲಿ ಅಥವಾ ಮಡಕೆಯಲ್ಲಿ ಸಹ ಮನಿ ಪ್ಲಾಂಟ್ ಅನ್ನು ನೆಡಬಹುದು. ಈ ಸಸ್ಯಕ್ಕೆ ಕಡಿಮೆ ನೀರು ಬೇಕಾಗುತ್ತದೆ, ಆದ್ದರಿಂದ ಮನಿ ಪ್ಲಾಂಟ್‌ಗೆ ಹೆಚ್ಚು ನೀರು ಹಾಕಬೇಡಿ. ಈ ಸಸ್ಯವು ಒಂದು ಕಂಬ ಅಥವಾ ಹಗ್ಗದ ಸಹಾಯದಿಂದ ಮೇಲ್ಮುಖ ದಿಕ್ಕನ್ನು ನೀಡಿ, ಇದರಿಂದ ಅದು ಎತ್ತರಕ್ಕೆ ಬೆಳೆಯುತ್ತದೆ. 


ಸರಿಯಾದ ದಿಕ್ಕಿನಲ್ಲಿ ನೆಡಿ:
ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟಾಗ ಮಾತ್ರ ಶುಭ ಫಲಿತಾಂಶಗಳನ್ನು ನೀಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯ ಅಗ್ನಿಕೋನದಲ್ಲಿ ನೆಡಬೇಕು. ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ ಮತ್ತು ಆರ್ಥಿಕ ಸ್ಥಿತಿಯು ದಿನದಿಂದ ದಿನಕ್ಕೆ ಬಲಗೊಳ್ಳುತ್ತದೆ. ನೀವು ಮನಿ ಪ್ಲಾಂಟ್ ಅನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ, ನಿಮಗೆ ಅದರ ಮಂಗಳಕರ ಫಲಿತಾಂಶಗಳು ಸಿಗುವುದಿಲ್ಲ ಮತ್ತು ಆರ್ಥಿಕ ಪ್ರಗತಿಯೂ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Kapoor Remedies: ಕರ್ಪೂರದ ಈ ಉಪಾಯ ಅನುಸರಿಸುವುದರಿಂದ ಆರ್ಥಿಕ ಮುಗ್ಗಟ್ಟು ದೂರಾಗುತ್ತದೆ, ಪಿತೃದೋಷದಿಂದ ಕೂಡ ಮುಕ್ತಿ


ಮನಿ ಪ್ಲಾಂಟ್ ಅನ್ನು ಮನೆಯೊಳಗೆ ನೆಡಬೇಕು:
ಮನಿ ಪ್ಲಾಂಟ್ ಅನ್ನು ಎಲ್ಲಿ ಇಡಬೇಕು ಎಂಬ ಪ್ರಶ್ನೆ ಅನೇಕ ಜನರನ್ನು ಕಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್‌ನ ಸಸ್ಯವು ಯಾವಾಗಲೂ ಮನೆಯೊಳಗೆ ಇರಬೇಕು. ಈ ಗಿಡವನ್ನು ಮನೆಯ ಹೊರಗೆ ನೆಡುವುದು ಲಕ್ಷ್ಮಿ ದೇವಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ. ಮನೆಯ ಅಲಂಕಾರದಲ್ಲಿ ಈ ಸಸ್ಯವನ್ನು ಬಳಸುವುದನ್ನು ತಪ್ಪಿಸಿ. ಈ ಸಸ್ಯದ ಸುತ್ತಲೂ ಶುಚಿತ್ವವನ್ನು ನೋಡಿಕೊಳ್ಳಲು ಮರೆಯದಿರಿ. ಕೊಳಕು ಜಾಗದಲ್ಲಿ ಮನಿ ಪ್ಲಾಂಟ್ ಗಿಡ ನೆಟ್ಟರೆ ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ, ಆರ್ಥಿಕ  ಪ್ರಗತಿಗಾಗಿ ಈ ಸಸ್ಯವನ್ನು ನೆಡುವಾಗ ಈ ನಿಯಮಗಳನ್ನು ತಪ್ಪದೇ ಅನುಸರಿಸಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.