Kapoor Remedies - ಹಲವು ಬಾರಿ ಸಾಕಷ್ಟು ಪರಿಶ್ರಮಪಟ್ಟರೂ ಕೂಡ ಅದರಿಂದ ಸಿಗುವ ಫಲಿತಾಂಶ ತೃಪ್ತಿಕರವಾಗಿರುವುದಿಲ್ಲ. ಹೀಗಾಗಿ ಜನರು ಹಣಕಾಸಿನ ಮುಗ್ಗಟ್ಟು ಅಥವಾ ಹಣಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಬಯಸಿದರೆ, ನೀವು ಅವುಗಳನ್ನು ತೊಡೆದುಹಾಕಬಹುದು ಮತ್ತು ಇದಕ್ಕಾಗಿ ನೀವು ಸರಳವಾದ ಕರ್ಪೂರದ ಪರಿಹಾರಗಳನ್ನು ಅನುಸರಿಸಬಹುದು. ಪೂಜೆಯಲ್ಲಿ ಬಳಸಲಾಗುವ ಕರ್ಪೂರವು ಹಣಕಾಸಿನ ಅಡೆತಡೆಗಳನ್ನು ತೊಡೆದುಹಾಕಲು ತುಂಬಾ ಸಹಕಾರಿಯಾಗಿದೆ ಮತ್ತು ಪಿತ್ರ ದೋಷವನ್ನು ಕೂಡ ಅದು ನಿವಾರಿಸುತ್ತದೆ.
ಕರ್ಪೂರದಿಂದ ದೃಷ್ಟಿ ತೆಗೆಯಿರಿ
ಒಬ್ಬ ವ್ಯಕ್ತಿಯು ಕೆಟ್ಟ ದೃಷ್ಟಿಗೆ ಒಳಗಾಗಿದ್ದಾರೆ ಮತ್ತು ದೀರ್ಘಕಾಲದವರೆಗೆ ತೊಂದರೆ ಅನುಭವಿಸುತ್ತಿದ್ದರೆ, ಇದಕ್ಕಾಗಿ ಕರ್ಪೂರವನ್ನು ಬಳಸಿ. ಈ ಪರಿಹಾರವನ್ನು ಮಾಡಲು, ಕರ್ಪೂರದ ತುಂಡನ್ನು ತೆಗೆದುಕೊಂಡು ಕೆಟ್ಟ ದೃಷ್ಟಿಗೆ ಒಳಗಾಗಿರುವ ವ್ಯಕ್ತಿಯ ಮುಡಿಯಿಂದ ಅಡಿಯವರೆಗೆ ಪ್ರದಕ್ಷಿಣಾಕಾರವಾಗಿ ಮೂರು ಬಾರಿ ನಿವಾಳಿಸಿ. ಇದಾದ ನಂತರ ಕರ್ಪೂರವನ್ನು ನೆಲದ ಮೇಲೆ ಇಟ್ಟು ಸುಡಬೇಕು. ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ.
ಮನೆಯಲ್ಲಿ ಧನಾತ್ಮಕತೆಯ ಸಂಚಾರಕ್ಕೆ ಕರ್ಪೂರ ಬಳಸಿ
ಮನೆಯಲ್ಲಿ ಸುಖ-ಶಾಂತಿ ಸಿಗಬೇಕೆಂದರೆ, ಇದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕರ್ಪೂರವನ್ನು ತುಪ್ಪದಲ್ಲಿ ನೆನೆಸಿ ಸುಡಬೇಕು. ಇದರ ಸುಗಂಧವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕಿ ಧನಾತ್ಮಕತೆಯನ್ನು ತುಂಬುತ್ತದೆ.
ಇದನ್ನೂ ಓದಿ-ಈ ವಿಚಿತ್ರ ಕನಸುಗಳು ಶ್ರೀಮಂತರಾಗುವ, ಸಂತೋಷದ ವೈವಾಹಿಕ ಜೀವನದ ಸೂಚನೆಯಂತೆ!
ಈ ಉಪಾಯದಿಂದ ನೀವು ಧನವಂತರಾಗಬಹುದು
ಕರ್ಪೂರದ ಒಂದು ಪರಿಹಾರವು ನಿಮ್ಮನ್ನು ಚಿಟಿಕೆ ಹೊಡೆಯೋದ್ರಲ್ಲಿ ಶ್ರೀಮಂತರನ್ನಾಗಿ ಮಾಡಬಹುದು. ಇದಕ್ಕಾಗಿ ರಾತ್ರಿ ಅಡುಗೆ ಕೆಲಸ ಮುಗಿಸಿ, ಬೆಳ್ಳಿಯ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಡಬೇಕು. ಪ್ರತಿದಿನ ಈ ಪರಿಹಾರವನ್ನು ಮಾಡುವುದರಿಂದ ಜೀವನದಲ್ಲಿ ಎಂದಿಗೂ ಸಂಪತ್ತು ಮತ್ತು ಸಮೃದ್ಧಿಯ ಕೊರತೆ ಎದುರಾಗುವುದಿಲ್ಲ.
ಇದನ್ನೂ ಓದಿ-ಜನ್ಮಾಷ್ಟಮಿಗೂ ಮುನ್ನ ಈ ನಾಲ್ಕು ರಾಶಿಯವರ ಮೇಲೆ ಸೂರ್ಯ ದೇವ ಹರಿಸಲಿದ್ದಾನೆ ಕೃಪಾ ಕಟಾಕ್ಷ
ಪಿತೃದೋಷವು ನಿವಾರಣೆ
ಕರ್ಪೂರದ ಸಹಾಯದಿಂದ ಪಿತೃದೋಷ ಮತ್ತು ಕಾಲಸರ್ಪ ದೋಷವನ್ನು ಸಹ ಹೋಗಲಾಡಿಸಬಹುದು. ಏಕೆಂದರೆ, ಪಿತೃದೋಷದಿಂದಾಗಿ, ಒಬ್ಬ ವ್ಯಕ್ತಿಯ ಪ್ರಗತಿಯ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ. ಇದನ್ನು ತಪ್ಪಿಸಲು, ಬೆಳಗ್ಗೆ, ಸಂಜೆ ಮತ್ತು ರಾತ್ರಿ ಮೂರು ಬಾರಿ ಮನೆಯಲ್ಲಿ ಕರ್ಪೂರವನ್ನು ಸುಡಬೇಕು. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಗಮನಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.