Meaning of Dreams: ಕನಸುಗಳು ದೇವರ ಸಂದೇಶವೇ ಅಥವಾ ದಿನವಿಡೀ ನಡೆಯುವ ಘಟನೆಗಳ ರೂಪವೇ? ಜ್ಯೋತಿಷ್ಯದಲ್ಲಿ ಕನಸುಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ, ಅದರಲ್ಲಿಯೂ ವಿಶೇಷವಾಗಿ ಗ್ರಹಗಳ ದಿನನಿತ್ಯದ ಬದಲಾವಣೆಗಳು ಅಂದರೆ ಚಲನಗಳ ಜೊತೆಗೆ ಇವು ಆಳವಾದ ಸಂಪರ್ಕವನ್ನು ಹೊಂದಿದೆ. ಋಷಿ-ಮಿನಿಗಳು ಹೇಳಿರುವ ಪ್ರಕಾರ, ಋಷಿ ಯಾಜ್ಞವಲ್ಕ್ಯ ಈ ಪ್ರಪಂಚವು ಒಂದು ಕನಸಿನಂತೆ ಎಂದು ಹೇಳಿದ್ದಾರೆ. ಎದ್ದ ಮೇಲೆ ಕನಸು ಹೇಗೆ ಸುಳ್ಳಾಗುತ್ತದೋ ಅದೇ ರೀತಿ ಜ್ಞಾನೋದಯವಾದ ಮೇಲೆ ಜಗತ್ತು ಮಿಥ್ಯ ಕಂಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ!
ಹಲವಾರು ರೀತಿಯ ಕನಸುಗಳಿವೆ. ಕೆಲ ಕನಸುಗಳಿಗೆ ಅರ್ಥವಿರುತ್ತದೆ ಅಥವಾ ಅವು ಸಂಕೇತಗಳನ್ನು ನೀಡುತ್ತವೆ ಮತ್ತು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಇಂತಹುದೇ ಕೆಲ ಕನಸುಗಳ ಬಗ್ಗೆ ಇತ್ಲಿದುಕೊಳ್ಳೋಣ ಬನ್ನಿ.


>> ಕನಸಿನಲ್ಲಿ ನೀವು ಭೂಮಿಯಿಂದ ಮೇಲಕ್ಕೆ ಏಳುತ್ತಿದ್ದರೆ ಅಥವಾ ಕನಸಿನಲ್ಲಿ ನಿಮ್ಮನ್ನು ನೀವು ಹಾರುತ್ತಿರುವುದನ್ನು ನೋಡಿದರೆ, ಅದು ಪ್ರಶಂಸೆ ಮತ್ತು ಗೌರವವನ್ನು ನೀಡುತ್ತದೆ. ಕನಸಿನಲ್ಲಿ ನೀವು ಎಷ್ಟು ಎತ್ತರವನ್ನು ತಲುಪುತ್ತೀರೋ ನಿಮಗೆ ಅಷ್ಟೇ ಗೌರವ ಪ್ರಾಪ್ತಿಯಾಗುತ್ತದೆ ಎಂದರ್ಥ, ಇಂತಹ ಕನಸುಗಳು ಉದ್ಯೋಗದಲ್ಲಿ ಪರಗತಿಯನ್ನು ಸೂಚಿಸುತ್ತವೆ.
 
>> ಕನಸಿನಲ್ಲಿ ದಿವ್ಯ ಪೀಠ ಅಥವಾ ಪೂಜಾಸ್ಥಳದ ದರ್ಶನವಾದರೆ,  ಜೀವನದಲ್ಲಿ ದುಃಖ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿ ಜೀವನ ಸುಖಮಯವಾಗುತ್ತದೆ.


>> ಮದುವೆಯಾಗದ ಕನ್ಯೆ ಕನಸಿನಲ್ಲಿ ತನ್ನ ಮುಖದ ಮೇಲೆ ಗಡ್ಡವನ್ನು ನೋಡಿದರೆ, ಅವಳಿಗೆ ಒಳ್ಳೆಯ ಅರ್ಹ ವರನೊಂದಿಗೆ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಯಿದೆ ಎಂದರ್ಥ.


>> ಒಬ್ಬ ವ್ಯಕ್ತಿಗೆ ಕನಸಿನಲ್ಲಿ ಆತ ಹೊಳೆಯುತ್ತಿರುವ ಪಾದರಕ್ಷೆಯನ್ನು ಧರಿಸುತ್ತಿದ್ದಾನೆ ಎಂಬಂತೆ ಕಂಡರೆ, ಆತ ಘನತೆ ಮತ್ತು ಗೌರವವನ್ನು ಪಡೆಯುತ್ತಾನೆ. ಸಮಾಜದಲ್ಲಿ ಆತನ ಸ್ಥಾನಮಾನ ಹೆಚ್ಚಾಗಲಿದೆ .


>> ಕನಸಿನಲ್ಲಿ ಸಿಹಿತಿಂಡಿಗಳನ್ನು ತಯಾರಿಸುವುದನ್ನು ನೋಡಿದರೆ, ವ್ಯಕ್ತಿಯು ಸಂತೋಷ ಮತ್ತು ಸಂಪತ್ತನ್ನು ಪಡೆಯುತ್ತಾನೆ, ಆತನಿಗೆ ಸೇರಬೇಕಾದ ಹಣ ಆತನ ಬಳಿ ಬರುತ್ತದೆ.


>> ಕನಸಿನಲ್ಲಿ ಸತ್ತ ವ್ಯಕ್ತಿ ಅಥವಾ ಹಲವು ವ್ಯಕ್ತಿಗಳೊಂದಿಗೆ ಮಾತನಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.


>> ವ್ಯಕ್ತಿಗೆ ಕನಸಿನಲ್ಲಿ ಶುದ್ಧವಾದ ಮದ್ಯವನ್ನು ಕುಡಿಯುವುದು ಕಂಡರೆ, ಆತ ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಆತನ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂದರ್ಥ.


>> ಕನಸಿನಲ್ಲಿ ಮೊಟ್ಟೆಗಳು ಕಂಡರೆ ಹಣ ಸಿಗುತ್ತದೆ ಎಂದರ್ಥ


>> ಒಬ್ಬ ವ್ಯಕ್ತಿಯು ಕನಸಿನಲ್ಲಿ ತನ್ನ ನಗುತ್ತಿರುವ ಮುಖವನ್ನು ನೋಡಿದರೆ, ಅವನು ಸಂತೋಷವನ್ನು ಪಡೆಯುತ್ತಾನೆ, ಹಳದಿ ಮುಖ ಕಂಡರೆ ರೋಗ ಬರುತ್ತದೆ ಎಂದರ್ಥ.


>> ಕನಸಿನಲ್ಲಿ ಸೇಬನ್ನು ನೋಡುವುದು ವ್ಯಕ್ತಿಯು ದೀರ್ಘಾಯುಷಿ ಮತ್ತು ಯಶಸ್ವಿಯಾಗುತ್ತಾನೆ ಎಂಬುದನ್ನು ಸಂಕೇತಿಸುತ್ತದೆ


ಇದನ್ನೂ ಓದಿ-ಈ ರಾಶಿಯ ಯುವತಿಯನ್ನು ಮದುವೆಯಾದ್ರೆ ಕಡುಬಡವ ಕೂಡ ಶ್ರೀಮಂತನಾಗ್ತಾನೆ


>> ಬಿಸಿ ನೀರು ಕುಡಿಯುವುದು ಅಶುಭ ಸಂಕೇತ ಮತ್ತು ಕೆಸರು ಮಿಶ್ರಿತ ನೀರು ತುಂಬಾ ಅಶುಭ ಸಂಕೇತ.


ಇದನ್ನೂ ಓದಿ-Best Baby Boy Names: ಈ ಮಕ್ಕಳ ಹೆಸರುಗಳು ತುಂಬಾ ಯುನೀಕ್ ಆಗಿವೆ, ಅಕ್ಕ-ಪಕ್ಕದಲ್ಲಿ ಯಾರಿಗೂ ಗೊತ್ತಿರಲಿಕ್ಕಿಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.