Best Baby Boy Names: ಈ ಮಕ್ಕಳ ಹೆಸರುಗಳು ತುಂಬಾ ಯುನೀಕ್ ಆಗಿವೆ, ಅಕ್ಕ-ಪಕ್ಕದಲ್ಲಿ ಯಾರಿಗೂ ಗೊತ್ತಿರಲಿಕ್ಕಿಲ್ಲ

Unique Baby Names: ನೀವೂ ಕೂಡ ನಿಮ್ಮ ಮಗುವಿಗೆ ಯಾವುದಾದರೊಂದು ಸ್ಪೆಷಲ್ ಹೆಸರನ್ನು ಇಡಲು ಬಯಸುತ್ತಿದ್ದರೆ. ಎಲ್ಲಕ್ಕಿಂತ ಮೊದಲು ಈ ಲೇಖನವನ್ನೊಮ್ಮೆ ಓದಿ. ಏಕೆಂದರೆ ಈ ಲೇಖನದಲ್ಲಿ ನಾವು ನಿಮಗೆ ಮಕ್ಕಳಿಗೆ ಇಡಲಾಗುವ ಯುನೀಕ್ ಹೆಸರುಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

Written by - Nitin Tabib | Last Updated : Sep 6, 2022, 05:24 PM IST
  • ಸಾಮಾನ್ಯವಾಗಿ ಮಗುವಿನ ಹೆಸರು ಆ ಮಗುವಿನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ.
  • ಹೀಗಾಗಿ ಪೋಷಕರು ಕೂಡ ತಮ್ಮ ಮಗುವಿಗೆ ನಾಮಕರಣ ಮಾಡುವಾಗ ತುಂಬಾ ಯೋಚನೆಯನ್ನು ಮಾಡುತ್ತಾರೆ.
Best Baby Boy Names: ಈ ಮಕ್ಕಳ ಹೆಸರುಗಳು ತುಂಬಾ ಯುನೀಕ್ ಆಗಿವೆ, ಅಕ್ಕ-ಪಕ್ಕದಲ್ಲಿ ಯಾರಿಗೂ ಗೊತ್ತಿರಲಿಕ್ಕಿಲ್ಲ title=
Unique Baby Names In Kannada_

Unique Names For Babies In Kannada: ಸಾಮಾನ್ಯವಾಗಿ ಮಗುವಿನ ಹೆಸರು ಆ ಮಗುವಿನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಪೋಷಕರು ಕೂಡ ತಮ್ಮ ಮಗುವಿಗೆ ನಾಮಕರಣ ಮಾಡುವಾಗ ತುಂಬಾ ಯೋಚನೆಯನ್ನು ಮಾಡುತ್ತಾರೆ. ಮನೆಯಲ್ಲಿಯೂ ಕೂಡ ಕುಟುಂಬ ಸದಸ್ಯರು, ಬಂಧು-ಮಿತ್ರರು ಕೂಡ ಹೆಸರನ್ನು ಸೂಚಿಸುತ್ತಾರೆ. ಮಗುವಿಗೆ ಹೆಸರನ್ನು ಇಡಲು ಪ್ರತ್ಯೇಕ ನಾಮಕರಣ ಸಮಾರಂಭವೆ ನೆರವೇರಿಸಲಾಗುವ ಸಂಪ್ರದಾಯ ನಮ್ಮದು. ಕೆಲ ಪೋಷಕರು ತಮ್ಮ ಮಗುವಿಗೆ ಯುನೀಕ್ ಹೆಸರನ್ನು ಇಡಲು ಬಯಸುತ್ತಾರೆ. ತಮ್ಮ ನೆರೆಹೊರೆಯಲ್ಲಾಗಲಿ, ಬಂಧು-ಮಿತ್ರ್ರರಲ್ಲಾಗಲಿ ಆ ಹೆಸರು ಯಾರು ತಮ್ಮ ಮಗುವಿಗೆ ಇಟ್ಟಿರಬಾರದು ಎಂಬುದು ಅವರ ಭಾವನೆಯಾಗಿರುತ್ತದೆ. ಹಾಗಾದರೆ ಬನ್ನಿ ಅಂತಹುದೇ ಕೆಲ ಯುನಿಕ್ ಹೆಸರುಗಳನ್ನು ತಿಳಿದುಕೊಳ್ಳೋಣ,

ಇದನ್ನೂ ಓದಿ-Astrology Tips : ಕಾಜಲ್‌ನ ಈ ಪರಿಹಾರ ನಿಮ್ಮ ಅದೃಷ್ಟ ಬೆಳಗಿಸುತ್ತದೆ

ಮಕ್ಕಳ ಯುನೀಕ್ ಹೆಸರುಗಳ ಪಟ್ಟಿ ಇಲ್ಲಿದೆ
1. ನಕ್ಷ - ಈ ಹೆಸರು ತುಂಬಾ ಯುನೀಕ್ ಆಗಿದೆ. ನಕ್ಷ ಹೆಸರಿನ ಅರ್ಥ ನಿಶಾನೆ ಅಥವಾ ಚಿತ್ರ ಎಂದಾಗುತ್ತದೆ. ನ ಅಕ್ಷರದಿಂದ ಆರಂಭಗೊಳ್ಳುವ ನಕ್ಷ ಹೆಸರು ತುಂಬಾ ಮುದ್ದಾಗಿದೆ.
2. ನಿವಾನ್ - ತುಂಬಾ ಸುಂದರ ಹೆಸರು. ನಿವಾನ್ ಹೆಸರಿನ ಅರ್ಥ ಪವಿತ್ರ ಸರೋವರ ಅಥವಾ ಕೆರೆ ಎಂದಾಗುತ್ತದೆ. ನ ಅಕ್ಷರದಿಂದ ಆರಂಭಗೊಳ್ಳುವ ನಿವಾನ್ ಹೆಸರು ತುಂಬಾ ಯುನೀಕ್ ಆಗಿದೆ.
3. ಅನಮ್ಯ - ಈ ಹೆಸರೂ ಕೂಡ ತುಂಬಾ ವಿಶಿಷ್ಟ ಎಂದೆನೆಸಲಿದೆ. ಅನಮ್ಯ ಎಂದರೆ ಬಗ್ಗಿಸಲು ಅಸಾಧ್ಯವಾದುದು ಎಂದರ್ಥ. ಇದು ಶೌರ್ಯ ಹಾಗೂ ಶಕ್ತಿಯ ಪ್ರತೀಕ.
4. ಧ್ವನೀಶ್ - ನಿಮ್ಮ ಮಗುವಿಗೆ ಧ್ವನೀಶ್ ಹೆಸರು ಕೂಡ ಒಂದು ಉತ್ತಮ ಆಯ್ಕೆಯಗಿರಲಿದೆ. ಧ್ವನೀಶ ಎಂದರೆ ಸುಮಧುರ ಧ್ವನಿ ಅಥವಾ ಸದ್ದು ಎಂದಾಗುತ್ತದೆ. ಧ ಅಕ್ಷರದಿಂದ ಆರಂಭವಾಗುವ ಈ ಹೆಸರನ್ನು ನೀವು ಈ ಹಿಂದೆ ಎಂದೂ ಕೇಳಿರಲಿಕ್ಕಿಲ್ಲ.

ಇದನ್ನೂ ಓದಿ-Relationship Tips: ಏಕಕಾಲಕ್ಕೆ ಇಬ್ಬರ ಜೊತೆಗೆ ಡೇಟಿಂಗ್, ಇಲ್ಲಿವೆ ಅದರ ಹಾನಿಗಳು

5. ಕಿಯಾಂಶ- ಕಿಯಾಂಶ ಕೂಡ ಒಂದು ಯುನೀಕ್ ಹೆಸರಾಗಿದೆ. ಇದರರ್ಥ ಎಲ್ಲಾ ಗುಣಗಳಿಂದ ಸಂಪನ್ನ ವ್ಯಕ್ತಿ ಎಂದಾಗುತ್ತದೆ.
6. ಸುವೇಶ್ - ಕೂಡ ಒಂದು ಯುನೀಕ್ ಹೆಸರಾಗಿದೆ. ಸುವೇಶ್ ಹೆಸರಿನ ಅರ್ಥ ಸುಂದರ ವೇಷಭೂಷಗಳನ್ನು ಧರಿಸುವಾತ ಏನಾಗುತ್ತದೆ. ಸ ದಿಂದ ಆರಂಭಗೊಳ್ಳುವ ಹೆಸರನ್ನು ನೀವು ನಿಮ್ಮ ಮಗುವಿಗೆ ಇಡಲು ಬಯಸುತ್ತಿದ್ದರೆ, ಈ ಹೆಸರು ಉತ್ತಮ ಆಯ್ಕೆಯಾಗಿದೆ.
7. ಪ್ರಾಣಾಂಶ - ಹೆಸರೂ ಕೂಡ ಒಂದು ವಿಶಿಷ್ಟ ಆಯ್ಕೆಯಾಗಿರಲಿದೆ. ಇದರರ್ಥ ಪ್ರಾಣದ ಅಂಶ ಎಂದಾಗುತ್ತದೆ. ಒಂದು ವೇಳೆ ನೀವು ನಿಮ್ಮ ಮಗುವಿಗೆ ಪ ದಿಂದ ಆರಂಭಗೊಳ್ಳುವ ಹೆಸರನ್ನು ಇಡಲು ಬಯಸುತ್ತಿದ್ದರೆ, ಪ್ರಾಣಾಂಶ ಒಂದು ಒಳ್ಳೆಯ ಆಯ್ಕೆಯಾಗಿದೆ.
8. ಗತೀಕ್ - ಹೆಸರೂ ಕೂಡ ಯುನೀಕ್ ಆಗಿದೆ. ಗತೀಕ್ ಅರ್ಥ ಚರಾಚರ ಎಂದಾಗುತ್ತದೆ. ಗ ದಿಂದ ಆರಂಭವಾಗುವ ಈ ಹೆಸರು ತುಂಬಾ ಮುದ್ದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News