ನವದೆಹಲಿ : Lipstick Side Effects  : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಹಿಳೆಯರು ಲಿಪ್‌ಸ್ಟಿಕ್‌   ಬಳಸುತ್ತಾರೆ.  ಲಿಪ್‌ಸ್ಟಿಕ್‌  ಮಹಿಳೆಯರ ಸೌಂದರ್ಯಕ್ಕೆ ಹೊಸ ಮೆರಗು ನೀಡುತ್ತದೆ. ವಿವಿಧ ಬ್ರಾಂಡ್‌ಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.  ಲಿಪ್‌ಸ್ಟಿಕ್‌ ಅನ್ನುವುದು ಮಹಿಳೆಯರಜೀವನದ ಒಂದು ಭಾಗವಾಗಿಯೇ ಹೋಗಿದೆ ಎಂದರೂ ತಪ್ಪಾಗುವುದಿಲ್ಲ.  ಲಿಪ್‌ಸ್ಟಿಕ್‌ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಹೌದು, ಇದರಲ್ಲಿ ಎರಡು ಮಾತಿಲ್ಲ. ಆದರೆ  ಇದು ಆರೋಗ್ಯಕ್ಕೂ ಹಾನಿಕಾರಕ (Side effects of lipstick) ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹಾಗಿರುವಾಗ ಲಿಪ್‌ಸ್ಟಿಕ್‌  ಖರೀದಿಸುವ ವೇಳೆ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸೂಕ್ತ. ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಬಹುದು. 


COMMERCIAL BREAK
SCROLL TO CONTINUE READING

ಲಿಪ್‌ಸ್ಟಿಕ್‌  (Lipstick) ಖರೀದಿಸುವ ವೇಳೆ ಅದರಲ್ಲಿ ಮ್ಯಾಂಗನೀಸ್, ಕ್ಯಾಡ್ಮಿಯಮ್, ಕ್ರೋಮಿಯಂ ಮತ್ತು ಅಲ್ಯೂಮಿನಿಯಂ ಇಲ್ಲ ಎನ್ನೂದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಲಿಪ್‌ಸ್ಟಿಕ್‌  ಹಚ್ಚಿ ಆಹಾರವನ್ನು (Food) ತಿನ್ನುವಾಗ, ಈ ಎಲ್ಲಾ ಅಂಶಗಳು ನಿಮ್ಮ ದೇಹ ಸೇರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. 


ಇದನ್ನೂ ಓದಿ : Benefits of Fenugreek Water : ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ 1 ಲೋಟ ಮೆಂತ್ಯ ನೀರು : ಇಲ್ಲಿದೆ ಅದರ  ಪ್ರಯೋಜನಗಳು!


ಲಿಪ್‌ಸ್ಟಿಕ್‌  ದೇಹಕ್ಕೆ ಹಾನಿಯುಂಟು ಮಾಡುವ ಅನೇಕ ರೀತಿಯ ಅಂಶಗಳನ್ನು ಒಳಗೊಂಡಿದೆ. ಇದು ಕ್ಯಾನ್ಸರ್ (Cancer) ನಂಥಹ ಅಪಾಯಕ್ಕೂ ಕಾರಣವಾಗಬಹುದು.


ಗರ್ಭ ಧರಿಸಿದ್ದ ಸಮಯದಲ್ಲಿ ಲಿಪ್‌ಸ್ಟಿಕ್‌  ಹಚ್ಚುವುದನ್ನು ಆದಷ್ಟು ತಪ್ಪಿಸುವುದು ಉತ್ತಮ. ಇನ್ನು ಲಿಪ್‌ಸ್ಟಿಕ್‌ ಹಚ್ಚಲೇ ಬೇಕು ಎಂದಿದ್ದರೆ, ಸಾಧ್ಯವಾದಷ್ಟು ಹರ್ಬಲ್ ಲಿಪ್‌ಸ್ಟಿಕ್‌  (Herbal lipstick) ಬಳಸುವುದು  ಒಳ್ಳೆಯದು. 


ಲಿಪ್‌ಸ್ಟಿಕ್‌  ಹಚ್ಚುವ ಮೊದಲು ಈ ವಿಚಾರಗಳು ನೆನಪಿರಲಿ : 
- ಲಿಪ್‌ಸ್ಟಿಕ್ ಖರೀದಿಸುವ ವೇಳೆ, ಡಾರ್ಕ್ ಶೇಡ್ ಬಳಸುವ ಮುನ್ನ ಯೋಚಿಸಿ. ಇದರಲ್ಲಿ ಹೆವಿಮೆಟಲ್ಸ್ ಇರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಆದ್ದರಿಂದ ಲಿಪ್‌ಸ್ಟಿಕ್ ಖರೀದಿಸುವಾಗ ಡಾರ್ಕ್ ಶೇಡ್ ಗಳನ್ನು ಆದಷ್ಟು ತಪ್ಪಿಸಿ. 
-ಲಿಪ್‌ಸ್ಟಿಕ್ ಹಚ್ಚುವ  ಮೊದಲು, ತುಟಿಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು (Petrolium jelly) ಹಚ್ಚಿದರೆ ಉತ್ತಮ. -ಲಿಪ್‌ಸ್ಟಿಕ್ ಹಚ್ಚುವ  ಮೊದಲು ಪೆಟ್ರೋಲಿಯಂ ಜೆಲ್ಲಿಯನ್ನು  ಹಚ್ಚಿದರೆ, ಇದು ಉಂಟಾಗಬಹುದಾದ ಹಾನಿಯನ್ನು ಕಡಿಮೆ ಮಾಡುತ್ತದೆ.
-ಲೋಕಲ್ ಬ್ರಾಂಡ್‌ಗಳ ಲಿಪ್‌ಸ್ಟಿಕ್‌ಗಳನ್ನು (Local brand lipstick) ಖರೀದಿಸುವುದನ್ನು ತಪ್ಪಿಸಿ. 


ಇದನ್ನೂ ಓದಿ : Monsoon Health Tips: ಮಳೆಗಾಲದಲ್ಲಿ ಈ ಮೂರೂ ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ರೋಗಗಳು ಹತ್ತಿರವೂ ಸುಳಿಯುವುದಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ