Benefits of Fenugreek Water : ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ 1 ಲೋಟ ಮೆಂತ್ಯ ನೀರು : ಇಲ್ಲಿದೆ ಅದರ  ಪ್ರಯೋಜನಗಳು!

ಮೆಂತ್ಯ ನೀರನ್ನ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ನೀರಿನ ಪ್ರಯೋಜನಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ಮೆಂತ್ಯ ನೀರನ್ನು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಬಳಸಲಾಗುತ್ತದೆ.

Written by - Channabasava A Kashinakunti | Last Updated : Jul 14, 2021, 01:25 PM IST
  • ಮೆಂತ್ಯದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ
  • ಮೆಂತ್ಯದ ಮೂಲಕ ನಾವು ಅನೇಕ ರೀತಿಯ ಕಾಯಿಲೆಗಳು ಮತ್ತು ರೋಗಗಳಿಗೆ ಚಿಕಿತ್ಸೆ
  • ಮೆಂತ್ಯ ನೀರನ್ನ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು
Benefits of Fenugreek Water : ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ 1 ಲೋಟ ಮೆಂತ್ಯ ನೀರು : ಇಲ್ಲಿದೆ ಅದರ  ಪ್ರಯೋಜನಗಳು! title=

ಭಾರತದ ಪ್ರತಿಯೊಂದು ಮನೆಗಳಲ್ಲಿ ಮೆಂತ್ಯಯನ್ನ ಬಳಸಲಾಗುತ್ತದೆ. ಮನೆಯಲ್ಲಿ ಧಾನ್ಯದ ಪಲ್ಯ, ತರಕಾರಿ ಪಲ್ಯ, ಮೆಂತ್ಯ ಲಾಡು, ಮೆಂತ್ಯ ಪರೋಟಾ, ಮೆಂತ್ಯ ಚಟ್ನಿ ಮೆಂತ್ಯ ಬಳಸಲಾಗುತ್ತಿದೆ. ಪ್ರಸಿದ್ಧ ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರು ಹೇಳುವಂತೆ, ಮೆಂತ್ಯದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ. ಮೆಂತ್ಯದ ಮೂಲಕ ನಾವು ಅನೇಕ ರೀತಿಯ ಕಾಯಿಲೆಗಳು ಮತ್ತು ರೋಗಗಳಿಗೆ ಚಿಕಿತ್ಸೆ ಪಡೆಯಬಹುದು. ಮೆಂತ್ಯ ಬೀಜಗಳಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಗಳನ್ನು ಹೊಂದಿರುತ್ತದೆ.

ಮೆಂತ್ಯ ನೀರು(Fenugreek Water) ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯುರ್ವೇದ ತಜ್ಞ ಅಬ್ರಾರ್ ಮುಲ್ತಾನಿ ತಿಳಿಸಿದ್ದಾರೆ. ವಿಶೇಷವಾಗಿ ಮೆಂತ್ಯ ನೀರನ್ನ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ನೀರಿನ ಪ್ರಯೋಜನಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ಮೆಂತ್ಯ ನೀರನ್ನು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಬಳಸಲಾಗುತ್ತದೆ.

ಇದನ್ನೂ ಓದಿ : Monsoon Health Tips: ಮಳೆಗಾಲದಲ್ಲಿ ಈ ಮೂರೂ ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ರೋಗಗಳು ಹತ್ತಿರವೂ ಸುಳಿಯುವುದಿಲ್ಲ

ಮೆಂತ್ಯದಲ್ಲಿ ಕಂಡುಬರುವ ಪದಾರ್ಥಗಳು :

ಮೆಂತ್ಯ(Fenugreek)ದೊಳಗೆ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ದೇಹಕ್ಕೆ ಅವಶ್ಯಕವಾಗಿದೆ. ಮೆಂತ್ಯದಲ್ಲಿ ಪ್ರೋಟೀನ್, ಲಿಪಿಡ್, ಶಕ್ತಿ, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ಸತು, ಮ್ಯಾಂಗನೀಸ್, ವಿಟಮಿನ್ ಸಿ, ವಿಟಮಿನ್ ಬಿ, ಸೋಡಿಯಂ, ಕಾರ್ಬೋಹೈಡ್ರೇಟ್ ಇತ್ಯಾದಿಗಳಿವೆ.

ಇದನ್ನೂ ಓದಿ : ಸಿಡಿಲು ಬರುವುದಕ್ಕೂ ಮುನ್ನ ಸಿಗುತ್ತವೆ ಈ ಸೂಚನೆಗಳು , ತಪ್ಪಿಯೂ ಆಗದಿರಲಿ ಈ ತಪ್ಪುಗಳು

ಮೆಂತ್ಯ ನೀರನ್ನು ತಯಾರಿಸುವುದು ಹೇಗೆ?

- ಒಂದರಿಂದ ಒಂದೂವರೆ ಚಮಚ ಮೆಂತ್ಯ ಬೀಜವನ್ನು ರಾತ್ರಿಯಲ್ಲಿ ಒಂದು ಲೋಟ ಶುದ್ಧ ನೀರಿ(Water)ನಲ್ಲಿ ನೆನೆಸಿಡಿ.

- ಬೆಳಿಗ್ಗೆ ಎದ್ದ ನಂತರ, ಈ ನೀರನ್ನು ಚೆನ್ನಾಗಿ ಫಿಲ್ಟರ್ ಮಾಡಿ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಇದನ್ನೂ ಓದಿ : Benefits of Tamarind : ವೇಗವಾಗಿ ದೇಹದ ತೂಕ ಇಳಿಸಲು ಹುಣಸೆ ಹಣ್ಣು : ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ

- ಬೇಕಾದರೆ ನೀವು ನಂತರ ಮೆಂತ್ಯ ಬೀಜಗಳನ್ನು ಸಹ ಸೇವಿಸಬಹುದು.

- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಹೊರಬರುತ್ತವೆ.

- ಮೆಂತ್ಯ ಬೀಜಗಳು(Fenugreek Seeds) ತುಂಬಾ ಉಷ್ಣಾಂಶ ಹೊಂದಿರುತ್ತವೆ, ಆದ್ದರಿಂದ ಮಹಿಳೆಯರು ಇದನ್ನು ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಸೇವಿಸಬಹುದು.

ಇದನ್ನೂ ಓದಿ : Potato, Banana Peel Benefits: ಹಲವು ಹೆಲ್ತ್ ಸಮಸ್ಯೆಗಳಿಗೆ ಆಲೂಗಡ್ಡೆ, ಬಾಳೆಹಣ್ಣಿನ ಸಿಪ್ಪೆಗಳು ರಾಮಬಾಣವಿದ್ದಂತೆ

ಮೆಂತ್ಯ ನೀರಿನ ಅದ್ಭುತ ಪ್ರಯೋಜನಗಳು :

1. ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಹೇಳುವ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆ(Empty Stomach)ಯಲ್ಲಿ ಮೆಂತ್ಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಹೊರಹೊಮ್ಮುತ್ತವೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಇದರೊಂದಿಗೆ, ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ಆರೋಗ್ಯಕರ ಚರ್ಮ ಮತ್ತು ಹೊಟ್ಟೆಯ ಅನೇಕ ಸಮಸ್ಯೆಗಳು ಸಹ ಮಲಬದ್ಧತೆ, ಅಜೀರ್ಣ ಮತ್ತು ಆಮ್ಲೀಯತೆಯನ್ನು ತೊಡೆದುಹಾಕಬಹುದು.

ಇದನ್ನೂ ಓದಿ : Warm Water Benefits : ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿ : ಈ ರೋಗಗಳಿಂದ ದೂರವಿರಿ, ಆದ್ರೆ ಇದು ನೆನಪಿರಲಿ!

3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮೆಂತ್ಯ ನೀರು ಸಹಾಯ ಮಾಡುತ್ತದೆ.

4. ಮೆಂತ್ಯ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲು(Kidney Stones) ಕರಗಿಸಲು ಸಹಾಯ. ಮೆಂತ್ಯದಲ್ಲಿರುವ ಅಂಶಗಳು ಕಲ್ಲುಗಳನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

5. ಕೂದಲಿನ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಮೆಂತ್ಯ ನೀರು ಸಹಾಯ ಮಾಡುತ್ತದೆ. ನೀವು ವಾರಕ್ಕೊಮ್ಮೆ ಮೆಂತ್ಯ ನೀರಿನಿಂದ ಕೂದಲನ್ನು ತೊಳೆಯಬಹುದು. ಇದು ಕೂದಲು ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತದೆ.

ಇದನ್ನೂ ಓದಿ : Side Effects Of Eating Clove : ಆಹಾರದ ರುಚಿ ಹೆಚ್ಚಿಸುವ ಲವಂಗವನ್ನು ಇವರಿಗೆ ಸಮಸ್ಯೆಯಾಗಿ ಪರಿಣಮಿಸಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News