Love Line In Hand: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಿಜವಾದ ಪ್ರೀತಿ ಸಿಗಬೇಕು ಎಂದು ಹಂಬಲಿಸುತ್ತಾನೆ. ಈ ಪ್ರೀತಿಯು ತಂದೆ-ತಾಯಿಯಿಂದ ಸಿಗಲಿ ಅಥವಾ ಸಂಗಾತಿಯಿಂದ ಸಿಗಲಿ. ಇದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಕೆಲವು ಚಿಹ್ನೆಗಳು ಮತ್ತು ರೆಖೆಗಳಿರುತ್ತವೆ, ಈ ರೇಖೆ ಮತ್ತು ಚಿಹ್ನೆಗಳು ವ್ಯಕ್ತಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳುತ್ತವೆ ವೈವಾಹಿಕ ಜೀವನದ ಯಶಸ್ಸನ್ನು ಸೂಚಿಸುವ ಅಂಗೈಯಲ್ಲಿನ ಈ ರೇಖೆಗಳ ಬಗ್ಗೆ ಇಂದು ನಾವು ಅರಿತುಕೊಳ್ಳೋಣ.


COMMERCIAL BREAK
SCROLL TO CONTINUE READING

ಈ ರೇಖೆಗಳು ಪ್ರೀತಿಯ ಜೀವನದ ಬಗ್ಗೆ ಹೇಳುತ್ತವೆ
>> ಗುರು ಪರ್ವತದ ಮೇಲಿರುವ ಕ್ರಾಸ್ ಚಿಹ್ನೆಯು ಪ್ರೇಮ ವಿವಾಹವನ್ನು ಬಿಂಬಿಸುತ್ತದೆ. ಅಂದರೆ, ಒಬ್ಬ ವ್ಯಕ್ತಿಯ ಕೈಯಲ್ಲಿ ಗುರು ಪರ್ವದ ಮೇಲೆ ಕ್ರಾಸ್ ಗುರುತು ಇದ್ದರೆ, ಅದು ಅವನ ಪ್ರೇಮ ವಿವಾಹವನ್ನು ಸಂಕೇತಿಸುತ್ತದೆ. ಇಂತಹ ಚಿಹ್ನೆ ಹೊಂದಿದ ಜನರ ವೈವಾಹಿಕ ಜೀವನವು ಯಶಸ್ವಿಯಾಗುತ್ತದೆ ಮತ್ತು ಈ ಸಂಬಂಧವು ಜೀವನದುದ್ದಕ್ಕೂ ಮುಂದುವರೆಯುತ್ತದೆ.


>> ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕೈಯಲ್ಲಿ ಗುರುಪರ್ವದತ ಮೇಲೆ ಸ್ವಸ್ತಿಕ್ ಚಿಹ್ನೆ ಇದ್ದರೆ, ಆ ವ್ಯಕ್ತಿಯು ಪ್ರೇಮ ವಿವಾಹದ ಬಗ್ಗೆ ಪ್ರಾಮಾಣಿಕವಾಗಿರುತ್ತಾನೆ. ತೋರ್ಪಡಿಕೆಗಾಗಿ ಇವರು ಪ್ರೀತಿಯನ್ನು ಮಾಡುವುದಿಲ್ಲ.ಬದಲಿಗೆ ಸಂಗಾತಿಯ ಮೇಲೆ ನಿಜವಾದ ಪ್ರೀತಿಯನ್ನು ಹೊಂದಿರುತ್ತಾರೆ..


>> ಮೇಲಕ್ಕೆದ್ದಿರುವ ಗುರು ಪರ್ವತ ಮತ್ತು ಹೃದಯ ರೇಖೆ ಗುರು ಪರ್ವತವನ್ನು ತಲುಪಿದ್ದರೆ, ಅಂತಹ ಜನರು ಪ್ರೇಮ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಇದರೊಂದಿಗೆ ದಾಂಪತ್ಯದಲ್ಲಿ ಯಶಸ್ಸನ್ನೂ ಪಡೆಯುತ್ತಾರೆ. ಇಷ್ಟೇ ಅಲ್ಲ, ಅರೇಂಜ್ಡ್ ಮ್ಯಾರೇಜ್‌ಗಳಲ್ಲಿಯೂ ಈ ಜನರು ಸಂಬಂಧವನ್ನು ಮನಃಪೂರ್ವಕವಾಗಿ ನಿಭಾಯಿಸುತ್ತಾರೆ..


>> ವ್ಯಕ್ತಿಯ ಕೈಯಲ್ಲಿ ವಿವಾಹ ರೇಖೆಯ ಅಡಿಯಲ್ಲಿ ಹಲವು ರೇಖೆಗಳು ಶಾಖೆಗಳಾಗಿ ವಿಭಜಿಸುತ್ತಿದ್ದರೆ, ಅಂತಹ ಜನರು ಸಹ ಪ್ರೇಮ ವಿವಾಹದ ಭಾಗ್ಯ ಹೊಂದಿರುತ್ತಾರೆ.


ಇದನ್ನೂ ಓದಿ-Lucky Day: ವಾರದ ಯಾವ ದಿನದಿಂದ ಯಾವ ಕೆಲಸ ಆರಂಭಿಸಿದರೆ ಶುಭಫಲಗಳನ್ನು ನೀಡುತ್ತದೆ


>> ಹೃದಯ ರೇಖೆಯಿಂದ ಹೋರಾಟ  ಒಂದು ರೇಖೆಯು ಸೂರ್ಯ ರೇಖೆಯನ್ನು ತಲುಪಿದ್ದರೆ, ಅಂತಹ ವ್ಯಕ್ತಿಯೂ ಕೂಡ ವ್ಯಕ್ತಿಯ ಪ್ರೇಮ ವಿವಾಹ ಮಾಡಿಕೊಳ್ಳುತ್ತಾರೆ. ಅಂತಹ ಜನರು ಅನೇಕ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-Mustard Seed Remedies: ಮನೆಯ ಸುಖ, ಶಾಂತಿ -ಸಮೃದ್ಧಿಯ ಹೆಚ್ಚಳಕ್ಕೆ ಚಿಟಿಕೆ ಸಾಸಿವೆ ಬಳಸಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.