Which days are lucky days: ಪ್ರತಿ ದಿನವೂ ಪ್ರತಿ ಕೆಲಸಕ್ಕೂ ಯೋಗ್ಯವಾಗಿರುವುದಿಲ್ಲ, ಯಾವುದೇ ಕೆಲಸವನ್ನು ಮಾಡಲು ಸೂಕ್ತ ಸಮಯವಿರುತ್ತದೆ ಎಂದು ಭಾವಿಸಲಾಗುತ್ತದೆ, ಅದನ್ನು ಜೋತಿಷ್ಯ ಪಂಚಾಂಗದ ಮೂಲಕ ಹೇಳಲಾಗುತ್ತದೆ. ಅದರಲ್ಲೂ ಜೀವನದಲ್ಲಿ ಒಮ್ಮೆ ಮಾತ್ರ ಮಾಡುವ ಕೆಲಸಗಳಿಗೆ ಶುಭ ದಿನಗಳು, ಶುಭ ಮುಹೂರ್ತಗಳನ್ನು ನೋಡುವ ಸಂಪ್ರದಾಯವಿದೆ. ಗೃಹಪ್ರವೇಶವಾಗಲಿ ಅಥವಾ ಹೊಸ ಕೆಲಸಕ್ಕೆ ಸೇರುವ ದಿನವಾಗಲಿ, ಅಂಗಡಿ ಅಥವಾ ಕಾರ್ಖಾನೆ ತೆರೆಯುವುದಾಗಲಿ ಅಥವಾ ಕಾರ್ಖಾನೆಯಲ್ಲಿ ಯಾವುದೇ ಯಂತ್ರವನ್ನು ಸ್ಥಾಪಿಸುವುದಾದಲಿ ಪ್ರತಿಯೊಂದು ಕೆಲಸಕ್ಕೂ ಉತ್ತಮವಾದ ಮುಹುರ್ತವನ್ನು ನೋಡಲಾಗುತ್ತದೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಮುಹೂರ್ತದ ಕಲ್ಪನೆಯು ಇರಲೇಬೇಕು.
ದೊಡ್ಡ ರಾಜಕಾರಣಿಗಳು ಮತ್ತು ನಟರು ಕೂಡ ತಮ್ಮ ಕೆಲಸದಲ್ಲಿ ಶುಭ ಸಮಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಶುಭ ಮುಹೂರ್ತ ನೋಡಿ ಕೆಲಸ ಮಾಡಿದರೆ ಯಶಸ್ಸು ಸಿಗುವುದು ಖಚಿತ ಎಂಬ ನಂಬಿಕೆ ಶಾಸ್ತ್ರದಲ್ಲಿದೆ. ಈ ಲೇಖನದಲ್ಲಿ ವಾರದ ಯಾವ ದಿನಗಳಲ್ಲಿ ಯಾವ ಕೆಲಸ ಮಾಡಿದರೆ, ಅದು ಉತ್ತಮ ಫಲ ನೀಡುತ್ತದೆ ತಿಳಿದುಕೊಳ್ಳೋಣ ಬನ್ನಿ.
ಯಾವ ದಿನ ಯಾವ ಕೆಲಸ ಮಾಡಿದರೆ ಶುಭ
ಭಾನುವಾರ- ಈ ದಿನ ಸಂಗೀತ, ವಿದ್ಯಾಭ್ಯಾಸ, ಔಷಧ ತಯಾರಿಕೆ, ಪ್ರಾಣಿಗಳ ಖರೀದಿ, ಲೋಹ, ಆಯುಧ ಮತ್ತು ಬಟ್ಟೆಗಳ ಖರೀದಿ, ವಾಹನ ಖರೀದಿ, ನ್ಯಾಯಕ್ಕಾಗಿ ಸಲಹೆ ಪಡೆದುಕೊಳ್ಳುವಿಕೆ ಮುಂತಾದ ಕೆಲಸಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಹೊಸ ಕೆಲಸದ ಬಗ್ಗೆ ಚರ್ಚಿಸುವುದು ಕೂಡ ಪ್ರಯೋಜನಕಾರಿಯಾಗಲಿದೆ.
ಸೋಮವಾರ- ಈ ದಿನ ಕೃಷಿಗೆ ಸಂಬಂಧಿಸಿದ ಕೆಲಸಗಳಾದ ಸಸಿಗಳನ್ನು ನೆಡುವುದು, ತೋಟಗಾರಿಕೆ ಮಾಡುವುದು, ಹೊಸ ಆಭರಣಗಳನ್ನು ಧರಿಸುವುದು, ಪಶುಪಾಲನೆ ಪ್ರಾರಂಭಿಸುವುದು, ಔಷಧಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು, ನಿರ್ದಿಷ್ಟ ಉದ್ದೇಶಕ್ಕಾಗಿ ಪ್ರಯಾಣ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಮಂಗಳವಾರ- ಯಾರಾದರೂ ಬೇಹುಗಾರಿಕೆ ಅಥವಾ ಸಾಕ್ಷ್ಯವನ್ನು ನೀಡುವಂತಹ ಕೆಲಸವನ್ನು ಮಾಡಬೇಕಾದರೆ, ಮಂಗಳವಾರ ಮಂಗಳಕರ ದಿನವಾಗಿರುತ್ತದೆ. ಈ ದಿನ, ಸಾಲ ಪಡೆದುಕೊಳ್ಳುವುದು, ಕಾರ್ಯಾಚರಣೆ ಅಥವಾ ಅದನ್ನು ಪೂರೈಸುವುದು, ಸೈನ್ಯ ಅಥವಾ ಪೋಲೀಸ್ ಹುದ್ದೆಗೆ ಸೇರುವುದು, ಚರ್ಚೆಯಂತಹ ಕೆಲಸ ಮಾಡುವುದು ಶುಭ ಎಂದು ಪರಿಗಣಿಸಲಾಗುತ್ತದೆ.
ಬುಧವಾರ- ಶೈಕ್ಷಣಿಕ ಕಾರ್ಯಗಳಿಗೆ ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಹೀಗಾಗಿ ಈ ದಿನ ಓದುವುದು, ಬರೆಯುವುದು, ಪ್ರಕಟಿಸುವುದು, ಹೊಸ ವ್ಯವಹಾರವನ್ನು ಪ್ರಾರಂಭಿಸುವುದು, ಕಲೆಗಾರಿಕೆ, ಗ್ರಹ ಪ್ರವೇಶ, ಪತ್ರವ್ಯವಹಾರ, ಸಾರ್ವಜನಿಕ ಸಂಪರ್ಕಗಳು, ಬುಕ್ಕೀಪಿಂಗ್, ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ಕಾರ್ಯಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಬುಧವಾರದ ದಿನ ಆರಂಭಿಸಲಾದ ಈ ಕೆಲಸಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.
ಗುರುವಾರ- ಈ ದಿನವನ್ನು ಧಾರ್ಮಿಕ ಕಾರ್ಯಗಳಿಗೆ ಮೀಸಲಿರಿಸಿದರೆ ಅದು ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ದಿನ ಶುಭ ಕಾರ್ಯಗಳನ್ನು ಮಾಡುವುದು, ಯಾವುದೇ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸುವುದು, ಔಷಧಿ ತೆಗೆದುಕೊಳ್ಳುವುದು, ವಾಹನ ಚಲಾಯಿಸಲು ಆರಂಭಿಸುವುದು, ಜ್ಞಾನ ಮತ್ತು ವಿಜ್ಞಾನದ ಶಿಕ್ಷಣದಲ್ಲಿ ಆಸಕ್ತಿ ವಹಿಸುವುದು, ಗ್ರಹ ಶಾಂತಿ, ಹವನ ಇತ್ಯಾದಿಗಳನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ-2025 ರವರೆಗೆ ಈ ರಾಶಿಯವರನ್ನು ಅತಿಯಾಗಿ ಕಾಡಲಿದ್ದಾನೆ ಶನಿ ಮಹಾತ್ಮ.! ಹೆಜ್ಜೆ ಹೆಜ್ಜೆಗೂ ಎದುರಾಗಲಿದೆ ಅಪಾಯ
ಶುಕ್ರವಾರ- ಶುಕ್ರವಾರವನ್ನು ತಾಯಿ ಲಕ್ಷ್ಮಿಯ ದಿನವೆಂದು ಪರಿಗಣಿಸಲಾಗಿದೆ, ಆದ್ದರಿಂದ ಹಬ್ಬಗಳಿಗೆ ಸಂಬಂಧಿಸಿದ ಕೆಲಸಗಳು, ಕೃಷಿ ಕೆಲಸಗಳು, ಕಲೆ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ಕೆಲಸಗಳು, ಅಲಂಕಾರ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿದರೆ, ವ್ಯಕ್ತಿಗೆ ನಿರೀಕ್ಷಿತ ಲಾಭ ಸಿಗುತ್ತದೆ. ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ-ಅಷಾಢ ಮಾಸದಲ್ಲಿ ರೂಪುಗೊಳ್ಳುವ ಈ ಅಪಾಯಕಾರಿ ಯೋಗ.! ಜೀವನದಲ್ಲಿ ಉಂಟು ಮಾಡಲಿದೆ ಅಲ್ಲೋಲ ಕಲ್ಲೋಲ ..!
ಶನಿವಾರ- ಯಂತ್ರೋಪಕರಣಗಳ ಕೆಲಸ ಮತ್ತು ಬಿಡಿಭಾಗಗಳ ಕೆಲಸ ಮಾಡಲು ಶನಿವಾರ ತುಂಬಾ ಮಂಗಳಕರ ದಿನ ಎಂದು ಹೇಳಲಾಗುತ್ತದೆ ಮತ್ತು ಅದರಿಂದ ಶುಭ ಫಲಿತಾಂಶಗಳೂ ಕೂಡ ಪಾರ್ಪ್ತಿಯಾಗುತ್ತವೆ. ಇದಲ್ಲದೇ ಸಾಕ್ಷಿ ಹೇಳುವುದು, ಹಣ ವಸೂಲಿ ಮಾಡುವುದು, ಅಧಿಕಾರ ವಹಿಸಿಕೊಳ್ಳುವುದು ಮುಂತಾದ ಕೆಲಸಗಳನ್ನು ಮಾಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಶನಿವಾರದ ಚರ್ಚೆಯಲ್ಲಿ ಲಾಭ ಪಡೆಯುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.