ಕೋಟಿಗಳ ಒಡೆಯರಾಗುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು! ಅದೃಷ್ಟ ಇವರನ್ನು ಬಿಡದೇ ಕಾಪಾಡುತ್ತದೆ !
ಈ ದಿನಾಂಕದಲ್ಲಿ ಜನಿಸಿದವರ ಮೇಲೆ ಬಾಲ್ಯದಿಂದಲೂ ಕುಬೇರದೇವನ ಆಶೀರ್ವಾದ ಇರುತ್ತದೆ. ಇವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ.
ಬೆಂಗಳೂರು : ಸಂಖ್ಯಾಶಾಸ್ತ್ರದಲ್ಲಿ, ರಾಡಿಕ್ಸ್ ಅಥವಾ ಮೂಲಾಂಕವನ್ನು ಹುಟ್ಟಿದ ದಿನಾಂಕದ ಮೊತ್ತದ ಆಧಾರದ ಮೇಲೆ ಕಂಡು ಹಿಡಿಯಲಾಗುತ್ತದೆ. ಮೂಲಾಂಕದ ಆಧಾರದಿಂದ ವ್ಯಕ್ತಿಯ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಹೇಳಲಾಗುತ್ತದೆ. ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದವರ ರಾಡಿಕ್ಸ್ ಅಥವಾ ಮೂಲಾಂಕ 7 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಮೂಲಾಂಕ 7 ಆಗಿದ್ದರೆ, ಅಥವರನ್ನು ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರ ಮೇಲೆ ಬಾಲ್ಯದಿಂದಲೂ ಕುಬೇರದೇವನ ಆಶೀರ್ವಾದ ಇರುತ್ತದೆ. ಇವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲ.
ಇವರ ಮೇಲಿರುತ್ತದೆ ಕುಬೇರ ದೇವನ ಕೃಪೆ :
ಜ್ಯೋತಿಷ್ಯದ ಪ್ರಕಾರ, ರಾಡಿಕ್ಸ್ 7 ರ ಜನರು ಹಣಕಾಸಿನ ವಿಷಯದಲ್ಲಿ ವಿಶೇಷ ಅದೃಷ್ಟ ಹೊಂದಿರುತ್ತಾರೆ. ಇವರು ಸಾಕಷ್ಟು ಸಂಪತ್ತನ್ನು ಹೊಂದಿರುತ್ತಾರೆ. ಜೀವನದಲ್ಲಿ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ. ಶ್ರೀಮಂತಿಕೆ ಹುಟ್ಟಿನಿಂದಲೇ ಇವರ ಜೊತೆ ಬರುತ್ತದೆ. ತನ್ನ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುವ ಮೂಲಕ, ಸ್ವತಃ ಸಾಕಷ್ಟು ಹಣವನ್ನು ಗಳಿಸುತ್ತಾನೆ.
ಇದನ್ನೂ ಓದಿ : Lord Lakshmi Zodiac Sign : ಲಕ್ಷ್ಮಿ ದೇವಿಯ ನೆಚ್ಚಿನ ರಾಶಿಗಳು ಇವು : ನಿಮ್ಮ ರಾಶಿಯು ಇದೆಯಾ ನೋಡಿ
ರಾಡಿಕ್ಸ್ 7 ಜನರು ಪ್ರತಿ ಕೆಲಸದಲ್ಲಿ ಯಶಸ್ಸು ಪಡೆಯುತ್ತಾರೆ :
ಮೂಲಾಂಕ 7ರ ಜನರ ಪಾಲಿಗೆ ಸದಾ ಅದೃಷ್ಟ ಇರುತ್ತದೆ. ಇವರು ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಪಡೆಯುತ್ತಾರೆ. ಇವರು ತುಂಬಾ ಬುದ್ಧಿವಂತರಾಗಿದ್ದು, ಶ್ರಮಶೀಲರಾಗಿರುತ್ತಾರೆ. ಹೀಗಾಗಿ ತಾವು ಅಂದು ಕೊಂಡ ಕೆಲಸವನ್ನು ಮಾಡಿ ಮುಗಿಸುವುದು, ಸಾಧಿಸುವುದು ಇವರಿಗೆ ಸುಲಭವಾಗುತ್ತದೆ. ಇವರು ಯಾರೊಬ್ಬರ ಅಡಿಯಲ್ಲಿಯೂ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಈ ಮೂಲಾಂಕ ಹೊಂದಿರುವವರು ಸಾಮಾನ್ಯವಾಗಿ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಆಗುತ್ತಾರೆ. ಅವರು ಉತ್ತಮ ನಾಯಕತ್ವದ ಸಾಮರ್ಥ್ಯವನ್ನು ಕೂಡಾ ಹೊಂದಿರುತ್ತಾರೆ.
ಕುಟುಂಬದ ಅದೃಷ್ಟವನ್ನು ಬೆಳಗಿಸುತ್ತದೆ :
ರಾಡಿಕ್ಸ್ 7 ಹೊಂದಿರುವವರು ಕುಟುಂಬದ ಪಾಲಿಗೂ ಬಹಳ ಅದೃಷ್ಟವಂತರು. ಇವರು ಹುಟ್ಟುತ್ತಲೇ ಕುಟುಂಬದವರ ಅದೃಷ್ಟವೂ ಹೊಳೆಯುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. . ಕುಟುಂಬದ ಗೌರವ ಹೆಚ್ಚುತ್ತದೆ.
ಇದನ್ನೂ ಓದಿ : Vastu Tips: ಸಂಜೆ ವೇಳೆ ಮನೆಯಲ್ಲಿ ಈ ಶಬ್ದ ಕೇಳಿದರೆ ದಿನಬೆಳಗಾಗುವಷ್ಟರಲ್ಲಿ ಅದೃಷ್ಟ ಬದಲಾಗುವುದು ಖಂಡಿತ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ