4 ಗಂಟೆ ಚಂದ್ರಗ್ರಹಣ-20 ಗಂಟೆ ಶರದ್ ಪೂರ್ಣಿಮೆ: ಸೂತಕದ ಅವಧಿಯಲ್ಲಿ ಹಾಲಿಗೆ ಈ ವಸ್ತು ಬೆರೆಸಿದರೆ ಸಿಗಲಿದೆ ಶುಭಫಲ
Sharad Poornima and Chandragrahan: ಈ ವರ್ಷ ಶರದ್ ಪೂರ್ಣಿಮಾ ದಿನದಂದೇ ಚಂದ್ರಗ್ರಹಣವಿರಲಿದೆ. ಶರದ್ ಪೂರ್ಣಿಮೆ ಅಕ್ಟೋಬರ್ 28 ರಂದು ಮತ್ತು ಅದೇ ದಿನ ಚಂದ್ರಗ್ರಹಣ ಸಹ ಸಂಭವಿಸುತ್ತದೆ. ನಿಮಗೆ ತಿಳಿದಿರುವಂತೆ, ಶರದ್ ಪೂರ್ಣಿಮೆಯಂದು ಚಂದ್ರನ ಬೆಳಕಿನಲ್ಲಿ ನೈವೇದ್ಯ ತಿನ್ನುವ ಸಂಪ್ರದಾಯವಿದೆ.
Sharad Poornima and Chandragrahan: ವರ್ಷದ ಕೊನೆಯ ಚಂದ್ರಗ್ರಹಣವು ಶರದ್ ಪೂರ್ಣಿಮೆಯಂದು ಸಂಭವಿಸಲಿದೆ. ಆದರೆ ಸಾಮಾನ್ಯವಾಗಿ ಶರದ್ ಪೂರ್ಣಿಮೆಯ ದಿನದಂದು ನೈವೇದ್ಯ ತಯಾರಿಸಿ, ಚಂದ್ರನ ಬೆಳಕಿನಲ್ಲಿ ಇಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಆದರೆ, ಈ ಬಾರಿ ಚಂದ್ರಗ್ರಹಣವಿರುವ ಕಾರಣ ನೈವೇದ್ಯವನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ ಅನೇಕರು. ಈ ಲೇಖನದಲ್ಲಿ, ಶರದ್ ಪೂರ್ಣಿಮೆಯಂದು ನೈವೇದ್ಯ ತಯಾರಿಸುವಾಗ ಮತ್ತು ತಿನ್ನುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.
ಇದನ್ನೂ ಓದಿ: ಮುಂದಿನ ಎರಡೂವರೆ ವರ್ಷ ಈ ರಾಶಿಗಳಿಗೆ ಪ್ರತಿದಿನವೂ ಅದೃಷ್ಟವೇ: ಅಪಾರ ಸಿರಿಸಂಪತ್ತು ನೀಡಿ ಕಷ್ಟವೇ ಇಲ್ಲದಂತೆ ಕಾಯುವ ಶನಿಮಹಾತ್ಮ
ಶರದ್ ಪೂರ್ಣಿಮೆಯಂದು ಚಂದ್ರಗ್ರಹಣ:
ಈ ವರ್ಷ ಶರದ್ ಪೂರ್ಣಿಮಾ ದಿನದಂದೇ ಚಂದ್ರಗ್ರಹಣವಿರಲಿದೆ. ಶರದ್ ಪೂರ್ಣಿಮೆ ಅಕ್ಟೋಬರ್ 28 ರಂದು ಮತ್ತು ಅದೇ ದಿನ ಚಂದ್ರಗ್ರಹಣ ಸಹ ಸಂಭವಿಸುತ್ತದೆ. ನಿಮಗೆ ತಿಳಿದಿರುವಂತೆ, ಶರದ್ ಪೂರ್ಣಿಮೆಯಂದು ಚಂದ್ರನ ಬೆಳಕಿನಲ್ಲಿ ನೈವೇದ್ಯ ತಿನ್ನುವ ಸಂಪ್ರದಾಯವಿದೆ. ಶರದ್ ಪೂರ್ಣಿಮೆಯ ದಿನದಂದು ಮಾಡುವ ಈ ನೈವೇದ್ಯವನ್ನು ಅಮೃತಕ್ಕೆ ಸಮಾನ ಎಂದು ಹೇಳಲಾಗುತ್ತದೆ.
ಶರದ್ ಪೂರ್ಣಿಮೆಯು ಅಕ್ಟೋಬರ್ 28 ರಂದು ಬೆಳಿಗ್ಗೆ 04.17 ರಿಂದ ಅಕ್ಟೋಬರ್ 29 ರ ಬೆಳಿಗ್ಗೆ 01.53 ರವರೆಗೆ ಇರುತ್ತದೆ. ಅಕ್ಟೋಬರ್ 28 ರಂದು ಸಂಭವಿಸುವ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸುತ್ತದೆ. ಈ ಚಂದ್ರಗ್ರಹಣ ರಾತ್ರಿ 11:32 ರಿಂದ 3:56 ರವರೆಗೆ ಇರುತ್ತದೆ. ಈ ಗ್ರಹಣದ ಮುಖ್ಯ ಪರಿಣಾಮ ಮಧ್ಯಾಹ್ನ 1:05 ರಿಂದ ಪ್ರಾರಂಭವಾಗುತ್ತದೆ.
ನೈವೇದ್ಯ ತಿನ್ನಲು ಸಮಯ:
ಅಕ್ಟೋಬರ್ 28 ರಂದು ಸಂಜೆ 4.05 ಕ್ಕೆ ಚಂದ್ರಗ್ರಹಣದ ಸೂತಕ ಅವಧಿಯೂ ನಡೆಯುತ್ತದೆ. ಚಂದ್ರಗ್ರಹಣದ ನೆರಳಿನಲ್ಲಿ ನೈವೇದ್ಯ ಮಾಡಿ ತಿನ್ನುವ ಸಂಪ್ರದಾಯ ಹೇಗೆ ನೆರವೇರುತ್ತದೆ ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲಿ ಮೂಡುತ್ತಿದೆ. ಏಕೆಂದರೆ ಗ್ರಹಣದ ವೇಳೆ ಮಾಡುವ ನೈವೇದ್ಯ, ಅಶುದ್ಧವಾಗುತ್ತದೆ, ಹೀಗಾಗಿ ಅದನ್ನು ತಿನ್ನುವುದು ಸೂಕ್ತವಲ್ಲ.
ಈ ಸಮಯದಲ್ಲಿ ನೈವೇದ್ಯ ತಯಾರಿಸಿ:
ಶರದ್ ಪೂರ್ಣಿಮೆಯ ದಿನದಂದು ಸಂಭವಿಸುವ ಚಂದ್ರಗ್ರಹಣದ ಸಮಯದಲ್ಲಿ ನೈವೇದ್ಯ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಸೂತಕ ಪ್ರಾರಂಭವಾಗುವ ಮೊದಲು ನೀವು ಹಾಲಿಗೆ ತುಳಸಿ ಎಲೆಗಳನ್ನು ಸೇರಿಸಿ. ನಂತರ ನೀವು ಸೂತಕದ ಅವಧಿಯಲ್ಲಿ ನೈವೇದ್ಯ ಮಾಡಬಹುದು. ಚಂದ್ರಗ್ರಹಣ ಪ್ರಾರಂಭವಾಗುವ ಮೊದಲು ನೀವು ಈ ನೈವೇದ್ಯವನ್ನು ಚಂದ್ರನ ಬೆಳಕಿನಲ್ಲಿ ಇಡಬಹುದು. ಆದರೆ, ಗ್ರಹಣ ಪ್ರಾರಂಭವಾಗುವ ಮೊದಲು ನೈವೇದ್ಯವನ್ನು ಅಲ್ಲಿಂದ ತೆಗೆಯಲು ಮರೆಯದಿರಿ.
ಇದನ್ನೂ ಓದಿ: ಪ್ರೆಗ್ನೆನ್ಸಿ ವದಂತಿ ಬೆನ್ನಲ್ಲೇ ಬೇಬಿಬಂಪ್ ಫೋಟೋ ಹಂಚಿಕೊಂಡು ಹೀಗಂದ್ರು ಅನುಷ್ಕಾ ಶರ್ಮಾ!
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್