ಬೆಂಗಳೂರು : ಭಾರತದಲ್ಲಿ ಬೇಸಿಗೆ ಕಳೆಯುವುದು ಬಹಳ ಕಷ್ಟದ ಕೆಲಸ. ಆದರೂ ಬೇಸಿಗೆಯಲ್ಲಿ ಸಿಗುವ ರಸಭರಿತ ಹಣ್ಣುಗಳಿಗಾಗಿ ಬೇಸಿಗೆಯ ದಿನಗಳನ್ನು ಕೂಡಾ ಜನರು ಕಾಯುತ್ತಿರುತ್ತಾರೆ. ಹಣ್ಣುಗಳ ರಾಜ ಮಾವಿನ ಹಣ್ಣಿನಿಂದ ಹಿಡಿದು ಅನೇಕ ರುಚಿಕರ ಹಣ್ಣುಗಳು ಈ ಮಾಸದಲ್ಲಿಯೇ ಸಿಗುತ್ತದೆ.ಇವುಗಳಲ್ಲಿ ಕೆಲವು ಹಣ್ಣುಗಳು ತೂಕ ಕಳೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಅವುಗಳಲ್ಲಿ ಒಂದು ಲಿಚಿ. .


COMMERCIAL BREAK
SCROLL TO CONTINUE READING

ಬೇಸಿಗೆ ಕಾಲದಲ್ಲಿ ಲಿಚಿ ತಿನ್ನಬೇಕು :
ಬೇಸಿಗೆ ಕಾಲದಲ್ಲಿ, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರಗಳಿಂದ ದೂರವಿರಬೇಕು ಎಂದು ಹೇಳಲಾಗುತ್ತದೆ. ಬದಲಿಗೆ ದೇಹದಲ್ಲಿ ನೀರಿನ ಅಂಶ ಕೊರತೆಯಾಗದಂತೆ ನೋಡಿಕೊಳ್ಳುವ ಮತ್ತು ತೂಕ ಹೆಚ್ಚಾಗಲು ಕಾರಣವಾಗದ ಆಹಾರವನ್ನು ತೆಗೆದುಕೊಳ್ಳಬೇಕು.  ಬೇಸಿಗೆಯಲ್ಲಿ ಲಿಚಿಯನ್ನು ಸೇವಿಸಿದರೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 
 
ಇದನ್ನೂ ಓದಿ :  ಇಡೀ ದಿನ ಟಿವಿ ಮುಂದೆ ಕುಳಿತು ಕೊಳ್ಳುವ ಮುನ್ನ ಇರಲಿ ಎಚ್ಚರ ..! ಕಾಡಬಹುದು ಈ ಅಪಾಯಕಾರಿ ರೋಗ


ಬೇಸಿಗೆಯಲ್ಲಿ ಲಿಚಿ ತಿನ್ನುವ ಪ್ರಯೋಜನಗಳು :
1. ಲಿಚಿ ತಿನ್ನುವುದು ಚಯಾಪಚಯವನ್ನು ಬಲಪಡಿಸುತ್ತದೆ.  ಇದು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಪ್ರಾರಂಭಿಸುತ್ತದೆ.
2. ಅನೇಕ ಜನರು ತೂಕ ಹೆಚ್ಚಾಗುವುದರಿಂದ ತೊಂದರೆಗೊಳಗಾಗುತ್ತಾರೆ. ಆದರೆ ಲಿಚಿಯು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
3. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ.ಹಾಗಾಗಿ ಇದನ್ನು  ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.  
4.  ಗರ್ಭಿಣಿಯಾಗಿದ್ದರೆ ಅಥವಾ ಮಗುವಿಗೆ ಹಾಲುಣಿಸುತ್ತಿದ್ದರೆ, ಲಿಚಿಯು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. 
5. ಲಿಚಿ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬೇರೆ ಬೇರೆ ರೀತಿಯ ಸೋಂಕುಗಳಿಂದ ದೇಹವನ್ಜು ರಕ್ಷಿಸುತ್ತದೆ. 
6. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.
7. ಇದನ್ನು ತಿನ್ನುವುದರಿಂದ ಮುಖವು ಹೊಳೆಯುತ್ತದೆ.
9. ಲಿಚಿ ತಿನ್ನುವುದರಿಂದ ಜ್ವರ, ಶೀತ ಮತ್ತು ಗಂಟಲು ನೋವಿನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ


ಇದನ್ನೂ ಓದಿ : Egg Eating Benefits: ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.