ಬಿಸಿಲ ಧಗೆಯಿಂದ ಪರಿಹಾರ ಪಡೆಯಲು ನಿಮ್ಮ ಡಯೆಟ್ ನಲ್ಲಿರಲಿ ಈ ಆಹಾರ

 ಈ ಋತುವಿನಲ್ಲಿ ಆಹಾರ ಮತ್ತು ಪಾನೀಯಗಳ ವಿಚಾರದಲ್ಲಿ ಸ್ವಲ್ಪ ಅಜಾಗರೂಕತೆ ತೋರಿದರೂ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆಯು ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದು. 

Written by - Ranjitha R K | Last Updated : Mar 29, 2022, 02:33 PM IST
  • ಬೇಸಿಗೆಯ ತಾಪಮಾನ ಏರತೊಡಗಿದೆ.
  • ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ.
  • ನೀರಿನ ಕೊರತೆಯು ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಬಿಸಿಲ ಧಗೆಯಿಂದ ಪರಿಹಾರ ಪಡೆಯಲು ನಿಮ್ಮ ಡಯೆಟ್ ನಲ್ಲಿರಲಿ ಈ ಆಹಾರ  title=
ಬೇಸಿಗೆಯ ತಾಪಮಾನ ಏರತೊಡಗಿದೆ. (file photo)

ಬೆಂಗಳೂರು : ಬೇಸಿಗೆಯ ತಾಪಮಾನ ಏರತೊಡಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪ ಆತಂಕವನ್ನು ಹೆಚ್ಚಿಸುತ್ತಿದೆ. ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ (Summer health tips). ಸೂರ್ಯನ ಸುಡುವ ಬಿಸಿಲಿನ ಕಾರಣ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ನೀರಿನ ಕೊರತೆಯು ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಇದಕ್ಕಾಗಿಯೇ ಬೇಸಿಗೆಯಲ್ಲಿ ಹೆಚ್ಚು ನೀರನ್ನು ಕುಡಿಯುವಂತೆ ಹೇಳಲಾಗುತ್ತದೆ. ನೀರು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಈ ಸಮಯದಲ್ಲಿ ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ. 

ಈ ಋತುವಿನಲ್ಲಿ ಆಹಾರ ಮತ್ತು ಪಾನೀಯಗಳ ವಿಚಾರದಲ್ಲಿ ಸ್ವಲ್ಪ ಅಜಾಗರೂಕತೆ ತೋರಿದರೂ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆಯು ಅತಿಸಾರ ಮತ್ತು ವಾಂತಿಗೆ (Vomiting) ಕಾರಣವಾಗಬಹುದು. ಇದರಿಂದಾಗಿ ದೇಹವು ದುರ್ಬಲವಾಗಬಹುದು. ದೇಹದ ದುರ್ಬಲತೆಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ರೋಗನಿರೋಧಕ ಶಕ್ತಿ (immunity) ದುರ್ಬಲಗೊಳ್ಳುವುದರಿಂದ, ದೇಹವು ಅನೇಕ ಸೋಂಕುಗಳಿಗೆ ಗುರಿಯಾಗುತ್ತದೆ. 
 
ಇದನ್ನೂ ಓದಿ : ದಾಳಿಂಬೆ ತಿಂದರೆ ಹೆಚ್ಚಾಗುತ್ತದೆಯೇ ಬ್ಲಡ್ ಶುಗರ್ ? ಏನು ಹೇಳುತ್ತಾರೆ ತಜ್ಞರು

ಬಿಸಿಲ ಧಗೆಗೆ ಈ ಆಹಾರಗಳನ್ನು ಸೇವಿಸಿ :
1.ಕಿತ್ತಳೆ  : ಕಿತ್ತಳೆ ಶಾಖದಿಂದ ದೇಹವನ್ನು ಆರೋಗ್ಯವಾಗಿ ಇಡುವುದಲ್ಲದೆ,  ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ (Orange benefits). ಕಿತ್ತಳೆ ದೇಹವನ್ನು ತಂಪಾಗಿಸುತ್ತದೆ. ಇದು ಶೇ. 88 ರಷ್ಟು ನೀರು, ವಿಟಮಿನ್-ಸಿ, ಕ್ಯಾಲ್ಸಿಯಂ ಮತ್ತು ಫೈಬರ್ ಅನ್ನು ಒಳಗೊಂಡಿದೆ. ಬೇಸಿಗೆಯಲ್ಲಿ ಕಿತ್ತಳೆ ತಿನ್ನುವುದರಿಂದ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.

2. ನಿಂಬೆ ಪಾನಕ : ಬೇಸಿಗೆ ಕಾಲದಲ್ಲಿ ನಿಂಬೆಹಣ್ಣನ್ನು (Lemon juice) ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೆ;ಳಲಾಗುತ್ತದೆ. ಬೇಸಿಗೆಯಲ್ಲಿ ನಿಂಬೆ ಪಾನಕವನ್ನು ಸೇವಿಸುವುದರಿಂದ ಬಿಸಿಲ ಧಗೆಯಿಂದ ಬಳಲಿದ್ದ ದೇಹ ತಂಪಾಗುತ್ತದೆ.  ಒಳಗಿನಿಂದ ತಾಜಾತನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

3. ಹಸಿರು ತರಕಾರಿಗಳು : ಬೇಸಿಗೆಯಲ್ಲಿ, ನಿಮ್ಮ ಆಹಾರದಲ್ಲಿ ನೀವು ಹೆಚ್ಚು ಹೆಚ್ಚು ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಬೇಕು (Summer food). ಸೋರೆಕಾಯಿ, ಕುಂಬಳಕಾಯಿ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹವನ್ನು ತಂಪಾಗಿಡಲು ಮತ್ತು ಪೋಷಕಾಂಶಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Healthy Bathing Tips: ಹೊಳೆಯುವ ತ್ವಚೆಗಾಗಿ ಸ್ನಾನ ಮಾಡುವ ನೀರಿನಲ್ಲಿ ಈ ಮಸಾಲೆ ಬೆರೆಸಿ!

4. ಮಜ್ಜಿಗೆ, ಮೊಸರು : 
ಶಾಖವನ್ನು ತೊಡೆದುಹಾಕಲು ಮತ್ತು ದೇಹವನ್ನು ತಂಪಾಗಿಸಲು, ನೀವು ನಿಮ್ಮ ಆಹಾರದಲ್ಲಿ ಮೊಸರು (Curd),ಅಥವಾ ಮಜ್ಜಿಗೆಯನ್ನು (butter milk)ಸೇರಿಸಿಕೊಳ್ಳಬೇಕು. ಇವುಗಳ ಸೇವನೆಯು ಹೊಟ್ಟೆಯನ್ನು ತಂಪಾಗಿಸಲು ಮಾತ್ರವಲ್ಲದೆ ಶಾಖದಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ.

5. ಎಳ ನೀರು :
ಎಳ ನೀರನ್ನು  ಪೋಷಕಾಂಶಗಳ ಉಗ್ರಾಣ ಎಂದು ಹೇಳಲಾಗುತ್ತದೆ. ಪ್ರತಿದಿನ ಎಳ ನೀರು  ಕುಡಿಯುವುದರಿಂದ, ಎಲ್ಲಾ ರೀತಿಯ ಹೊಟ್ಟೆಯ ಕಾಯಿಲೆಗಳನ್ನು ತಪ್ಪಿಸಬಹುದು. ಬೇಸಿಗೆಯಲ್ಲಿ ಎಳ ನೀರು ಕುಡಿದರೆ ದೇಹದಲ್ಲಿನ ನೀರಿನ ಪ್ರಮಾಣವನ್ನು ಸಮತೋಲನ ವಾಗಿಟ್ಟುಕೊಳ್ಳಬಹುದು. 

 

ಸೂಚನೆ : ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನೂ ಅಳವಡಿಸಿಕೊಳ್ಳುವ  ಮೊದಲು ತಜ್ಞರ ಸಲಹೆಯನ್ನು ಪಡೆದುಕೊಳ್ಳಿ, ZEE NEWS ಇದನ್ನೂ ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News