Mahashivaratri 2021 Date - ಗುರುವಾರದ ಶಿವ ಹಾಗೂ ಸಿದ್ಧಿ ಯೋಗದಲ್ಲಿ ಶಿವರಾತ್ರಿ, ಈ ದಿನ ಶಿವಪೂಜೆಯಿಂದ ಸಿಗುತ್ತೆ ಅಭಿಷ್ಟ ಲಾಭ
Mahashivaratri 2021 Date - ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಒಂದು ವೇಳೆ ಶಿವರಾತ್ರಿ ತ್ರಿಸ್ಪರ್ಶಾ ಅರ್ಥಾತ್ ತ್ರಯೋದಶಿ, ಚತುರ್ದಶಿ ಹಾಗೂ ಅಮಾವಾಸ್ಯೆಯ ಸ್ಪರ್ಶಯುಕ್ತವಾದರೆ, ಪರಮೊತ್ತಮ ಎಂದು ಹೇಳಲಾಗುತ್ತದೆ.
Mahashivaratri 2021 Date - ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಒಂದು ವೇಳೆ ಶಿವರಾತ್ರಿ ತ್ರಿಸ್ಪರ್ಶಾ ಅರ್ಥಾತ್ ತ್ರಯೋದಶಿ, ಚತುರ್ದಶಿ ಹಾಗೂ ಅಮಾವಾಸ್ಯೆಯ ಸ್ಪರ್ಶಯುಕ್ತವಾದರೆ, ಪರಮೊತ್ತಮ ಎಂದು ಹೇಳಲಾಗುತ್ತದೆ. ಗುರುವಾರ 11ನೇ ತಾರೀಖಿಗೆ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಪ್ರಾತಃಕಾಲದಲ್ಲಿ ತ್ರಯೋದಶಿ ಹಾಗೂ ಅಪರಾಹ್ನ 2.29ರ ಬಳಿಕ ಚತುರ್ದಶಿ ತಿಥಿ ಇದೆ. ಒಂದು ವೇಳೆ ಗುರುವಾರದ ದಿನ ಶಿವರಾತ್ರಿ ಹಬ್ಬ ಬಂದರೆ, ಅದನ್ನು ಅತ್ಯಂತ ಶುಭ ಸಂಯೋಗ ಎಂದು ಹೇಳಲಾಗುತ್ತದೆ. ಇದನ್ನು ಐಶ್ವರ್ಯ ಯೋಗ ಎಂದೂ ಕೂಡ ಕರೆಯುತ್ತಾರೆ.
ಈ ದಿನ ಶಿವ ಹಾಗೂ ಸಿದ್ಧಿ ಯೋಗ ಇರುವುದರ ಜೊತೆಗೆ ಶ್ರೀವತ್ಸ್ ಹಾಗೂ ಸೌಮ್ಯ ಯೋಗ ಕೂಡ ಇರುವುದರಿಂದ ಇದು ಅತ್ಯಂತ ಶುಭ ಸಂಯೋಗವಾಗಿದೆ. ಶಿವರಾತ್ರಿಯ ಈ ಪರ್ವ ಸತ್ಯ ಹಾಗೂ ಶಕ್ತಿಯ ದ್ಯೋತಕ ಕೂಡ ಹೌದು. ಜೋತಿಷ್ಯ ಶಾಸ್ತ್ರದ ಪ್ರಕಾರ ಫಾಲ್ಗುಣ ಕೃಷ್ಣ ಚತುರ್ದಶಿ ತಿಥಿಯಲ್ಲಿ ಚಂದ್ರ, ಸೂರ್ಯನಿಗೆ ತೀರಾ ಹತ್ತಿರದಲ್ಲಿರುತ್ತಾನೆ ಎನ್ನಲಾಗುತ್ತದೆ. ಅರ್ಥಾತ್ ಇದೆ ಅವಧಿಯಲ್ಲಿ ಜೀವನ ರೂಪಿಯಾಗಿರುವ ಚಂದಿರ ಹಾಗೂ ಶಿವರೂಪಿಯಾಗಿರುವ ಸೂರ್ಯನ ಜೊತೆ ಯೋಗ ನಿರ್ಮಾಣಗೊಳ್ಳುತ್ತದೆ. ಹೀಗಾಗಿ ಈ ಚತ್ರುದಶಿಯಂದು ಶಿವ ಪೂಜೆ ಸಲ್ಲಿಸುವುದು ಅಭಿಷ್ಟ ಫಲ ಪ್ರಾಪ್ತಿಗೆ ಕಾರಣವಾಗುತ್ತದೆ. ಶಿವಪುರಾಣದ ಇಶಾನ್ ಸಂಹಿತೆಯ ಪ್ರಕಾರ, ಫಾಲ್ಗುಣ ಕೃಷ್ಣ ಚತುರ್ದಶಿಯ ರಾತ್ರಿ ದೇವಾದಿದೇವ ಶಿವ ಕೋಟ್ಯಂತರ ಸೂರ್ಯಗಳ ಸಮಾನ ಪ್ರಭಾವ ಹೊಂದಿರುವ ಲಿಂಗದ ರೂಪದಲ್ಲಿ ಪ್ರಕಟಗೊಂಡಿದ್ದ ಎಂದು ಹೇಳಲಾಗುತ್ತದೆ. ಈ ವರ್ಣನೆ ಯಾವ ರೀತಿಯಲ್ಲಿದೆ ಎಂದರೆ, 'ಫಾಲ್ಗುಣ ಕೃಷ್ಣ ಚತ್ರುದಶ್ಯಾಂ ಆದಿದೇವ ಮಹಾನಿಷಿ ಶಿವಲಿಂಗಗತಯೋದ್ಭುತಃ ಕೋಟಿ ಸೂರ್ಯ ಸಮಪ್ರಭ' ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ-ಮನೆ ಅಂಗಳದ ತುಳಸಿ ಒಣಗುತ್ತಿದ್ದರೆ ನೀಡುವ ಸಂದೇಶ ಇದು..!
ಈ ದಿನ ಭದ್ರಾ ಇರಲಿದೆ. ಆದರೆ, ಶಿವಪೂಜೆಯ ಸಂದರ್ಭದಲ್ಲಿ ಅದು ನಿಷ್ಪ್ರಭಾವಿಯಾಗಿರಲಿದೆ. ಸಕಲ ಇಷ್ಟಾರ್ಥ ಸಿದ್ಧಿಗಾಗಿ ನದಿಯ ಕಡಲು ತೀರದಿಂದ ತಂದ ಮಣ್ಣಿನ ಶಿವಲಿಂಗವನ್ನು ತಯಾರಿಸಿ ಅದಕ್ಕೆ ವಿಧಿ-ವಿಧಾನದಿಂದ ಪೂಜೆ ಸಲ್ಲಿಸಿ. ಶಿವರಾತ್ರಿಯ ದಿನ ಶಿವನ ಅಷ್ಟ ಮೂರ್ತಿಗಳಿಗೆ ಅಷ್ಟಮಂತ್ರಗಳಿಂದ ಪುಷ್ಪಾಂಜಲಿ ಅರ್ಪಿಸಿ. ಇದರಿಂದ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ. ನಿಮ್ಮ ಮನೆಯ ಪೂರ್ವ ದಿಕ್ಕಿನಿಂದ ಪ್ರಾರಂಭಿಸಿ, ಎಲ್ಲಾ ಎಂಟು ದಿಕ್ಕುಗಳಲ್ಲಿ ಮಂತ್ರೋಚ್ಚಾರಣೆ ಮಾಡಿ ಪುಷ್ಪ ಹಾಗೂ ಜಲ ಅರ್ಪಿಸಿ.
ಇದನ್ನೂ ಓದಿ- ಮಂಗಳವಾರ ಯಾಕೆ ಮಾರುತಿ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ
ಈ ಎಂಟು ಮಂತ್ರಗಳು ಇಲ್ಲಿವೆ
1. ಓಂ ಶರ್ವಾಯ ಕ್ಷಿತಿಮೂರ್ತಯೇನಮಃ
2. ಓಂ ಜಲಾಯ್ ಜಲಮೂರ್ತಯೇನಮಃ
3. ಓಂ ರುದ್ರಾಯ್ ಅಗ್ನಿಮೂರ್ತಯೇನಮಃ
4. ಓಂ ಉಗ್ರಾಯ್ ವಾಯುಮೂರ್ತಯೇನಮಃ
5. ಓಂ ಭೀಮಾಯ್ ಆಕಾಶ ಮೂರ್ತಯೇನಮಃ
6. ಓಂ ಪಶುಪತಯೇ ಯಜಮಾನಮೂರ್ತಯೇನಮಃ
7. ಓಂ ಮಹಾದೇವಾಯ ಸೋಮಮೂರ್ತಯೇನಮಃ
8. ಇಷಾನಾಯ ಸೂರ್ಯಮೂರ್ತಯೇ ನಮಃ
ಇದನ್ನೂ ಓದಿ - vastu tips : ಮನೆಯಲ್ಲಿ ಮನಿಪ್ಲಾಂಟ್ ಇಡುವ ಮೊದಲು ಈ ಮಾತುಗಳನ್ನು ತಿಳಿದುಕೊಳ್ಳಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.