Friday remedy : ಲಕ್ಷ್ಮೀ ಕೃಪೆಗಾಗಿ ಶುಕ್ರವಾರ ಈ ಕೆಲಸಗಳನ್ನು ಮಾಡಿ

ಸಂಜೆಯಾಗುತ್ತಿದ್ದಂತೆ ಮನೆ ಹೊಸ್ತಿಲಲ್ಲಿ ದೀಪ ಹಚ್ಚಿಡಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಶುಕ್ರವಾರದ  ದಿನ ಲಕ್ಷ್ಮೀ ಪೂಜೆಯನ್ನು ) ನೆರವೇರಿಸಿ, ಪ್ರದಕ್ಷಿಣೆ ಹಾಕಿ ನಂತರ ಹೊಸ್ತಿಲಲ್ಲಿ ತುಪ್ಪದಿಂದ ಹಚ್ಚಿದ ದೀಪವನ್ನು ಬೆಳಗಬೇಕು.

Written by - Ranjitha R K | Last Updated : Mar 5, 2021, 01:15 PM IST
  • ಲಕ್ಷ್ಮೀ ಸಂಪತ್ತು, ಶಾಂತಿ ಸಮೃದ್ಧಿಯ ಅಧಿದೇವತೆ
  • ಶುಕ್ರವಾರ ಲಕ್ಷ್ಮೀ ಪೂಜೆ ಮಾಡಿದರೆ ಸಮಸ್ಯೆಗಳೆಲ್ಲಾ ಪರಿಹಾರ
  • ಲಕ್ಷ್ಮೀಯನ್ನು ಓಲೈಸಿಕೊಳ್ಳಬೆಕಾದರೆ ಸ್ವಚ್ಚತೆ ಕಾಪಾಡಿಕೊಳ್ಳುವುದೂ ಮುಖ್ಯ
Friday remedy : ಲಕ್ಷ್ಮೀ ಕೃಪೆಗಾಗಿ ಶುಕ್ರವಾರ ಈ  ಕೆಲಸಗಳನ್ನು ಮಾಡಿ title=
ಶುಕ್ರವಾರ ಲಕ್ಷ್ಮೀ ಪೂಜೆ ಮಾಡಿದರೆ ಸಮಸ್ಯೆಗಳೆಲ್ಲಾ ಪರಿಹಾರ (file photo)

ನವದೆಹಲಿ : ಲಕ್ಷ್ಮೀಯನ್ನು ಸಂಪತ್ತು, ಶಾಂತಿ ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಗೆ (Laxmi Devi) ಅರ್ಪಿತ. ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಹಣಕಾಸಿಗೆ  ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ನಂಬಿಕೆ. ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಶ್ರೇಷ್ಟ ಫಲ ಸಿಗುತ್ತದೆ ಎನ್ನಲಾಗುತ್ತದೆ.  ಅಲ್ಲದೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ . ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು (Negetive energy) ಹೋಗಲಾಡಿಸುತ್ತದೆ. ಹಣಕಾಸಿಗೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದವರು ಶುಕ್ರವಾರದ ಲಕ್ಷ್ಮೀ ಪೂಜೆಯನ್ನು (Friday Pooja) ಮಾಡಿದರೆ ಎಲ್ಲಾ ಕಷ್ಟಗಳಿಗೂ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಬಲ್ಲವರು..

ಶುಕ್ರವಾರದ ಪೂಜೆ ವೇಳೆ ಈ ರೀತಿ ಮಾಡಬೇಕು : 
ಸಂಜೆಯಾಗುತ್ತಿದ್ದಂತೆ ಮನೆ ಹೊಸ್ತಿಲಲ್ಲಿ ದೀಪ ಹಚ್ಚಿಡಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಶುಕ್ರವಾರದ (Friday) ದಿನ ಲಕ್ಷ್ಮೀ ಪೂಜೆಯನ್ನು (Laxmi pooja) ನೆರವೇರಿಸಿ, ಪ್ರದಕ್ಷಿಣೆ ಹಾಕಿ ನಂತರ ಹೊಸ್ತಿಲಲ್ಲಿ ತುಪ್ಪದಿಂದ (Ghee) ಹಚ್ಚಿದ ದೀಪವನ್ನು ಬೆಳಗಬೇಕು. ಇನ್ನು ಈ ದೀಪಕ್ಕೆ ಉಪಯೋಗಿಸುವ ಬತ್ತಿ ಕೆಂಪು ದಾರದಿಂದ ಮಾಡಿದ್ದಾಗಿದ್ದರೆ ಇನ್ನೂ ಉತ್ತಮ.  ಇದು ಶುಭ ಫಲವನ್ನು ನೀಡುತ್ತದೆ ಎನ್ನಲಾಗಿದೆ. ನೆನಪಿರಲಿ ಸೂರ್ಯಾಸ್ತದ ನಂತರವೇ ಹೊಸ್ತಿಲಲಿಗೆ ದೀಪ ಬೆಳಗಬೇಕು. ಈ ರೀತಿ ಸಂಜೆ ಹೊಸ್ತಿಲಲ್ಲಿ ದೀಪ ಬೆಳಗುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎನ್ನುವುದು ನಂಬಿಕೆ. ಮನೆಯಲ್ಲಿ ಧನಾತ್ಮಕ ಶಕ್ತಿಗಳು (Positive energy) ನೆಲೆಗೊಳ್ಳುವುದಕ್ಕೂ ಇದು ಸಹಕಾರಿ ..

ಇದನ್ನೂ ಓದಿ : Mahashivaratri Muhurtha: ಮಾರ್ಚ್ 11ಕ್ಕೆ ಮಹಾಶಿವರಾತ್ರಿ: ಮಹಾಶಿವನ ಪೂಜೆಗೆ ಇಲ್ಲಿದೆ ಶುಭಮುಹೂರ್ತ

ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ : 
ಲಕ್ಷ್ಮೀ ದೇವಿ ಯಾವತ್ತೂ ಸ್ವಚ್ಛತೆಯನ್ನು ಇಷ್ಟಪಡುತ್ತಾಳೆ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮೀ ವಾಸವಿರುತ್ತಾಳೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಎಷ್ಟೇ ಲಕ್ಷ್ಮೀ ಪೂಜೆ ನೆರವೇರಿಸಿದರೂ ಆ ಮನೆಯಲ್ಲಿ ಲಕ್ಷ್ಮೀ  ನೆಲೆಯೂರುವುದಿಲ್ಲ.  ನಿಮ್ಮ  ಆರ್ಥಿಕ ಬೆಳವಣಿಗೆಗಾಗಿ,  ಕೆಟ್ಟು ಹೋದ  ಎಲೆಕ್ಟ್ರಾನಿಕ್ ವಸ್ತುಗಳನ್ನು (Electronic items) ಮನೆಯಲ್ಲಿ ಇಡಬೇಡಿ. ಟ್ಯಾಪ್ ನಿಂದ ನೀರು (water) ತೊಟ್ಟಿಕ್ಕುತ್ತಿರುವುದು ಕೂಡಾ ಒಳ್ಳೆಯದಲ್ಲ.  ನಲ್ಲಿಯಲ್ಲಿ ಸಮಸ್ಯೆ ಬಂದು ನೀರು ಪೋಲಾಗುತ್ತಿದ್ದರೆ ತಕ್ಷಣವೇ ನಲ್ಲಿಯನ್ನು ಸರಿಪಡಿಸಿಕೊಳ್ಳಿ. 

ಮನೆಯ ಎಲ್ಲಾ ಬಾಗಿಲುಗಳ (Door) ಕೀಲುಗಳಿಗೆ ಆಗಾಗ ಎಣ್ಣೆ ಬಿಡುತ್ತಿರಿ. ಬಾಗಿಲು ತೆರೆಯುವಾಗ ಹಾಕುವಾಗ ಬಾಗಿಲ ಸಂಧಿಯಿಂದ ಶಬ್ದ ಬರುತ್ತಿರುವುದು ಕೂಡಾ ಒಳ್ಳೆಯ ಬೆಳವಣಿಗೆ ಯಲ್ಲ.  ರೀತಿ ಬಾಗಿಲ ಬಳಿಯಿಂಸ ಶಬ್ದ ಬರುತ್ತಿದ್ದರೆ ಲಕ್ಷ್ಮೀ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎನ್ನುತ್ತಾರೆ ಹಿರಿಯರು.

ಇದನ್ನೂ ಓದಿ : Devi Lakshmi Money Signal - ದೇವಿ ಲಕ್ಷ್ಮಿಯ ಈ ಸಂಕೇತಗಳನ್ನು ನೀವು ತಿಳಿದುಕೊಂಡು ಧನವಂತರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News