Mahashivratri 2022: ಉಮಾಪುರ ಗ್ರಾಮ (Umapur Village) ಮುಂಡೇಶ್ವರಿ ಧಾಮದ (Mundeshwari Dhama)  ಸಮೀಪದಲ್ಲಿದೆ. ಈ ಗ್ರಾಮದಲ್ಲಿ ಸಹಸ್ತ್ರ ಲಿಂಗೇಶ್ವರ ಮಹಾದೇವ ದೇವಾಲಯವಿದ್ದು, ಇದರಲ್ಲಿ ಮಹಾಶಿವರಾತ್ರಿಯಂದು ಭಕ್ತರು ಒಟ್ಟಾಗಿ 1009 ಶಿವಲಿಂಗವನ್ನು ಪೂಜಿಸುತ್ತಾರೆ. ಈ ಒಂದೇ ಶಿವಲಿಂಗದಲ್ಲಿ 1009 ಚಿಕ್ಕ ಶಿವಲಿಂಗಗಳಿವೆ ಎಂದು ವಿದ್ವಾಂಸ ಪಂಡಿತ್ ಗಿರೀಶ್ ಚಂದ್ರ ದ್ವಿವೇದಿ ಹೇಳುತ್ತಾರೆ. ಇಲ್ಲಿ ಪೂಜಿಸುವುದರಿಂದ 1009 ಶಿವಲಿಂಗವನ್ನು (Sahasralingeshwara Mahadev Temple) ಪೂಜಿಸಿದ ಫಲ ಪ್ರಾಪ್ತಿಯಾಗುತ್ತದೆ. ಇದನ್ನು ಹಜಾರಿಯಾ ಶಿವಲಿಂಗ (Hazaria Shivling) ಎಂದೂ ಕರೆಯುತ್ತಾರೆ.


COMMERCIAL BREAK
SCROLL TO CONTINUE READING

Mahashivratri 2022 Special - ಈ ಶಿವಲಿಂಗದ (Shivling) ಕುರಿತು ಮಾತನಾಡುವ ಉಮಾಪುರ ಗ್ರಾಮದ ಶಿವಭಕ್ತ ಅರುಣ್‌ಕುಮಾರ್ ಸಿಂಗ್, ಈ ಶಿವಲಿಂಗವು ವರ್ಷಾನು ವರ್ಷಗಳ ಹಿಂದೆಯೇ ಈ ನೆಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ ಎಂದು ಹಿರಿಯರು ಹೇಳುತ್ತಾರೆ ಎನ್ನುತ್ತಾರೆ. ಇದೀಗ  ಇಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಪುರಾತತ್ವ ಶಾಸ್ತ್ರಜ್ಞರು ಇದನ್ನು 1500 ವರ್ಷ ಹಳೆಯ ಶಿವಲಿಂಗ ಎಂದು ಹೇಳುತ್ತಾರೆ.  ಶಿವಲಿಂಗ ದೇವಾಲಯದ ಸಂಕೀರ್ಣದಲ್ಲಿ ಪ್ರತಿ ವರ್ಷ ಯಾಗವನ್ನು ಆಯೋಜಿಸಲಾಗುತ್ತದೆ ಎಂದು ಹಜಾರಿಯಾ ಹೇಳುತ್ತಾರೆ. ವೃಂದಾವನ, ಅಯೋಧ್ಯೆ, ಮಥುರಾ ಮತ್ತು ಸೋನೆಪತ್‌ ನಿಂದ  ಸಂತರು ಇಲ್ಲಿ ಪ್ರವಚನ ನೀಡಲು ಬರುತ್ತಾರೆ ಎಂದು ಗ್ರಾಮಸ್ಥಅಲ್ಲಿನ ಓರ್ವ  ರಿಷಬ್‌ದೇವ್ ಸಿಂಗ್ ಮತ್ತು ಮಾಜಿ ಮುಖ್ಯಸ್ಥ ಧೀರೇಂದ್ರ ಪ್ರತಾಪ್ ಸಿಂಗ್ ಹೇಳುತ್ತಾರೆ.


ಇದನ್ನೂ ಓದಿ-White Sandalwood Garland Benefits: ಆರ್ಥಿಕ ಮುಗ್ಗಟ್ಟು ನಿವಾರಿಸುವ ಅಧ್ಭುತ ಮಾಲೆ ಇದು, ಮನಸ್ಸನ್ನು ಕೂಡ ಶಾಂತವಾಗಿರಿಸುತ್ತದೆ


ಈ ಶಿವಲಿಂಗವನ್ನು ಯಾರು ಸ್ಥಾಪಿಸಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಉಮಾಪುರದ ಹಿರಿಯರಾದ ಅನಂತ್ ದುಬೆ ಹೇಳುತ್ತಾರೆ. ಆದರೆ, ಪಾಟ್ನಾದಿಂದ ಕಾಶಿ ಪ್ರಸಾದ್ ಸಂಶೋಧನಾ ಸಂಸ್ಥೆಗೆ ಬಂದ ಪುರಾತತ್ವಶಾಸ್ತ್ರಜ್ಞ ಮಾನಸ್ ರಂಜನ್ ಮನ್ವಂಶ್ ಅವರ ಸಂಶೋಧನೆಯ ಸಮಯದಲ್ಲಿ, ಹಜಾರಿಯಾ ಶಿವಲಿಂಗವು ಸಹಸ್ತ್ರಬಾಹುವಿನ ಸಮಕಾಲೀನ ಸ್ಥಾಪಿತವಾದ ಶಿವಲಿಂಗದ ಶಿವ ಸರಪಳಿಯ ಅವಶೇಷವಾಗಿದೆ ಎಂದು ಹೇಳಲಾಗಿದೆ. ಈ ಶಿವಲಿಂಗವು ಸಸಾರಮ್‌ನಿಂದ ಮುಂಡೇಶ್ವರಿಯವರೆಗೆ ತಂದು ಶಿವಭಕ್ತರೊಬ್ಬರು ಸ್ಥಾಪಿಸಿದ ಶಿವಲಿಂಗಗಳ ಸರಣಿಯ ಉದಾಹರಣೆಯಾಗಿ ಇಂದಿಗೂ ಕೂಡ ಅಸ್ತಿತ್ವದಲ್ಲಿದೆ.


ಇದನ್ನೂ ಓದಿ-Vastu Tips: ಸಂಪತ್ತು ವೃದ್ಧಿಗೆ, ಸುಖಕರ ಜೀವನಕ್ಕೆ ಮನೆ ಮುಂದಿರಲಿ ಅಶೋಕ ಮರ


ಭಗವಾನ್‌ಪುರ-ಮುಂಡೇಶ್ವರಿ ರಸ್ತೆಯ ಸಮೀಪದ ಉಮಾಪುರ ಗ್ರಾಮದಲ್ಲಿ ಪುರಾತನ ಹಜಾರಿಯಾ ಶಿವಲಿಂಗ ದೇವಸ್ಥಾನವಿದೆ. ಶ್ರಾವಣಿ ಜಾತ್ರೆಯ ಸಂದರ್ಭದಲ್ಲಿ ಮುಂಡೇಶ್ವರಿ ಧಾಮಕ್ಕೆ ದರ್ಶನ ಮತ್ತು ಪೂಜೆಗಾಗಿ ಬರುವ ಕಣ್ವಾರಿಯರ ಗುಂಪು ಖಂಡಿತವಾಗಿ ಹಜಾರಿಯಾ ಶಿವಲಿಂಗವನ್ನು ಪೂಜಿಸಲು ಹೋಗುತ್ತಾರೆ. ಹಜಾರಿಯಾ ಶಿವಲಿಂಗವು ವಿಶಿಷ್ಟವಾದ ಶಿವಲಿಂಗವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಶಿವಲಿಂಗವು ದೂರದ ಪ್ರದೇಶಗಳಲ್ಲಿ ಕಾಣುವುದಿಲ್ಲ. ಏಕೆಂದರೆ ಸುಮಾರು ನಾಲ್ಕು ಅಡಿ ಎತ್ತರ ಮತ್ತು ಎರಡು ಅಡಿ ದಪ್ಪ, ಒಂದೇ ಶಿವಲಿಂಗದಲ್ಲಿ 1009 ಸಣ್ಣ ಶಿವಲಿಂಗಗಳಿವೆ, ಇದು ಅದರ ಧಾರ್ಮಿಕ ಪ್ರಾಮುಖ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.


ಇದನ್ನೂ ಓದಿ-ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಇದೆಯಾ? ಹಾಗಾದ್ರೆ ಹಾನಿ ಕಟ್ಟಿಟ್ಟ ಬುತ್ತಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.