ನವದೆಹಲಿ: Benefits Sandalwood Garland For Wealth - ಹಿಂದೂ ಧರ್ಮದಲ್ಲಿ ಅನೇಕ ರೀತಿಯ ವಸ್ತುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಶ್ರೀಗಂಧವನ್ನು ಪೂಜೆಯಲ್ಲಿಯೂ ಕೂಡ ಬಳಸಲಾಗುತ್ತದೆ. ಶ್ರೀಗಂಧವನ್ನು ಮಾಲೆ, ಪರಿಮಳ, ತಿಲಕವಾಗಿಯೂ ಬಳಸಲಾಗುತ್ತದೆ. ಪಠಣ ಮಾಡುವಾಗ ಬಿಳಿ ಚಂದನದ ಮಾಲೆಯನ್ನು ಬಳಸಲಾಗುತ್ತದೆ. ಶ್ರೀಗಂಧದ ಮಾಲೆಯನ್ನು ಧರಿಸುವುದರಿಂದ ಮನಸ್ಸು ಮತ್ತು ದೇಹ ತಂಪಾಗಿರುವುದರ ಜೊತೆಗೆ ಬಿಳಿ ಚಂದನದ ಮಾಲೆಯ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಜ್ಞಾನ ಮತ್ತು ಬುದ್ಧಿಯ ಪ್ರಾಪ್ತಿ
ಶ್ರೀಗಂಧದ (Sandalwood Garland) ಮಾಲೆ ಹಿಡಿದು ಗಾಯತ್ರಿ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಯಾವುದೇ ಇಷ್ಟಾರ್ಥ ಬೇಗನೆ ನೆರವೇರುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಶ್ರೀಗಂಧದ ಮಾಲೆಯನ್ನು ಧರಿಸಿದರೆ ಅವರಿಗೆ ಬಹುಬೇಗನೆ ವಿದ್ಯಾ ಹಾಗೂ ಬುದ್ಧಿ ಪ್ರಾಪ್ತಿಯಾಗುತ್ತದೆ.
ಮನಸ್ಸು ಶಾಂತವಾಗಿರುತ್ತದೆ
ಬಿಳಿ ಚಂದನದ ಮಾಲೆಯನ್ನು ಧರಿಸುವುದರಿಂದ ಮಾನಸಿಕ ನೆಮ್ಮದಿ ಕೂಡ ಲಭಿಸುತ್ತದೆ. ಇದರೊಂದಿಗೆ ಸುತ್ತಲು ಧನಾತ್ಮಕ ಶಕ್ತಿಯ ಸಂಚಾರವಾಗುತ್ತದೆ. ಇದರ ಹೊರತಾಗಿ, ಮನಸ್ಸು ಚಂಚಲತೆಯಿಂದ ಕೂಡಿದ್ದರೆ ಅಥವಾ ವಿಚಲಿತವಾಗಿದ್ದರೆ, ಬಿಳಿ ಚಂದನದ ಮಾಲೆಯನ್ನು ಧರಿಸಬೇಕು.
ಹಣಕಾಸಿನ ಮುಗ್ಗಟ್ಟು ನಿವಾರಿಸುತ್ತದೆ (Benefits Sandalwood Garland For Wealth)
ಬಿಳಿ ಶ್ರೀಗಂಧದ ಮಾಲೆಯು ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ. ಯಾವುದೇ ರೀತಿಯ ಹಣಕಾಸಿನ ಸಮಸ್ಯೆ (Financial Crisis) ಇದ್ದರೆ, ಬಿಳಿ ಚಂದನದ ಮಾಲೆ ಹಿಡಿದು 'ಓಂ ರಣಮುಕ್ತೇಶ್ವರ ಮಹಾದೇವಾಯ ನಮಃ' ಎಂಬ ಈ ಮಂತ್ರವನ್ನು ಜಪಿಸಿ.
ಇದನ್ನೂ ಓದಿ-Vastu Tips: ಸಂಪತ್ತು ವೃದ್ಧಿಗೆ, ಸುಖಕರ ಜೀವನಕ್ಕೆ ಮನೆ ಮುಂದಿರಲಿ ಅಶೋಕ ಮರ
ಬಿಳಿ ಶ್ರೀಗಂಧದ ಮಾಲೆಯನ್ನು ಯಾವಾಗ ಧರಿಸಬೇಕು? (White Sandalwood Benefits)
ಗುರುವಾರ ಬಿಳಿ ಶ್ರೀಗಂಧದ ಮಾಲೆಯನ್ನು ಧರಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಅದನ್ನು ಧರಿಸಲು, ಬೆಳಗ್ಗೆ ಸ್ನಾನ ಮಾಡಿದ ನಂತರ, ಪೂಜೆ ಮಾಡುವ ಜಾಗದಲ್ಲಿ ಕುಳಿತುಕೊಳ್ಳಿ. ನಂತರ, ದೇವರನ್ನು ಪೂಜಿಸಿ, ಶ್ರೀಗಂಧದ ಮಾಲೆಯನ್ನು ಧರಿಸಿ.
ಇದನ್ನೂ ಓದಿ-ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಇದೆಯಾ? ಹಾಗಾದ್ರೆ ಹಾನಿ ಕಟ್ಟಿಟ್ಟ ಬುತ್ತಿ!
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-ಸರ್ವಗುಣ ಸಂಪನ್ನರಾಗಿರುತ್ತಾರೆ ಈ ರಾಶಿಯ ಹುಡುಗಿಯರು, ಉತ್ತಮ ಸೊಸೆ ಎಂದು ಸಾಬೀತಾಗುತ್ತಾರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.