Mahashivratri Muhurat 2023: ಮಹಾಶಿವರಾತ್ರಿಯ ದಿನ ದೇವಾದಿದೇವ ಮಹಾದೇವ ಹಾಗೂ ತಾಯಿ ಪಾರ್ವತಿಯನ್ನು ವಿಶೇಷ ಭಕ್ತಿಭಾವದಿಂದ ಪೂಜಿಸಲಾಗುತ್ತದೆ.  ಈ ದಿನದಂದು ಶಿವನ ಕೃಪೆಯಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ತಾಯಿ ಪಾರ್ವತಿ ಮತ್ತು ಶಿವನ ವಿವಾಹವು ಮಹಾಶಿವರಾತ್ರಿಯ ದಿನದಂದು ನಡೆಯಿತು ಎನ್ನಲಾಗುತ್ತದೆ. ಈ ದಿನದಂದು ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ.  ಈ ದಿನ ಶನಿದೇವನು ಹಗಲಿನಲ್ಲಿ ಕುಂಭ ರಾಶಿಯಲ್ಲಿ ಸಾಗುತ್ತಾನೆ. 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿಯ ಈ ಕುಂಭ ಸಂಚಾರ ನೆರವೇರುತ್ತಿರುವುದು ವಿಶೇಷವಾಗಿದೆ. ವೈದಿಕ ಪಂಚಾಂಗದ ಪ್ರಕಾರ ಇಂದು ಫೆಬ್ರವರಿ 18, 2023, ದೇಶಾದ್ಯಂತ ಮಹಾ ಶಿವರಾತ್ರಿಯ ಮಹಾಪರ್ವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಿವ ಭಕ್ತರು ಶಿವಾಲಯಗಳಿಗೆ ತೆರಳಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ರಾತ್ರಿ ಕೂಡ ಜನರು ಜಾಗರಣೆಯನ್ನು ಮಾಡಿ ಶಿವಪುರಾಣ ಇತ್ಯಾದಿಗಳನ್ನು ಪಠಿಸುತ್ತಾರೆ ಮತ್ತು ಆಲಿಸುತ್ತಾರೆ. ಯಾವ ಮುಹೂರ್ತದಲ್ಲಿ ಶಿವನ ಆರಾಧನೆ ಹೆಚ್ಚು ಫಲಪ್ರದ ತಿಳಿದುಕೊಳ್ಳೋಣ ಬನ್ನಿ,  


COMMERCIAL BREAK
SCROLL TO CONTINUE READING

ಮತ್ತೊಂದೆಡೆ ಇಂದು ಶನಿ ಪ್ರದೋಷ ವ್ರತದ ಕಾಕತಾಳೀಯವಿದೆ. ಹೀಗಾಗಿ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ದಿನ ಅಪ್ಪಿತಪ್ಪಿಯೂ ಕೂಡ ಕೆಲ ಕೆಲಸಗಳನ್ನು ಮಾಡಬಾರದು ಎನ್ನಲಾಗುತ್ತದೆ. ಏಕೆಂದರೆ ಈ ಕೆಲಸಗಳನ್ನು ಮಾಡುವುದರಿಂದ ಶಿವ ನಿಮ್ಮ ಮೇಲೆ ಮುನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಯಾವು ಯಾವ ಕೆಲಸ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


ಮಹಾಶಿವರಾತ್ರಿಯ ಶುಭ ಮುಹೂರ್ತಗಳು
>> ಪ್ರಥಮ ಪ್ರಹರ ಪೂಜಾ ಸಮಯ: 18 ಫೆಬ್ರವರಿ 2023, ಸಂಜೆ 6: 41 ರಿಂದ ರಾತ್ರಿ 9: 47 ರವರೆಗೆ ಇರಲಿದೆ.
>> ದ್ವಿತೀಯ ಪ್ರಹರ ಪೂಜಾ ಸಮಯ: 18 ಫೆಬ್ರವರಿ 2023ರ ರಾತ್ರಿ 09:47 ರಿಂದ ರಾತ್ರಿ 12:53 ವರೆಗೆ ಇರಲಿದೆ.
>> ತೃತೀಯ ಪ್ರಹರ ಪೂಜಾ ಸಮಯ: ಫೆಬ್ರವರಿ 19, 2023 ರ  ಬೆಳಗಿನ ಜಾವ  12.53 ರಿಂದ ಬೆಳಗಿನ ಜಾವ 03.58 ರವರೆಗೆ ಇರಲಿದೆ.
>> ಚತುರ್ಥ ಪ್ರಹರ ಪೂಜಾ ಸಮಯ: ಫೆಬ್ರವರಿ 19, 2023ರ ಬೆಳಗಿನ ಜಾವ 03:58 ರಿಂದ ಬೆಳಗ್ಗೆ 07:06 ರವರೆಗೆ ಇರಲಿದೆ.


ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ
>> ಶಿವನ ಪೂಜೆಯಲ್ಲಿ ಕೇತಕಿ ಮತ್ತು ಚಂಪಾ ಹೂವುಗಳನ್ನು ಅರ್ಪಿಸಬೇಡಿ. ಈ ಹೂವುಗಳು ಶಿವನಿಂದ ಶಾಪ ಪಡೆದಿವೆ ಎಂದು ನಂಬಲಾಗಿದೆ. ಹೀಗಾಗಿ ಈ ಹೂವುಗಳನ್ನು ಅರ್ಪಿಸುವುದನ್ನು ತಪ್ಪಿಸಬೇಕು.


>> ಈ ದಿನ ಪೂಜಿಸುವಾಗ ಶಿವನಿಗೆ ಭಗ್ನಗೊಂಡ ಅಥವಾ ತುಂಡರಿಸಿದ ಅಕ್ಷತೆಯನ್ನು ಅರ್ಪಿಸಬಾರದು. ಏಕೆಂದರೆ ಮುರಿದ ಅಕ್ಕಿಯನ್ನು ಅಪೂರ್ಣತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ತುಂಡಾದ ಅಕ್ಷತೆಯನ್ನು ಅರ್ಪಿಸುವುದನ್ನು ತಪ್ಪಿಸಬೇಕು.


>> ಶಿವನಿಗೆ ಮೂರು ಅಕ್ಷರಗಳೊಂದಿಗೆ ಬೆಲ್ಪತ್ರಿಯನ್ನು ಶಿವನಿಗೆ ಅರ್ಪಿಸಿ. ಹರಿದು ಹೋದ ಬೆಲ್ಪತ್ರಿಯನ್ನು ಅರ್ಪಿಸಬೇಡಿ ಮತ್ತು ಬೇಲ್ಪತ್ರಿಯ ಮೇಲೆ ಶ್ರೀಗಂಧದಿಂದ ರಾಮ ಎಂದು ಬರೆಯುವುದನ್ನು ಮರೆಯಬೇಡಿ


>> ಮಹಾಶಿವರಾತ್ರಿಯಂದು ನಾಲ್ಕು ಪ್ರಹರಗಳಲ್ಲಿ ಪೂಜೆ ಸಲ್ಲಿಸುವವರು, ಮೊದಲ ಪ್ರಹರದಲ್ಲಿ ನೀರಿನಿಂದ, ಎರಡನೇ ಪ್ರಹರದಲ್ಲಿ ಮೊಸರಿನಿಂದ, ಮೂರನೇ ಪ್ರಹರದಲ್ಲಿ ತುಪ್ಪದಿಂದ ಮತ್ತು ನಾಲ್ಕನೇ ಪ್ರಹರದಲ್ಲಿ ಜೇನುತುಪ್ಪದಿಂದ ಶಿವನ ಮೇಲೆ ಅಭಿಷೇಕ ಮಾಡಬೇಕು.  ಹೀಗೆ ಮಾಡುವುದರಿಂದ ಕೀರ್ತಿ, ಭಾಗ್ಯ ಲಭಿಸುತ್ತದೆ.


ಇದನ್ನೂ ಓದಿ-Mahashivratri 2023: ಕುಂಭ ಸೇರಿದಂತೆ ಈ ರಾಶಿಗಳ ಜನರ ಮೇಲೆ ಶಿವನ ಅಪಾರ ಕೃಪಾವೃಷ್ಠಿ, ಒಳ್ಳೆಯ ದಿನಗಳು ಆರಂಭ!


>> ಈ ದಿನ ಶಿವನಿಗೆ ಋತುಮಾನದ ಹಣ್ಣುಗಳನ್ನು ಅರ್ಪಿಸಿ. ಅದರಲ್ಲಿಯೂ ವಿಶೇಷವಾಗಿ ಶಿವನಿಗೆ ಬಾರಿ ಹಣ್ಣುಗಳನ್ನು ಅರ್ಪಿಸಲು ಮರೆಯದಿರಿ, ಏಕೆಂದರೆ ಈ ಹಣ್ಣುಗಳನ್ನು ಶಾಶ್ವತತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.


>> ಈ ದಿನ ಶಿವನ ಪೂಜೆಯಲ್ಲಿ ಕುಂಕುಮ ಬಳಸಬಾರದು. ಏಕೆಂದರೆ ಶಿವನ ಆರಾಧನೆಯಲ್ಲಿ ಕುಂಕುಮವನ್ನು ನಿಷೇಧಿಸಲಾಗಿದೆ. ಕುಂಕುಮದ ಬದಲಿಗೆ ನೀವು ಶ್ರೀಗಂಧವನ್ನು ಬಳಸಬಹುದು.


ಇದನ್ನೂ ಓದಿ-Budha Gochar 2023: ಶನಿಯ ರಾಶಿಯಲ್ಲಿ ಗ್ರಹಗಳ ರಾಜಕುಮಾರ, 3 ರಾಶಿಗಳ ಜನರಿಗೆ ಅಪಾರ ಧನಲಾಭ!


>> ಈ ದಿನ ಕಪ್ಪು ಬಟ್ಟೆಯನ್ನು ಧರಿಸಬಾರದು. ಏಕೆಂದರೆ ಜ್ಯೋತಿಷ್ಯದಲ್ಲಿ ಕಪ್ಪು ಬಟ್ಟೆಯನ್ನು ಪೂಜೆಯಲ್ಲಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಅದಕ್ಕಾಗಿಯೇ ನೀವು ಕೆಂಪು, ಬಿಳಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಬಹುದು.


>> ಈ ದಿನ ಶಿವನಿಗೆ ಅರ್ಪಿಸುವ ಪ್ರಸಾದವನ್ನು ಸ್ವೀಕರಿಸಬಾರದು. ಏಕೆಂದರೆ ಅದು ದುರಾದೃಷ್ಟವನ್ನು ತರುತ್ತದೆ. ಹೀಗೆ ಮಾಡುವುದರಿಂದ ಧನಹಾನಿ ಮತ್ತು ರೋಗಗಳು ಬರುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-48 ಗಂಟೆಗಳ ಬಳಿಕ ಶುಕ್ರ ಗೋಚರ, ಹಂಸ-ಮಾಲವ್ಯ ರಾಜಯೋಗಗಳ ಸೃಷ್ಟಿ, ಈ ಜನರಿಗೆ ಅಪಾರ ಧನ ಪ್ರಾಪ್ತಿ !


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.