Monsoon Hair Care Tips: ಮಳೆಗಾಲದಲ್ಲಿ ಕೂದಲ ಆರೈಕೆಗಾಗಿ ಈ 4 ಹೇರ್ ಮಾಸ್ಕ್‌ಗಳನ್ನು ಮನೆಯಲ್ಲಿಯೇ ತಯಾರಿಸಿ
Monsoon Hair Care Tips: ಯಾವುದೇ ಋತುಮಾನವಿರಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಹಾಗೆಯೇ, ಕೂದಲಿನ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ಬೇಕಾಗುತ್ತದೆ. ಇಲ್ಲದಿದ್ದರೆ, ಕೂದಲು ಶುಷ್ಕತೆ, ಜಿಗುಟುತನದಿಂದಾಗಿ ಹಾಳಾಗುತ್ತದೆ. ಇದಕ್ಕೆ ಮನ್ಸೂನ್ ಋತು ಕೂಡ ಹೊರತಾಗಿಲ್ಲ. ಮಾನ್ಸೂನ್ ನಲ್ಲಿಯೂ ಕೂದಲಿನ ಆರೈಕೆಗಾಗಿ ಸ್ಪೆಷಲ್ ಕೇರ್ ಬೇಕಾಗುತ್ತದೆ. ಇದಕ್ಕಾಗಿ, ನೀವು ಮನೆಯಲ್ಲಿಯೇ ಸುಲಭವಾಗಿ ಕೆಲವು ಹೇರ್ ಮಾಸ್ಕ್‌ಗಳನ್ನು ತಯಾರಿಸಬಹುದು.
Monsoon Hair Care Tips: ಮಳೆಗಾಲ ಎಂದರೆ ಮಳೆಯ ಆನಂದದ ಜೊತೆಗೆ ಕೂದಲಿನ ಹಾನಿಯ ಬಗ್ಗೆಯೂ ಕೆಲವರು ಚಿಂತಿತರಾಗುತ್ತಾರೆ. ಸಾಮಾನ್ಯವಾಗಿ, ಕೂದಲಿಗೆ ಎಣ್ಣೆ ಹಚ್ಚುವುದು, ಒಳ್ಳೆಯ ಶಾಂಪೂವಿನಿಂದ ಹೇರ್ ವಾಶ್ ಮಾಡುವುದನ್ನು ಎಲ್ಲರೂ ಮಾಡುತ್ತಾರೆ. ಆದರೆ, ಕೂದಲಿಗೆ ಬಾಹ್ಯ ಆರೈಕೆಯ ಜೊತೆಗೆ ಆಂತರಿಕ ಪೋಷಣೆಯ ಅಗತ್ಯವೂ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಮಾನ್ಸೂನ್‌ನಲ್ಲಿ ಈ ಬಗ್ಗೆ ಹೆಚ್ಚಿನ ಗಮನವಹಿಸುವುದು ಬಹಳ ಮುಖ್ಯ. ಇದಕ್ಕಾಗಿ, ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಕೆಲವು ಹೇರ್ ಮಾಸ್ಕ್‌ಗಳು ಕೂಡ ಪ್ರಯೋಜನಕಾರಿ ಆಗಿವೆ.
ಈ ಲೇಖನದಲ್ಲಿ ಮಾನ್ಸೂನ್‌ನಲ್ಲಿ ಹೇರ್ ಮಾಸ್ಕ್ ಬಳಕೆಯ ಪ್ರಾಮುಖ್ಯತೆ ಏನು? ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಹೇರ್ ಮಾಸ್ಕ್‌ಗಳು ಯಾವುವು? ಎಂಬ ಮಾಹಿತಿಗಳನ್ನು ತಿಳಿಯೋಣ...
ಮಾನ್ಸೂನ್‌ನಲ್ಲಿ ಹೇರ್ ಮಾಸ್ಕ್ ಏಕೆ ಅಗತ್ಯ?
ಮೊದಲೇ ತಿಳಿಸಿದಂತೆ ಕೂದಲಿಗೆ ಆಂತರಿಕ ಪೋಷಣೆ ಕೂಡ ಅತ್ಯಗತ್ಯ. ಅದರಲ್ಲೂ ವಿಶೇಷವಾಗಿ ಮಾನ್ಸೂನ್‌ನಲ್ಲಿ ಹೇರ್ ಮಾಸ್ಕ್‌ಗಳನ್ನು ಬಳಸುವುದರಿಂದ ಕೂದಲಿಗೆ ಆಂತರಿಕ ಪೋಷಣೆಯ ಜೊತೆಗೆ, ಇದು ಕೂದಲಿನ ಶುಷ್ಕತೆ ಮತ್ತು ಅತಿಯಾಗಿ ಸುಕ್ಕುಗಟ್ಟಿಕೊಳ್ಳುವುದನ್ನು ತಪ್ಪಿಸುತ್ತದೆ. ಮಾತ್ರವಲ್ಲ, ಕೂದಲು ಮೃದುವಾಗಿ ಕಾಂತಿಯುತವಾಗುತ್ತದೆ.
ಇದನ್ನೂ ಓದಿ- ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಬೇಕೆ? ಈ ಹೇಲ್ದಿ ಸ್ನ್ಯಾಕ್ಸ್ ನಿಮ್ಮ ಆಹಾರದಲ್ಲಿರಲಿ!
ಮಳೆಗಾಲದಲ್ಲಿ ಕೋಮಲ ಕೂದಲಿಗಾಗಿ ಸಹಾಯಕ ಈ ನಾಲ್ಕು ಬಗೆಯ ಹೋಮ್ ಮೇಡ್ ಹೇರ್ ಮಾಸ್ಕ್‌ಗಳು :
ಮೊಸರಿನ ಹೇರ್ ಮಾಸ್ಕ್:
ಒಂದು ಬಟ್ಟಲು ಮೊಸರಿನಲ್ಲಿ 1ಚಮಚ ಜೇನುತುಪ್ಪ,ವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮೊಸರಿನ ಹೇರ್ ಮಾಸ್ಕ್ ತಯಾರಿಸಿಕೊಳ್ಳಿ. ಬಳಿಕ ಕೂದಲನ್ನು ಸ್ವಲ್ಪ ಒದ್ದೆ ಮಾಡಿ ತಯಾರಿಸಿಟ್ಟ ಮಿಶ್ರಣವನ್ನು ಕೂದಲಿನ ಬುಡದಿಂದ ಅಪ್ಪ್ಲೈ ಮಾಡಿ. 30-40 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿರಿ.
ಮೊಟ್ಟೆ ಹೇರ್ ಮಾಸ್ಕ್:
ಈ ಹೇರ್ ಮಾಸ್ಕ್ ತಯಾರಿಸಲು ಒಂದು ಮೊಟ್ಟೆ ಒಡೆದು ಅದರಲ್ಲಿ ಅರ್ಧ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಮೊಟ್ಟೆ ಹೇರ್ ಮಾಸ್ಕ್ ತಯಾರಾಗುತ್ತದೆ. ಐದನು ಕೂದಲಿಗೆ ಅನ್ವಯಿಸಿ ಸುಮಾರು 40-45ನಿಮಿಷಗಳ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ. ಇದು ಕೂದಲನ್ನು ಮೃದುವಾಗಿಸುತ್ತದೆ.
ಬಾಳೆಹಣ್ಣಿನ ಹೇರ್ ಮಾಸ್ಕ್:
ಒಂದು ಚೆನ್ನಾಗಿ ಕಳೆತಿರುವ ಬಾಳೆಹಣ್ಣನ್ನು ತೆಗೆದುಕೊಂಡು ಫುಲ್ ಮ್ಯಾಶ್ ಮಾಡಿ. ನಂತರ ಇರದಲ್ಲಿ ಒಂದು ಸ್ಪೂನ್ ಮೊಸಲು, 1 ಚಮಚ ಜೇನುತುಪವನ್ನು ಬೆರೆಸಿ ಮಿಶ್ರಣ ಮಾಡಿದರೆ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಾಗುತ್ತದೆ. ಇದನ್ನು ಕೂದಲಿಗೆ ಅಪ್ಪ್ಲೈ ಮಾಡಿ 15-20 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ. ಈ ಹೇರ್ ಮಾಸ್ಕ್ ನಿಮ್ಮ ಕೂಡಲಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.
ಇದನ್ನೂ ಓದಿ- ನೀವೂ ದಿನವಿಡೀ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತೀರಾ? ಈ ಸುದ್ದಿ ನಿಮಗಾಗಿ!
ಅಲೋವೆರಾ ಹೇರ್ ಮಾಸ್ಕ್:
ಈ ಹೇರ್ ಮಾಸ್ಕ್ ತಯಾರಿಸಲು ಮೊದಲು ಒಂದೆರಡು ಚಮಚ ಅಲೋವೆರಾ ಜೆಲ್ ತೆಗೆದುಕೊಂಡು ಇದರಲ್ಲಿ ಆಲೂಗೆಡ್ಡೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ, ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸುಮಾರು 30 ನಿಮಿಷಗಳು ಹಾಗೆ ಬಿಟ್ಟು ನಂತರ ಹೇರ್ ವಾಶ್ ಮಾಡಿ. ಇದರಿಂದ ತಲೆಹೊಟ್ಟು, ಕೂದಲು ಉದುರುವಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.