ಬೆಂಗಳೂರು : ಸರಳ ಚಂದ್ರಗುಪ್ತನನ್ನು ಭಾರತದ ಚಕ್ರವರ್ತಿಯನ್ನಾಗಿ ಮಾಡಿದ ಆಚಾರ್ಯ ಚಾಣಕ್ಯನ ನೀತಿಗಳು ಜೀವನದ ಪ್ರತಿ ತಿರುವಿನಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದರೊಂದಿಗೆ, ಪ್ರೀತಿಯ ವಿಷಯದಲ್ಲಿ ಎಂದಿಗೂ ವಿಫಲವಾಗದ  ಪುರುಷರ ಬಗ್ಗೆಯೂ ಹೇಳಲಾಗಿದೆ.  ಮಾತ್ರವಲ್ಲಾ ಯಾವ ಪುರುಷರು ತಮ್ಮ ಸಂಗಾತಿಗೆ ಉತ್ತಮ ಪತಿ ಎಂದು ಸಾಬೀತಾಗುತ್ತಾರೆ ಎನ್ನುವುದನ್ನು ಕೂಡಾ ಹೇಳಲಾಗಿದೆ. ಆಚಾರ್ಯ ಚಾಣಕ್ಯರು ಪ್ರೀತಿಯ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಈ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿ ಸಿಕೊಂಡರೆ, ಸಂಬಂಧವನ್ನು ಗಟ್ಟಿಯಾಗಿರುವಂತೆ  ನೋಡಿಕೊಳ್ಳಬಹುದು. ಪ್ರೀತಿ ಮತ್ತು ಮದುವೆಯಂತಹ ಸಂಬಂಧಗಳಲ್ಲಿ ಯಶಸ್ವಿಯಾಗುವ ಪುರುಷರ ಬಗ್ಗೆಯೂ ಚಾಣಾಕ್ಯ ನೀತಿಯಲ್ಲಿ ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಸ್ತ್ರೀಯರನ್ನು ಗೌರವಿಸುವುದು : 
ಪ್ರತಿಯೊಬ್ಬ ಮಹಿಳೆಯನ್ನು ಗೌರವದಿಂದ ಕಾಣುವ, ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ಯಾವ ವ್ಯಕ್ತಿ ತನ್ನ ಹೆಂಡತಿ, ತಾಯಿ ಮತ್ತು ಗೆಳತಿಯನ್ನು ಯಾವಾಗಲೂ ಗೌರವದಿಂದ ಕಾಣುತ್ತಾನೆಯೋ ಆ ವ್ಯಕ್ತಿ ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅಲ್ಲದೆ, ಆ ವ್ಯಕ್ತಿಯು ಪ್ರೀತಿ ಮತ್ತು ಸಂಬಂಧಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾನೆ. ಅಂತಹ ಪುರುಷನನ್ನು ಮದುವೆಯಾಗುವ ಮಹಿಳೆಯರು ಎಂದಿಗೂ ಅತೃಪ್ತರಾಗುವುದಿಲ್ಲ. 


ಇದನ್ನೂ ಓದಿ : Name Astrology : ಈ ಅಕ್ಷರದ ಹುಡುಗಿಯರಿಗೆ ಮದುವೆಯಾದ ಮೇಲೆ ಲಕ್ಕಿ ಲಾಟರಿ, ಅತ್ತೆ ಮನೆಗೆ ಅದೃಷ್ಟ ಲಕ್ಷ್ಮಿ!


 ಪರ ಸ್ತ್ರೀಯರ  ಮೇಲೆ ಕೆಟ್ಟ ದೃಷ್ಟಿ ಹಾಕದವನು :
ಜೀವನದಲ್ಲಿ ಸದ್ಗುಣವೇ ಪ್ರಧಾನ. ಈ ಗುಣವಿರುವ ವ್ಯಕ್ತಿ,  ತನ್ನ ಸಂಬಂಧದಲ್ಲಿ ಯಾವತ್ತೂ ಸೋಲುವುದಿಲ್ಲ. ತನ್ನ ಪತ್ನಿಯನ್ನು ಬಿಟ್ಟು ಬೇರೆ ಯಾವ ಹೆಣ್ಣನ್ನೂ ಕಾಮ ದೃಷ್ಟಿಯಿಂದ ನೋಡದ ವ್ಯಕ್ತಿ , ಹೊರಗಿನ ಮಹಿಳೆಯತ್ತ ಆಕರ್ಷಿತನಾಗುವುದೇ ಇಲ್ಲ. ಅವನು ತನ್ನ ಸಂಬಂಧವನ್ನು ಉಳಿಸಲು ಏನು ಬೇಕಾದರೂ ಮಾಡುತ್ತಾನೆ. 


ನಮಗೆ ಸಮನಾಗಿರುವವರ ಜೊತೆ ಸಂಬಂಧ :
ಆಚಾರ್ಯರ ಪ್ರಕಾರ, ನಿಮಗೆ ಸಮಾನವಾದ ವ್ಯಕ್ತಿಯೊಂದಿಗಿನ ಪ್ರೀತಿ-ಸಂಬಂಧವು ಸುಂದರವಾಗಿರುತ್ತದೆ. ಇಲ್ಲವಾದರೆ ಅಸಮಾನತೆಯಾ ಬಗ್ಗೆ  ಯಾವತ್ತಾದರೊಂದು ದಿನ ಮಾತು ಬಂದೇ  ಬರುತ್ತದೆ.   ಹೀಗಾದಾಗ ಪ್ರೀತಿ ದ್ವೇಷವಾಗಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಈ ಬಗ್ಗೆ ಮುಂಚಿತವಾಗಿಯೇ ಕಾಳಜಿಯನ್ನು ತೆಗೆದುಕೊಳ್ಳಬೇಕು. 


ಇದನ್ನೂ ಓದಿ : Vastu Tips ಮನೆಯ ಈ ದಿಕ್ಕಿಗೆ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿದರೆ ಅಪಾರ ಸಂಪತ್ತು ನಿಮ್ಮದಾಗಲಿದೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a