ಬೆಂಗಳೂರು : Mango Shake Side Effects : ಪ್ರತಿಯೊಬ್ಬರೂ ಬೇಸಿಗೆಯಲ್ಲಿ ಮಾವು ತಿನ್ನಲು ಇಷ್ಟಪಡುತ್ತಾರೆ. ಕೆಲವರು ಮಾವಿನ ಹಣ್ಣನ್ನು ಹಾಗೇ ತಿಂದರೆ ಇನ್ನು ಕೆಲವರು ಅದನ್ನು ಶೇಕ್ ರೂಪದಲ್ಲಿ ಸೇವಿಸುತ್ತಾರೆ. ಆದರೆ, ಮ್ಯಾಂಗೋ ಶೇಕ್ ಅನ್ನು ಅತಿಯಾಗಿ ಸೇವಿಸುವುದರಿಂದ   ಆರೋಗ್ಯಕ್ಕೂ ಹಾನಿಯಾಗಬಹುದು.   ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ. ಹಾಗೆಯೇ ತಿನ್ನಲು , ಕುಡಿಯಲು ರುಚಿ ಎಂಬ ಕಾರಣಕ್ಕೆ ಮ್ಯಾಂಗೋ ಶೇಕ್ ಅನ್ನು ಅತಿ ಹೆಚ್ಚು ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.  ಮ್ಯಾಂಗೋ ಶೇಕ್ ಅನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಹಾನಿ ಏನು ಎಂಬುದರ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಮ್ಯಾಂಗೋ ಶೇಕ್ ಅನಾನುಕೂಲಗಳು :
ಮ್ಯಾಂಗೋ ಶೇಕ್ ಅನ್ನು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಶಾಖದ ಮಟ್ಟ ಹೆಚ್ಚಾಗಬಹುದು. ಏಕೆಂದರೆ ಮ್ಯಾಂಗೋ ಶೇಕ್ ನ ಪ್ರಕೃತಿ ಉಷ್ಣವಾಗಿರುತ್ತದೆ. ಈ ಕಾರಣದಿಂದಾಗಿ ಬೇಸಿಗೆಯಲ್ಲಿ ಮ್ಯಾಂಗೋ ಶೇಕ್ ಅನ್ನು ಅತಿಯಾಗಿ ಸೇವಿಸಬಾರದು ಎನ್ನಲಾಗುತ್ತದೆ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕೂಡಾ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಕಾರಕವಾಗಿರಲಿದೆ. 


ಇದನ್ನೂ ಓದಿ : ಹೈ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ನೈಸರ್ಗಿಕ ವಿಧಾನಗಳನ್ನೊಮ್ಮೆ ಟ್ರೈ ಮಾಡಿ...


ಮ್ಯಾಂಗೋ ಶೇಕ್‌ನ ಅತಿಯಾದ ಸೇವನೆಯಿಂದ ತೂಕ ಹೆಚ್ಚಾಗಬಹುದು. ಏಕೆಂದರೆ ಇದರೊಳಗೆ ಕ್ಯಾಲೋರಿಗಳ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.


ಮ್ಯಾಂಗೋ ಶೇಕ್ ಅನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡರೆ ವ್ಯಕ್ತಿಯು ವಾಂತಿ, ಅತಿಸಾರ, ವಾಕರಿಕೆ ಇತ್ಯಾದಿ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. 


ಲೆಕ್ಕಕ್ಕಿಂತ ಹೆಚ್ಚು ಮ್ಯಾಂಗೋ ಶೇಕ್ ಕುಡಿಯುವುದರಿಂದ ಅಲರ್ಜಿಯ ಸಮಸ್ಯೆಯೂ ಉಂಟಾಗುತ್ತದೆ. ಕೆಲವರಿಗೆ ತುರಿಕೆ, ದದ್ದು ಇತ್ಯಾದಿ ಸಮಸ್ಯೆಗಳು ತಲೆದೋರಬಹುದು. 


ಇದನ್ನೂ ಓದಿ : Cold Water Side Effects: ಬೇಸಿಗೆಯಲ್ಲಿ ಕೋಲ್ಡ್ ನೀರು ಕುಡಿಯುವುದರಿಂದ ಎದುರಾಗಲಿದೆ ಹೃದಯದ ಸಮಸ್ಯೆ


ಮೇಲೆ ತಿಳಿಸಿದ ಅಂಶಗಳು ಯಾವುದನ್ನಾದರೂ ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ತೋರಿಸುತ್ತದೆ. ಹಾಗಾಗಿ, ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಶೇಕ್ ಅನ್ನು ಸೇವಿಸುವುದನ್ನು ತಪ್ಪಿಸಿ.


( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.