ನವದೆಹಲಿ : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ (Palmsitry), ಅಂಗೈಯ ವಿವಿಧ ರೇಖೆಗಳು ಮತ್ತು ವಿಶೇಷ ಚಿಹ್ನೆಗಳು ಜೀವನದ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸುತ್ತವೆ. ಅದೃಷ್ಟದ ರೇಖೆಯು ಅದೃಷ್ಟದ ಬಗ್ಗೆ ಮತ್ತು ವಯಸ್ಸಿನ ರೇಖೆಯು ವಯಸ್ಸಿನ ಬಗ್ಗೆ ಹೇಳುವಂತೆಯೇ ವಿವಾಹ ರೇಖೆಯು ಕೂಡಾ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತೆ ಅನೇಕ ವಿಷಯಗಳನ್ನು ಹೇಳುತ್ತವೆ (Marriage line on hand). ಈ ರೇಖೆಯ ಮೂಲಕ ವಿವಾಹದ ನಂತರ ಪತಿ ಪತ್ನಿ ಹೇಗಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು. 
 
ವಿವಾಹ ರೇಖೆ ಹೇಗಿದ್ದರೆ ಜೀವನ ಸುಖಮಯ : 
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ (palmistry), ಮದುವೆಯ ರೇಖೆಯ ಸಂಖ್ಯೆ ಮತ್ತು ಅದರ ಗಾತ್ರವು ವೈವಾಹಿಕ ಜೀವನದ (Married life)ಬಗ್ಗೆ ಬಹಳಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಒಬ್ಬ ಪುರುಷನು ತನ್ನ ಅಂಗೈಯಲ್ಲಿ ಒಂದೇ ವಿವಾಹ ರೇಖೆಯನ್ನು ಹೊಂದಿದ್ದರೆ, ಅವನು ಉತ್ತಮ ಹೆಂಡತಿಯನ್ನು ಪಡೆಯುತ್ತಾನೆ. ಅಲ್ಲದೆ, ಅಂತಹವರ ಪತ್ನಿಯು ಅವರನ್ನು ಬಹಳವಾಗಿ ಪ್ರೀತಿಸುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ :  Anklet: ಮದುವೆಗೂ ಮುನ್ನ ಕಾಲ್ಗೆಜ್ಜೆ ಧರಿಸುವುದು ಸರಿಯೋ ತಪ್ಪೋ!


ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಎರಡೂ ಅಂಗೈಗಳ ಮದುವೆಯ ರೇಖೆಯ ಉದ್ದವು ಒಂದೇ ರೀತಿ ಆಗಿದ್ದರೆ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಶುಭ ಲಕ್ಷಣಗಳನ್ನು ಹೊಂದಿರುತ್ತಾರೆ (Marriage line on hand). ಅವರ ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ. 


ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯ ಮದುವೆಯ ರೇಖೆಯು ಮೇಲಕ್ಕೆ ಬಾಗಿ, ಕಿರುಬೆರಳನ್ನು ತಲುಪಿದರೆ, ವೈವಾಹಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ (marriage line in hand femal). ಇದಲ್ಲದೆ, ಅಂತಹ ಜನರ ವೈವಾಹಿಕ ಜೀವನವು ಬಹಳ ಕಷ್ಟಗಳಿಂದ ಕೂಡಿರುತ್ತದೆ. 


ಇದನ್ನೂ ಓದಿ :  Mahashivratri 2022: ಮಹಾಶಿವರಾತ್ರಿಯ ದಿನ ನಿರ್ಮಾಣಗೊಳ್ಳುತ್ತಿದೆ ಗ್ರಹ-ನಕ್ಷತ್ರಗಳ ಈ ಶುಭ ಯೋಗ


ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಮದುವೆಯ ರೇಖೆಯ ಕೆಳಗಿನ ಭಾಗದಲ್ಲಿ ತ್ರಿಶೂಲದ ಚಿಹ್ನೆಯಿದ್ದರೆ ಅದು ಮಂಗಳಕರ. ಇದನ್ನು ಅಂಗೈಯಲ್ಲಿ ಹೊಂದಿರುವವರು ತಮ್ಮ ಸಂಗಾತಿಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ. 


ಲಂಬ ರೇಖೆಯು ಮದುವೆಯ ರೇಖೆಯನ್ನು ಕತ್ತರಿಸಿದರೆ, ಮದುವೆಯಲ್ಲಿ ವಿಳಂಬ ಮತ್ತು ವೈವಾಹಿಕ ಜೀವನದಲ್ಲಿ ಅಡತಡೆಗಳು ಎದುರಾಗುತ್ತವೆ. ಮತ್ತೊಂದೆಡೆ, ಮದುವೆಯ ರೇಖೆಯು ಮೇಲಕ್ಕೆ ಬಾಗಿದ್ದರೆ, ದಾಂಪತ್ಯ ಜೀವನದಲ್ಲಿ ಸಂತೋಷವಿರುವಿದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.