Anklet: ಮದುವೆಗೂ ಮುನ್ನ ಕಾಲ್ಗೆಜ್ಜೆ ಧರಿಸುವುದು ಸರಿಯೋ ತಪ್ಪೋ!

Anklet: ಮೊದಲೆಲ್ಲಾ ಹೆಣ್ಣುಮಕ್ಕಳು ಮದುವೆಯ ನಂತರವೇ ಕಾಲ್ಗೆಜ್ಜೆ ಧರಿಸುವ ಸಂಪ್ರದಾಯವಿತ್ತು. ಆದರೆ, ಬದಲಾಗುತ್ತಿರುವ ಫ್ಯಾಷನ್ ನಿಂದಾಗಿ ಈಗ ಕೆಲವು ಹುಡುಗಿಯರು ಮದುವೆಗೂ ಮುನ್ನವೇ ಕಾಲ್ಗೆಜ್ಜೆ ಧರಿಸುತ್ತಾರೆ. ಈ ರೀತಿ ಮಾಡುವುದು ಸರಿಯೋ ಅಥವಾ ತಪ್ಪೋ ಎಂಬ ಗೊಂದಲವೂ ಹಲವರಲ್ಲಿದೆ.

Written by - Yashaswini V | Last Updated : Feb 28, 2022, 01:09 PM IST
  • ಮದುವೆಗೂ ಮುನ್ನ ಕಾಲ್ಗೆಜ್ಜೆ ಧರಿಸುತ್ತೀರಾ?
  • ಇದು ಸರಿಯೋ ಅಥವಾ ತಪ್ಪೋ?
  • ಕಾಲ್ಗೆಜ್ಜೆ ಧರಿಸುವುದರ ಹಿಂದಿನ ವೈಜ್ಞಾನಿಕ ಕಾರಣದ ಬಗ್ಗೆ ತಿಳಿದಿದೆಯೇ?
Anklet: ಮದುವೆಗೂ ಮುನ್ನ ಕಾಲ್ಗೆಜ್ಜೆ ಧರಿಸುವುದು ಸರಿಯೋ ತಪ್ಪೋ! title=
Scientific reason for wear Anklet

Anklet:  ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಮದುವೆಯ ನಂತರವೇ ಕಾಲ್ಗೆಜ್ಜೆ ಧರಿಸುವ ಸಂಪ್ರದಾಯವಿತ್ತು. ಆದರೆ ಈಗಿನ ಹುಡುಗಿಯರು ಮದುವೆಗೂ ಮುನ್ನವೇ ಕಾಲ್ಗೆಜ್ಜೆ ಧರಿಸುತ್ತಾರೆ. ವಾಸ್ತವವಾಗಿ, ಭಾರತೀಯ ಸಂಪ್ರದಾಯಗಳಲ್ಲಿ ಕಾಲ್ಗೆಜ್ಜೆ ಧರಿಸುವುದು ಮುಖ್ಯ. ಅದರ ಹಿಂದೆ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ವೈಜ್ಞಾನಿಕ ಕಾರಣವೂ ಇದೆ. ಕಾಲ್ಗೆಜ್ಜೆ ಧರಿಸುವುದರ ವೈಜ್ಞಾನಿಕ ಕಾರಣ ತಿಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ.

ಕಾಲ್ಗೆಜ್ಜೆ ಧರಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ:
ಮಾಧ್ಯಮ ವರದಿಗಳ ಪ್ರಕಾರ, ಕಾಲ್ಗೆಜ್ಜೆ (Anklet) ಅನ್ನು ಮುತ್ತೈದೆಯ ಆಭರಣಗಳಲ್ಲಿ ಒಂದು ಎಂದು ನಂಬಲಾಗಿದೆ, ಆದರೆ ಇದಕ್ಕೆ ವೈಜ್ಞಾನಿಕ ಕಾರಣ ಸಾಕಷ್ಟು ಆಶ್ಚರ್ಯಕರವಾಗಿದೆ. ವಾಸ್ತವವಾಗಿ, ಕಾಲುಗಳಲ್ಲಿ ಗೆಜ್ಜೆಯನ್ನು ಧರಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅದೇನೆಂದರೆ, ಮದುವೆಯ ನಂತರ ಹೆಂಗಸರು ಕಾಲ್ಗೆಜ್ಜೆ ಧರಿಸಬೇಕು ಎಂಬ ಧಾರ್ಮಿಕ ನಂಬಿಕೆ ಇದ್ದರೂ ಅವಿವಾಹಿತ ಹೆಣ್ಣುಮಕ್ಕಳು ಕೂಡ ಹೀಗೆ ಧರಿಸಬಹುದು. ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.

ಇದನ್ನೂ ಓದಿ- ಸದಾ ಗೆಲ್ಲುವ ತವಕದಲ್ಲಿರುತ್ತಾರೆ ಈ ನಾಲ್ಕು ರಾಶಿಯವರು ..! ನಿಮ್ಮ ರಾಶಿ ಇದರಲ್ಲಿದೆಯೇ ?

ಕಾಲ್ಗೆಜ್ಜೆ ಧರಿಸುವುದರಿಂದ ಮೂಳೆಗಳು ಹೇಗೆ ಬಲಗೊಳ್ಳುತ್ತವೆ ಎಂಬುದನ್ನು ತಿಳಿಯಿರಿ :
ವಾಸ್ತವವಾಗಿ, ಕಾಲುಗಳಿಗೆ ಧರಿಸಲಾಗುವ ಗೆಜ್ಜೆಯು ಚರ್ಮದ ಮೂಲಕ ಅದರ ಅಂಶಗಳು ಮೂಳೆಗಳನ್ನು (Bone)  ಬಲಪಡಿಸುತ್ತವೆ ಎಂದು ನಂಬಲಾಗಿದೆ. ಇದಲ್ಲದೆ, ಗರ್ಭಾವಸ್ಥೆಯಲ್ಲಿ ಮಹಿಳೆಯ ಪಾದಗಳು ಊದಿಕೊಳ್ಳದಂತೆ ತಡೆಯಲು ಇದು ಸಹಾಯಕವಾಗಿದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- Mahashivratri: ಮಹಾಶಿವರಾತ್ರಿಯಂದು ಈ ಬಣ್ಣದ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿದರೆ ಸಿಗುತ್ತೆ ಅದ್ಭುತ ಫಲ

ಕಾಲ್ಗೆಜ್ಜೆ ಧರಿಸುವುದರ ಪ್ರಾಯೋಜನ:
ಇದಲ್ಲದೆ, ಕಾಲ್ಗೆಜ್ಜೆ ಧರಿಸುವುದರಿಂದ ಮಹಿಳೆಯರ ಪಾದದಲ್ಲಿ ಸಂಗ್ರಹವಾಗುವ ಕೊಬ್ಬನ್ನು ನಿಯಂತ್ರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಇದನ್ನು ಧರಿಸುವುದರಿಂದ ಮಹಿಳೆಯರ ಇಚ್ಛಾಶಕ್ತಿ ಬಲಗೊಳ್ಳುತ್ತದೆ ಎಂದೂ ಸಹ ಹೇಳಲಾಗುತ್ತದೆ.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ.  Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News