Mahashivratri 2022: ಮಹಾಶಿವರಾತ್ರಿಯ ದಿನ ನಿರ್ಮಾಣಗೊಳ್ಳುತ್ತಿದೆ ಗ್ರಹ-ನಕ್ಷತ್ರಗಳ ಈ ಶುಭ ಯೋಗ

Mahashivratri 2022: ನಾಳೆ ಅಂದರೆ ಮಾರ್ಚ್ 1 ರಂದು ಮಹಾಶಿವರಾತ್ರಿಯ ಮಹಾಪರ್ವ (Maha Shivratri 2022) ಆಚರಿಸಲಾಗುತ್ತಿದೆ. ವಿಶೇಷವೆಂದರೆ ಈ ವರ್ಷ ಮಹಾಶಿವರಾತ್ರಿಯಂದು ಗ್ರಹ-ನಕ್ಷತ್ರಗಳ ಶುಭ ಸಂಯೋಜನೆ (Auspicious Combinations Of Planet) ನೆರವೇರಲಿದೆ. 

Written by - Nitin Tabib | Last Updated : Feb 28, 2022, 01:46 PM IST
  • ಮಾರ್ಚ್ 1 ರಂದು ಮಹಾಶಿವರಾತ್ರಿ ಆಚರಿಸಲಾಗುತ್ತಿದೆ
  • ಈ ಬಾರಿ ಗ್ರಹ-ನಕ್ಷತ್ರಗಳ ಶುಭ ಸಂಯೋಜನೆ ನೆರವೇರಲಿದೆ
  • ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ
Mahashivratri 2022: ಮಹಾಶಿವರಾತ್ರಿಯ ದಿನ ನಿರ್ಮಾಣಗೊಳ್ಳುತ್ತಿದೆ ಗ್ರಹ-ನಕ್ಷತ್ರಗಳ ಈ ಶುಭ ಯೋಗ  title=
Mahashivratri 2022 (File Photo)

Mahashivratri 2022: ನಾಳೆ ಅಂದರೆ ಮಾರ್ಚ್ 1 ರಂದು ಮಹಾಶಿವರಾತ್ರಿಯ ಮಹಾಪರ್ವ (Maha Shivratri 2022) ಆಚರಿಸಲಾಗುತ್ತಿದೆ. ವಿಶೇಷವೆಂದರೆ ಈ ವರ್ಷ ಮಹಾಶಿವರಾತ್ರಿಯಂದು ಗ್ರಹ-ನಕ್ಷತ್ರಗಳ ಶುಭ ಸಂಯೋಜನೆ (Auspicious Combinations Of Planet) ನೆರವೇರಲಿದೆ. ಜ್ಯೋತಿಷಿಗಳ (Astrology) ಪ್ರಕಾರ, ಮಹಾಶಿವರಾತ್ರಿಯಂದು ಶಿವಯೋಗದೊಂದಿಗೆ ಧನಿಷ್ಟಾ ನಕ್ಷತ್ರವಿರಲಿದೆ ಮತ್ತು ಚಂದ್ರನು ಮಕರ ರಾಶಿಯಲ್ಲಿ ಸಂಜೆ 04:32 ರವರೆಗೆ ಮತ್ತು ನಂತರ ಕುಂಭದಲ್ಲಿ ಇರುತ್ತಾನೆ. ಧನಿಷ್ಠಾ ನಕ್ಷತ್ರವು ಮಾರ್ಚ್ 2 ರಂದು ಬೆಳಿಗ್ಗೆ 03:48 ರವರೆಗೆ ಇರುತ್ತದೆ. ಮಾರ್ಚ್ 1 ರಂದು ಅಂದರೆ ಮಹಾಶಿವರಾತ್ರಿಯ ದಿನದಂದು ಬೆಳಗ್ಗೆ 11:18 ಕ್ಕೆ ಶಿವಯೋಗ ನಡೆಯಲಿದೆ. ಮಹಾಶಿವರಾತ್ರಿಯ ದಿನ ಶಾಸ್ತ್ರೋಕ್ತವಾಗಿ ಶಿವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಶಿವನಿಗಾಗಿ ಉಪವಾಸವನ್ನು ಆಚರಿಸುವವರಿಗೆ ಅದೃಷ್ಟ, ಸಮೃದ್ಧಿ ಮತ್ತು ಸಂತಾನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಮಹಾಶಿವರಾತ್ರಿ 2022 ಶುಭ ಸಮಯ (Mahashivratri 2022 Date And Time)
ಚತುರ್ದಶಿ ತಿಥಿ ಪ್ರಾರಂಭ - ಮಾರ್ಚ್ 01, 2022 ರಂದು 03:16 AM
ಚತುರ್ದಶಿ ತಿಥಿ ಮುಕ್ತಾಯ - ಮಾರ್ಚ್ 02, 2022 ರಂದು 01:00 AM.
ರಾತ್ರಿ ಪ್ರಥಮ ಹೊತ್ತಿನ ಪೂಜೆ ಸಮಯ - 06:21 PM ರಿಂದ 09:27 PM
ರಾತ್ರಿ ದ್ವಿತೀಯ ಹೊತ್ತಿನ ಪೂಜೆ ಸಮಯ- 09:27 PM ರಿಂದ 12:33 AM, ಮಾರ್ಚ್ 02
ರಾತ್ರಿ ತೃತೀಯ ಹೊತ್ತಿನ ಪೂಜಾ ಸಮಯ - 12:33 AM ನಿಂದ 03:39 AM, ಮಾರ್ಚ್ 02
ರಾತ್ರಿ ಚತುರ್ಥ ಹೊತ್ತಿನ ಪೂಜಾ ಸಮಯ - 03:39 AM ನಿಂದ 06:45 AM, ಮಾರ್ಚ್ 02.

ಇದನ್ನೂ ಓದಿ-ಸದಾ ಗೆಲ್ಲುವ ತವಕದಲ್ಲಿರುತ್ತಾರೆ ಈ ನಾಲ್ಕು ರಾಶಿಯವರು ..! ನಿಮ್ಮ ರಾಶಿ ಇದರಲ್ಲಿದೆಯೇ ?

ಮಹಾಶಿವರಾತ್ರಿ 2022 ಉಪವಾಸ ಸಮಯ (Mahashivratri 2022 Fasting Time)
ದೇವಾದಿ ದೇವ  ಶಿವನಿಗೆ ಸಮರ್ಪಿತವಾದ ಮಹಾಶಿವರಾತ್ರಿ ಉಪವಾಸವನ್ನು ಮಾರ್ಚ್ 2 ರಂದು ಬೆಳಗ್ಗೆ 06:45 ರ ನಂತರ ಮುರಿಯಬಹುದು.

ಇದನ್ನೂ ಓದಿ-Mahashivratri: ಮಹಾಶಿವರಾತ್ರಿಯಂದು ಈ ಬಣ್ಣದ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿದರೆ ಸಿಗುತ್ತೆ ಅದ್ಭುತ ಫಲ

ಮಹಾಶಿವರಾತ್ರಿಯ ಮಹತ್ವ (Mahashivratri 2022 Importance)
ಮಹಾಶಿವರಾತ್ರಿಯ ದಿನದಂದು ಶಿವನನ್ನು ಪೂಜಿಸುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಬಯಸಿದ ವರ ಪಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಶಿವನ ಕೃಪೆಯಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ.

ಇದನ್ನೂ ಓದಿ-ಭೂಮಿಗೆ ಭಾರ ಎನ್ನುವಂತಿರುತ್ತಾರೆ ಇಂಥಹ ಜನರು, ಇವರೊಂದಿಗೆ ಬೆರೆತರೆ ನಿಮ್ಮ ಜೀವನವು ಹಾಳಾದೀತು ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News